BiggBoss ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದ ರೂಪೇಶ್ ಸೀಸನ್ 9 ರ ಸ್ಪರ್ಧಿ : ಸಖತ್ ಟ್ರೋಲ್ …..!!!!
BiggBoss Kannada 9…. ಸೆಪ್ಟೆಂಬರ್ 24 ರಿಂದ ಅದ್ಧೂರಿಯಾಗಿ ಶುರುವಾಗಿದ್ದು , 18 ಸ್ಪರ್ಧಿಗಳು ಈಗಾಗಲೇ ಮನೆ ಪ್ರವೇಶ ಮಾಡಿದ್ದರೆ.. ಹಿರಿಯರು, ಕಿರಿಯರು ಒಟಿಟಿ ಕಂಟೆಸ್ಟೆಂಟ್ ಗಳ ಸಮಾಗನ ಈ ಸೀಸನ್ ನ ಹೈಲೇಟ್.. ಹಳೇ ಸೀಸನ್ ನ ಕಿರಿಕ್ ಪಾರ್ಟಿಗಳನ್ನ ಬಾರಿ ಒಟಿಟಿ ಕಂಟೆಸ್ಟೆಂಟ್ ಗಳು ಹಾಗೂ ಹೊಸಬರ ಜೊತೆಗೆ ಒಂದುಗೂಡಿಸಿದೆ ಬಿಗ್ ಬಾಸ್..
ಎಲ್ಲರದ್ದೂ ವಿಭಿನ್ನ ವ್ಯಕ್ತಿತ್ವ ವಿಭಿನ್ನ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವಾರಗಿದ್ದಾರೆ.. ಅಂತೆಯೇ ಈ ಬಾರಿ ಮನೆಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಎಂಟ್ರಿ ಕೊಟ್ಟಿದ್ದಾರೆ..
ಬಿಗ್ ಬಾಸ್ ಕನ್ನಡ ಓಟಿಟಿ ಮುಕ್ತಾಯವಾದ ನಂತರ ನಿನ್ನೆಯಿಂದ ( ಸೆಪ್ಟೆಂಬರ್ 24 ) ಬಿಗ್ ಬಾಸ್ ಕನ್ನಡ ಒಂಬತ್ತನೇ ಟಿವಿ ಆವೃತ್ತಿ ಆರಂಭವಾಗಿದೆ. ಈ ಶೋನಲ್ಲಿ ಒಂಬತ್ತು ನವೀನರು ಹಾಗೂ ಒಂಬತ್ತು ಪ್ರವೀಣರು ಮನೆಗೆ ಕಾಲಿಟ್ಟಿದ್ದಾರೆ. ನವೀನರು ಎಂದರೆ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಕಾಲಿಟ್ಟವರು ಹಾಗೂ ಪ್ರವೀಣರು ಎಂದರೆ ಈಗಾಗಲೇ ಬಿಗ್ ಬಾಸ್ ಮನೆಯ ಅನುಭವ ಹೊಂದಿರುವವರು ಎಂದರ್ಥ.
ಹೌದು, ಹಳೆಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿದ್ದವರು ಎರಡನೇ ಸಲ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಹಾಗೂ ಈ ಬಾರಿ ನೂತನವಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿರುವ ಸ್ಪರ್ಧಿಗಳೂ ಸಹ ಸಾಕಷ್ಟು ಕುತೂಹಲ ಮೂಡಿಸಿದ್ದು, ಮನರಂಜನೆ ನೀಡುವ ನಿರೀಕ್ಷೆ ಹೆಚ್ಚಿದೆ. ಕಮಲಿ ಧಾರಾವಾಹಿ ನಟಿ ಅಮೂಲ್ಯ ಗೌಡ, ರಿವ್ಯೂ ನವಾಜ್, ನೇಹಾ ಗೌಡ ಹಾಗೂ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ರೀತಿಯ ಸ್ಪರ್ಧಿಗಳ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಟಾಕ್ ಶುರುವಾಗಿದೆ.

ಅಂದ್ಹಾಗೆ ರೂಪೇಶ್ ರಾಜಣ್ಣ ಅವರನ್ನ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗ್ತಿದೆ.. ಕಾರಣ ಅವರು ಈ ಹಿಂದೆ 2017 ರಲ್ಲಿ ಬಿಗ್ ಬಾಸ್ ವಿರುದ್ಧ ನೀಡಿದ್ದ ಹೇಳಿಕೆ..
ಹೌದು..! 2017 ರಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ವಿರುದ್ಧ ಇದೇ ರೂಪೇಶ್ ರಾಜಣ್ಣ ಕಿಡಿಕಾರಿದ್ದರು.. ಇದು ಕನ್ನಡದ ರಿಯಾಲಿಟಿ ಶೋ.. ಆದ್ರೆ ಬಹುತೇಕ ಕಡೆ ಇಂಗ್ಲಿಷ್ ಭಾಷೆಯಲ್ಲಿಯೇ ಬಿಗ್ ಬಾಸ್ ನಾಮಫಲಕವನ್ನು ಬಳಸಲಾಗಿದೆ ಹಾಗೂ ಇದರ ವಿರುದ್ಧ ಈಗಾಗಲೇ ಸಂಬಂಧಪಟ್ಟವರನ್ನು ಭೇಟಿ ಮಾಡಿ ನಾಮಫಲಕಗಳನ್ನು ಕನ್ನಡಕ್ಕೆ ಬದಲಾಯಿಸಿ ಎಂದು ಕೋರಿಕೆ ಇಟ್ಟಿದ್ದೆ ಆದರೆ ಇಲ್ಲಿಯವರೆಗೂ ಆ ಕಾರ್ಯ ನಡೆದೇ ಇಲ್ಲ ಎಂದು ವಿಡಿಯೋ ಮಾಡಿ ಕಿಡಿಕಾರಿದ್ದರು. ಆಯೋಜಕರ ವಿರುದ್ಧ ಕನ್ನಡದ ಕಡೆಗಣನೆ ಮಾಡಿದಕ್ಕೆ ಸಿಟ್ಟು ಹೊರಹಾಕಿದ್ರು..
ಅಷ್ಟೇ ಅಲ್ಲ ಕಿಚ್ಚ ಸುದೀಪ್ ಅವರ ವಿರುದ್ಧವೂ ಮಾತನಾಡಿದ್ದ ರೂಪೇಶ್ , ನೀವು ಚಿತ್ರಗಳಲ್ಲಿ ಕನ್ನಡದ ಬಗ್ಗೆ ಒಳ್ಳೊಳ್ಳೆ ಸಂದೇಶವನ್ನು ನೀಡಿದ್ದೀರಾ, ಸಿನಿಮಾದಾಚೆಗೂ ಸಹ ಕನ್ನಡವೆಂದರೆ ವಿಶೇಷ ಗೌರವ ನೀಡಿದ್ದೀರಾ, ಆದರೆ ಬಿಗ್ ಬಾಸ್ ಮನೆ ಆಂಗ್ಲಮಯವಾಗಿದ್ದು ನೀವು ಅದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಆದ್ರೀಗ ರೂಪೇಶ್ ಅವರೇ ಬಿಗ್ ಬಾಸ್ ಮನೆ ಸೇರಿ ಟೀಕೆಗೆ ಗುರಿಯಾಗಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಿದ್ದಾರೆ..