BBK 9 : ಕಮಲಿ ಖ್ಯಾತಿಯ ಅಮೂಲ್ಯಗೆ ಒಳ್ಳೆ ಹುಡುಗ ಪ್ರಥಮ್ ಕಂಡ್ರೆ ಆಗೋದಿಲ್ವಂತೆ..?? ಯಾಕೆ..??
ಮತ್ತೊಮ್ಮೆ ಟಿವಿ ಬಿಗ್ ಬಾಸ್ ಆರಂಭವಾಗಿದೆ.. ಸೀಸನ್ 9 ಕ್ಕೆ 18 ಕಂಟೆಸ್ಟೆಂಟ್ ಗಳು ಮನೆ ಸೇರಿದ್ದಾರೆ.. ಎಲ್ಲರದ್ದೂ ವಿಭಿನ್ನ ವ್ಯಕ್ತಿತ್ವ.. ಅಂದ್ಹಾಗೆ ಈ ಬಾರಿ 18 ಸ್ಪರ್ಧಿಗಳ ಪೈಕಿ ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯ ಕೂಡ ಒಬ್ಬರು..
ಧಾರಾವಹಿಯಲ್ಲಿ ಸಿಂಪಲ್ ಹಳ್ಳಿ ಹುಡುಗಿ ಕಮಲಿ ರಿಯಲ್ ಲೈಫ್ ನಲ್ಲಿ ಸಖತ್ ಬೋಲ್ಡ್… ಗ್ಲಾಮರಸ್ ಚೆಲುವೆ.. ಅಂದ್ಹಾಗೆ ಬಿಗ್ ಬಾಸ್ ಓಪನಿಂಗ್ ದಿನ ವೇದಿಕೆ ಮೇಲೆ ಕಿಚ್ಚನ ಜೊತೆಗೆ ಮಾತನಾಡಿರುವ ಅಮೂಲ್ಯ ತಮಗೆ ಪ್ರಥಮ್ ಕಂಡರೆ ಆಗುವುದಿಲ್ಲ.. ಸಿಟ್ಟು ಬರುತ್ತಿತ್ತು ಅವರನ್ನ ಆ ಸೀಸನ್ ನಲ್ಲಿ ನೋಡುವಾಗ ಎಂದಿದ್ದಾರೆ..
ಪ್ರಥಮ್ ಅವರನ್ನು ಬಿಗ್ ಬಾಸ್ ನಲ್ಲಿ ನೋಡುವಾಗ ಬಹಳ ಇರಿಟೇಟ್ ಆಗುತ್ತಿದ್ದೆ. ಅವರ ಮಾತು, ವರ್ತನೆ ಇರಿಟೇಟಿಂಗ್ ಎನ್ನಿಸುತ್ತಿತ್ತು. ಬೇರೆಯವರಿಗೆ ಅವರು ಮೆಂಟಲ್ ಟಾರ್ಚರ್ ನೀಡುತ್ತಿದ್ದಾರೆ ಎನ್ನಿಸುತ್ತಿತ್ತು ಎಂದಿದ್ದಾರೆ.
ಅಂದ್ಹಾಗೆ ಪ್ರಥಮ್ ಆ ಸೀಸನ್ ನ ವಿನ್ನರ್ ಆಗಿದ್ದರು..
ಒಳ್ಳೆ ಹುಡುಗ ಪ್ರಥಮ್ ಅಮೂಲ್ಯರ ಈ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಶೈಲಿಯಲ್ಲಿ ರಿಯಾಕ್ಟ್ ಕೂಡ ಮಾಡಿದ್ದಾರೆ..
ದೇವ್ರಾಣೆ ಈ ಹುಡುಗಿ ಯಾರು ಅಂತಾನೇ ಗೊತ್ತಿಲ್ಲ.. ಇವ್ರ ಆಸ್ತಿ ಬರೆಸಿಕೊಂಡಿಲ್ಲ. ನೇರವಾಗಿ ಮೀಟಿಂಗ್ ಅಂತೂ ನಮ್ಮ ತಾಯಾಣೆ ಮಾಡಿಲ್ಲ.. ಆದ್ರೂ ನನ್ನಮೇಲೆ ಕೋಪ ಅಂತೆ ಇರ್ಲಿ ಅದೆಲ್ಲಾ ಅವ್ರ ಅಭಿಪ್ರಾಯ ಒಳ್ಳೆದಾಗಲಿ ಅಮೂಲ್ಯಾ ಅವರೆ, ಚೆನ್ನಾಗಿ ಆಡಿ ಕನ್ನಡಿಗರ ಮನಸ್ಸು ಗೆದ್ದು ಬನ್ನಿ ಮನಸ್ಸಿನಿಂದಲೇ ಹಾರೈಸ್ತೀನಿ ನಿಮ್ಗೆ ಎಲ್ಲರೂ ಅಮೂಲ್ಯ ರವರಿಗೆ ಹಾರೈಸಿ ಬೆಂಬಲಿಸಿ ಎಂದು ಬರೆದುಕೊಂಡಿದ್ದಾರೆ.