BiggBoss Kannada 9 ಶುರುವಾಗಿ ಸರಿಯಾಗಿ ಒಂದು ದಿನವೂ ಕಳೆದಿಲ್ಲಾ… ಆಗ್ಲೇ ಮನೆಯಲ್ಲಿ ಗಲಾಟೆ , ಕಿರಿಕ್ ಶುರುವಾಗಿಬಿಟ್ಟಿದೆ..
ಹೌದು..! ಸೆಪ್ಟೆಂಬರ್ 24 ರಿಂದ ಅದ್ಧೂರಿಯಾಗಿ ಸೀಸನ್ 9 ಶುರುವಾಗಿದ್ದು , 18 ಸ್ಪರ್ಧಿಗಳು ಈಗಾಗಲೇ ಮನೆ ಪ್ರವೇಶ ಮಾಡಿದ್ದರೆ.. ಹಿರಿಯರು , ಕಿರಿಯರು ಒಟಿಟಿ ಕಂಟೆಸ್ಟೆಂಟ್ ಗಳ ಸಮಾಗನ ಈ ಸೀಸನ್ ನ ಹೈಲೇಟ್.. ಹಳೇ ಸೀಸನ್ ನ ಕಿರಿಕ್ ಪಾರ್ಟಿಗಳನ್ನ ಬಾರಿ ಒಟಿಟಿ ಕಂಟೆಸ್ಟೆಂಟ್ ಗಳು ಹಾಗೂ ಹೊಸಬರ ಜೊತೆಗೆ ಒಂದುಗೂಡಿಸಿದೆ ಬಿಗ್ ಬಾಸ್..
ಅಂದ್ಹಾಗೆ ಸೀಸನ್ 8 ರಲ್ಲಿ ಸಾಕಷ್ಟು ಚರ್ಚೆಯಾಗಿದ್ದ , ಕಿರಿಕ್ ಮೂಲಕವೇ ಸುದ್ದಿಯಲ್ಲಿರುತ್ತಿದ್ದ ಸಾಮಾಜಿಕ ಹೋರಾಟಗಾರ , ಸೀಸನ್ 8 ರ ಫೈನಲಿಸ್ಟ್ ಆಗಿದ್ದ ಪ್ರಶಾಂತ್ ಸಂಬರ್ಗಿ ಅವರು ಈ ಬಾರಿ ಆರಂಭದಿಂದಲೇ ಕಿರಿಕ್ ಮಾಡಿಕೊಳ್ತಿದ್ದಾರೆ..
ಹೌದು..! ಆರ್ಯ ವರ್ಧನ್ ಗುರೂಜಿ ಜೊತೆಗೆ ಸಂಬರ್ಗಿ ಕಿರಿಕ್ ಮಾಡಿಕೊಂಡಿದ್ದಾರೆ.. ಈ ಸಂಬಂಧಿತ ಪ್ರೋಮೋ ರಿಲೀಸ್ ಆಗಿದ್ದು , ಈ ಸೀಸನ್ ಭರ್ಜರಿ ಎಂಟರ್ ಟೈನಿಂಗ್ ಆಗಿರಲಿದೆ ಎಂದು ಹೇಳ್ತಿದ್ದಾರೆ ನೆಟ್ಟಿಗರು..
ಪ್ರಶಾಂತ್ ಸಂಬರಗಿ, ಆರ್ಯವರ್ಧನ್ ಗುರೂಜಿ ಹಾಗೂ ದರ್ಶ್ ಚಂದ್ರಪ್ಪ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದನ್ನು ತಡೆಯಲು ಬೇರೆ ಸ್ಪರ್ಧಿಗಳು ಪ್ರಯತ್ನ ಪಟ್ಟಿದ್ದಾರೆ..
ಡೈನಿಂಗ್ ಟೇಬಲ್‌ನಲ್ಲಿ ಸ್ಪರ್ಧಿಗಳೆಲ್ಲಾ ಊಟ ಮಾಡುತ್ತಾ ಕೂತಿದ್ದಾರೆ. ನಾನು ಈವರೆಗೆ 10 ಲಕ್ಷ ಜನರಿಗೆ ಜ್ಯೋತಿಷ್ಯ ಹೇಳಿರಬಹುದು ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ. ಆಗ ಪ್ರಶಾಂತ್ ಸಂಬರ್ಗಿ ಮಾತನಾಡುತ್ತಾ ಗುರುಗಳೇ ಏನೇನೋ ಮಾತನಾಡಬೇಡಿ.. 10 ಲಕ್ಷ ಜನ ಅಂತೆಲ್ಲಾ ಎಂದಿದ್ದಾರೆ.
ಈ ವೇಳೆ ಇವರಿಬ್ಬರ ಮಾತಿನ ಚಕಮಕಿಯ ನಡುವೆ ದರ್ಶ್ ಚಂದ್ರಪ್ಪ ಮಧ್ಯ ಪ್ರವೇಶಿಸಿದ್ದಾರೆ.. ಬಿಗ್ ಬಾಸ್ ನಲ್ಲಿರುವಾಗ ಚೆನ್ನಾಗಿದ್ದು, ಹೊರಗಡೆ ಬಂದಾಗ ಹೆಣ್ಮಕ್ಕಳ ಬಗ್ಗೆ ಎಷ್ಟು ಕಚಡವಾಗಿ ಮಾತನಾಡುತ್ತಿದ್ದರು.. ಎಂದಾಗ ಸಿಟ್ಟಾಗಿರುವ ಸಂಬರ್ಗಿ ದಿವ್ಯಾ ಉರುಡುಗ ಮೋಸ ಆಡಿದ್ರು ಅಂದೆ. ಅದು ನನ್ನ ಸ್ವತಂತ್ರ. ನನ್ನ ಒಪೀನಿಯರ್ ಗುರು ಎಂದು ಹೇಳಿದ್ದಾರೆ..
ಆಗ ಅನ್ನ ತಿಂದುಬಿಟ್ಟು ಹಿಂದೆಯಿಂದ ಚೂರಿ ಹಾಕುವ ಕೆಲಸ ಯಾರೂ ಮಾಡಬಾರದು ಎಂದು ದರ್ಶ್ ಹೇಳಿದ್ದಾರೆ. ಆಗ ಮಾತನಾಡಿರೋ ಗುರೂಜಿ ಹುಟ್ಟಬೇಕಾದವರಿಗೆ ಮುಹೂರ್ತ ಕೊಟ್ಟಿದ್ದೀವಿ, ಹುಟ್ಟಿದವರಿಗೆ ಬುದ್ಧಿ ಕಲಿಸೋಕೆ ಗೊತ್ತಿಲ್ವಾ.. ಎಡಗಾಲಲ್ಲಿ ತುಳಿದು ಹೋಗ್ತೀನಿ ಎಂದು ಹೇಳಿದ್ದು , ಮೊದಲನೇ ದಿನವೇ ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿರುವಂತೆ ಕಂಡಿದ್ದು , ಮೊದಲ ದಿನದ ಬಿಗ್ ಬಾಸ್ ಎಪಿಸೋಡ್ ನೋಡಲು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ..