BiggBoss Kannada 9 : ಕಾಫಿ ನಾಡು ಚಂದ್ರು ಯಾಕಿಲ್ಲ..?? ಫ್ಯಾನ್ಸ್ ಅಸಮಾಧಾನ..!!
ಬಿಗ್ ಬಾಸ್ ಕನ್ನಡ ಸೀಸನ್ 9 ಅದ್ಧೂರಿಯಾಗಿ ಆರಂಭವಾಗಿದೆ..
ವದಂತಿಗಳಂತೆ ಕೆಲವರಷ್ಟೇ ಮನೆಯೊಳಗೆ ಪ್ರವೇಶ ಮಾಡಿದ್ದಾರೆ.. ಇನ್ನೂ ಹಲವರ ಬಗ್ಗೆ ನಿರೀಕ್ಷೆ ಮಾಡಿದ್ದ ಅಭಿಮಾನಿಗಳಿಗೆನಿರಾಸೆಯಾಗಿದೆ..
ಅಂದ್ಹಾಗೆ ಬಿಗ್ ಬಾಸ್ 9 ರಲ್ಲಿ ಹಿಂದಿನ ಬಿಗ್ ಬಾಸ್ ಸ್ಪರ್ಧಿಗಳು , ಒಟಿಟಿ ಸ್ಪರ್ಧಿಗಳು , ಹೊಸಬರ ಸಮಾಗಮವಾಗಿದೆ.. ಅಂದ್ಹಾಗೆ ಮನೆ ಪ್ರವೇಶ ಮಾಡಿದ ಸ್ಪರ್ಧಿಗಳೆಲ್ಲರಲ್ಲೂ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಫೇಮ್ ಪಡೆದವರಾಗಿದ್ದಾರೆ..
ಆದ್ರೆ ಒಟಿಟಿಯಲ್ಲಿ ಕಾಫಿ ನಾಡು ಚಂದ್ರು ಬರುತ್ತಾರೆಂದು ನಿರೀಕ್ಷೆ ಮಾಡಿ ನಿರಾಸೆ ಅನುಭವಿಸಿದ್ದ ಫ್ಯಾನ್ಸ್ ಈ ಬಾರಿ ಟಿವಿ ಬಿಗ್ ಬಾಸ್ ನಲ್ಲಾದ್ರೂ ಕಾಫಿನಾಡು ಚಂದ್ರು ಬರುತ್ತಾರೆ ಎಂದೇ ನಿರೀಕ್ಷೆ ಮಾಡಿದ್ದರು.. ಕಾಫಿ ನಾಡು ಚಂದ್ರುಗಾಗಿ ಭಾರೀ ಡಿಮ್ಯಾಂಡ್ ಸಹ ಶುರುವಾಗಿತ್ತು..
ಈ ಸೀಸನ್ ನಲ್ಲಿ ಕಾಫಿನಾಡು ಚಂದ್ರು ಅವರನ್ನ ಕರೆತರಲೇಬೇಕೆಂಬ ೊತ್ತಾಯಗಳನ್ನೂ ಹಾಕಲಾಗಿತ್ತು.. ಆಧ್ರೆ ಅಭಿಮಾನಿಗಳ ಆಸೆ ನಿರಾಸೆಯಾಗಿದೆ.. ನಿರೀಕ್ಷೆಗಳು ಹುಸಿಯಾಗಿದೆ..
ಸೀಸನ್ ಶುರುವಾಗುವುದಕ್ಕೂ ಮುನ್ನ ಯಾರೆಲ್ಲಾ ಈ ಬಾರಿ ಮನೆ ಪ್ರವೇಶ ಮಾಡಬಹುದೆಂಬ ಚರ್ಚೆಗಳು ಜೋರಾಗಿತ್ತು.. ಆಗ ಸೋಷಿಯಲ್ ಮೀಡಿಯಾದಲ್ಲಿ ಬಲವಾಗಿ ಚರ್ಚೆಯಾಗುತ್ತಿದ್ದ ಹೆಸರೇ ಕಾಫಿನಾಡು ಚಂದ್ರು.. ನೆಟ್ಟಿಗರು ಕಾಫಿನಾಡು ಚಂದ್ರುಗಾಗಿ ಭಾರೀ ಡಿಮ್ಯಾಂಡ್ ಮಾಡ್ತಾಯಿದ್ದರು..
ನಾನು ಪುನೀತ್ ರಾಜ್ ಕುಮಾರ್ , ಶಿವಣ್ಣನ ಅಭಿಮಾನಿ ಅಂತ ಹೇಳಿಕೊಂಡು ತಾರೆಯರಿಗೆ ತಮ್ಮದೇ ವಿಭಿನ್ನ ಶೈಲಿಯಲ್ಲಿ ಬರ್ತ್ ಡೇ ಗೆ ವಿಶ್ ಮಾಡ್ತಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್ ಗಳನ್ನ ಹೊಂದಿರುವ ಕಾಫಿ ನಾಡು ಚಂದ್ರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು , ಅವರ ಅಭಿಮಾನಿಗಳು ಈ ಬಾರಿ ಬಿಗ್ ಬಾಸ್ ಗೆ ಕಾಫಿ ನಾಡು ಚಂದ್ರುರನ್ನ ಕರೆತರಲೇಬೇಕೆಂದು ಡಿಮ್ಯಾಂಡ್ ಮಾಡ್ತಿದ್ದರು..