Aishwarya Rai : ಯಾರಿಗೂ ಸಿಗದ ಅದೃಷ್ಟ ಐಶ್ವರ್ಯ ರೈ ಪುತ್ರಿಗೆ ಸಿಕ್ತಂತೆ..!!! ಏನದು,,??
ಕಲ್ಕಿ ಕೃಷ್ಣಮೂರ್ತಿ ಅವರ ‘ಪೊನ್ನಿಯಿನ್ ಸೆಲ್ವನ್’ ಕಾದಂಬರಿಯನ್ನು ಆಧರಿಸಿ, ಬರುತ್ತಿರುವ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ 1 ಸಿನಿಮಾ ಸೆಪ್ಟೆಂಬರ್ 20 ರಂದು ರಿಲೀಸ್ ಆಗಲಿದೆ.. ಈ ಸಿನಿಮಾದಲ್ಲಿ ಚಿಯಾನ್ ವಿಕ್ರಮ್, ಕಾರ್ತಿ, ತ್ರಿಷಾ ಮತ್ತು ಜಯಂ ರವಿಯಂತಹ ತಾರೆಯರ ಜೊತೆ ನಟಿಸುತ್ತಿದ್ದಾರೆ.
ಎರಡು ಭಾಗಗಳಲ್ಲಿ ಬರುತ್ತಿರುವ ಈ ಚಿತ್ರಕ್ಕೆ ಆರಂಭದಿಂದಲೂ ಭಾರೀ ನಿರೀಕ್ಷೆ ಹುಟ್ಟಿಸಿದೆ. ನಂತರ ಬಿಡುಗಡೆಯಾದ ಪೋಸ್ಟರ್, ಟೀಸರ್ ಮತ್ತು ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಸರಣಿಯ ಮೊದಲ ಭಾಗ ಸೆಪ್ಟೆಂಬರ್ 30 ರಂದು ತೆರೆಗೆ ಬರಲಿದೆ.
ಚಿತ್ರತಂಡ ಬಿಡುಗಡೆ ಮುನ್ನ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಐಶ್ವರ್ಯಾ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
“ನನ್ನ ಮಗಳು ಆರಾಧ್ಯ ಒಮ್ಮೆ ಈ ಸಿನಿಮಾದ ಸೆಟ್‌ಗೆ ಬಂದಿದ್ದಳು. ಆ ಸೆಟ್ ನೋಡಿ ನನಗೆ ತುಂಬಾ ಆಶ್ಚರ್ಯವಾಯಿತು. ಅಷ್ಟರಲ್ಲಿ ಮಣಿರತ್ನಂ ಸರ್ ಕರೆ ಮಾಡಿ ಆರಾಧ್ಯಗೆ ಸೀನ್‌ಗೆ ಕಟ್ ಮಾಡಲು ಅವಕಾಶ ಕೊಟ್ಟರು. ಮಣಿರತ್ನಂ ಸರ್ ಸೀನ್ ಕಟ್ ಮಾಡುವ ಅವಕಾಶವನ್ನು ಬೇರೆಯವರಿಗೆ ನೀಡುತ್ತಿರುವುದು ಇದೇ ಮೊದಲು. ಅದರಿಂದ ಎಲ್ಲರಿಗೂ ಆಶ್ಚರ್ಯವಾಯಿತು.” ನನಗೂ ಮಗಳಿಗೂ ಇದು ಜೀವಮಾನವಿಡೀ ಅದ್ಬುತ ನೆನಪಾಗಿ ಉಳಿಯುತ್ತೆ” ಎಂದು ತುಂಬಾ ಖುಷಿಯಿಂದ ಹೇಳಿಕೊಂಡಿದ್ದಾರೆ.
ಮಣಿರತ್ನಂ ನಿರ್ದೇಶನದಲ್ಲಿ ಇದು ಐಶ್ವರ್ಯ ನಾಲ್ಕನೇ ಬಾರಿ ನಟಿಸುತ್ತಿದ್ದಾರೆ. ಹಿಂದಿನ ಮೂರು ಚಿತ್ರಗಳೂ ಸಹ ಯಶಸ್ವಿಯಾಗಿದ್ದವು. ಭಾರೀ ನಿರೀಕ್ಷೆಗಳ ನಡುವೆ ತೆರೆಕಾಣುತ್ತಿರುವ ಈ ಚಿತ್ರವೂ ಯಶಸ್ವಿಯಾಗಲಿದೆ ಎಂಬ ವಿಶ್ವಾಸದಲ್ಲಿ ಇಡೀ ಚಿತ್ರತಂಡ ಇದೆ.