BIggBoss Kannada 9 : ಬಿಗ್ ಬಾಸ್ ಮನೆಗೆ ಬಂದ ಐಶ್ವರ್ಯಾ 10 ಬಾರಿ ವರ್ಲ್ಡ್ ಚಾಂಪಿಯನ್..!!!
ಬಿಗ್ ಬಾಸ್ ಕನ್ನಡ ಸೀಸನ್ 9 ಅಂತೂ ಇಂತೂ ಗ್ರ್ಯಾಂಡ್ ಆಗಿ ರಂಭವಾಗಿದೆ.. 17 ಸ್ಪರ್ಧಿಗಳು ಈ ಬಾರಿ ಮನೆಗೆ ಪ್ರವೇಶ ನೀಡಿದ್ದಾರೆ.. ವದಂತಿಗಳಂತೆ ಕೆಲವರಷ್ಟೇ ಮನೆಯೊಳಗೆ ಪ್ರವೇಶ ಮಾಡಿದ್ದಾರೆ.. ಇನ್ನೂ ಹಲವರ ಬಗ್ಗೆ ನಿರೀಕ್ಷೆ ಮಾಡಿದ್ದ ಅಭಿಮಾನಿಗಳಿಗೆನಿರಾಸೆಯಾಗಿದೆ..
ಅಂದ್ಹಾಗೆ ಬಿಗ್ ಬಾಸ್ 9 ರಲ್ಲಿ ಹಿಂದಿನ ಬಿಗ್ ಬಾಸ್ ಸ್ಪರ್ಧಿಗಳು , ಒಟಿಟಿ ಸ್ಪರ್ಧಿಗಳು , ಹೊಸಬರ ಸಮಾಗಮವಾಗಿದೆ.. ಅಂದ್ಹಾಗೆ ಮನೆ ಪ್ರವೇಶ ಮಾಡಿದ ಸ್ಪರ್ಧಿಗಳೆಲ್ಲರಲ್ಲೂ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಫೇಮ್ ಪಡೆದವರಾಗಿದ್ದಾರೆ..
ಅದ್ರಲ್ಲೂ ಸಖತ್ ಹೈಲೇಟ್ ಆಗ್ತಿರುವುದು ಎಂದರೆ ಬೈಕ್ ರೇಸರ್ ಐಶ್ವರ್ಯಾ ಪಿಸ್ಸೆ… ಡೇರಿಂಗ್ ನೆಸ್ ಇವರ ಟ್ರೇಡ್ ಮಾರ್ಕ್ ಅನ್ನಬಹುದು… ಅಡ್ವೆಂಚರ್ ಇಷ್ಟ ಪಡುತ್ತಾ ಅದನ್ನೇ ವೃತ್ತಿಯಾಗಿಸಿಕೊಂಡ ಐಶ್ವರ್ಯಾ ಪಿಸ್ಸೆ ಬೆಂಗಳೂರು ಮೂಲದ ಹುಡುಗಿ..
ಐಶ್ವರ್ಯಾ ಪಿಸೆ ಮೋಟಾರ್ ಸ್ಪೋರ್ಟ್ಸ್ ನಲ್ಲಿ ಮಹಿಳಾ ಕ್ಯಾಟಗರಿಯಲ್ಲಿ ವಿಶ್ವಮಟ್ಟದಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿ ಪಡೆದಿದ್ದಾರೆ. 10 ಬಾರಿ ವರ್ಲ್ಡ್ ಚಾಂಪಿಯನ್ ಪಟ್ಟ ಗೆದ್ದ ಬೈಕ್ ರೈಡರ್ ಆಗಿದ್ದಾರೆ..
ಇವರ ಉದ್ದೇಶ ಸಿಂಪಲ್.. ಆದ್ರೆ ಮಹತ್ವದ್ದು.. ಮೋಟರ್ ಬೈಕ್ ರೇಸ್ ಲಾಭ ತಿಳಿಸಿಕೊಡೋದಕ್ಕೆ ಬಿಗ್ ಬಾಸ್ ಉತ್ತಮ ಫ್ಲಾಟ್ ಫಾರ್ಮ್ ಅಂದಿದ್ದಾರೆ ಐಶ್ವರ್ಯಾ..
ಅಂದ್ಹಾಗೆ ಸಾಕಷ್ಟು ಏಳು ಬೀಳುಗಳು , ಜನರ ಮಾತುಗಳನ್ನ ಕೇಳಿಸಿಕೊಂಡು ಯಾವುದಕ್ಕೂ ತಲೆ ಕೆಡಿಸಿಕೊಳ್ದೇ ತಮ್ಮಿಷ್ಟದ ಬೈಕ್ ರೇಸಿಂಗ್ ನಲ್ಲಿ ಐಶ್ವರ್ಯಾ ಮುಂದುವರೆಯುತ್ತಿದ್ದಾರೆ..
ವೀಕೆಂಡ್ ನಲ್ಲಿ ಸ್ನೇಹಿತರ ಜೊತೆ ಬೈಕ್ ರೈಡ್ ಹೋಗ್ತಿದ್ದೆ, ಆಮೇಲೆ ಅದೇ ನನಗೆ ಇಷ್ಟವಾಗಲು ಶುರುವಾಯ್ತು. 2015ರಲ್ಲಿ ನಾನು ಮೋಟಾರ್ ಸ್ಪೋರ್ಟ್ಸ್ ನಲ್ಲಿ ತರಬೇತಿ ಪಡೆಯಲು ಆರಂಭಿಸಿದೆ. ಆನಂತರ ನನಗೆ ಇದರಲ್ಲಿ ಸ್ವಲ್ಪ ಕೌಶಲವಿದೆ ಎಂಬುದು ಅರ್ಥವಾಯ್ತು. ಅದನ್ನೇ ವೃತ್ತಿಯಾಗಿ ತೆಗೆದುಕೊಂಡೆ ಎಂದಿದ್ದಾರೆ..
ಇದೇ ವೇಳೆ ಕಿಚ್ಚ ಸುದೀಪ್ ಅವರೆದುರಿಗೆ ನಿಂತು ಮಾತನಾಡುತ್ತಿರುವುದಕ್ಕೆ ಬಹಳ ಖುಷಿಯಾಗ್ತಿದೆ.. ನೀವು ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದ್ದೀರಿ ಎಂದಿದ್ದಾರೆ.. ಆಗ ಕಿಚ್ಚ ಸುದೀಪ್ ಅವರೂ ಕೂಡ ಐಶ್ವರ್ಯಾ ಅವರು ರಾಷ್ಟ್ರೀಯ ಅತರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
ಅಂದ್ಹಾಗೆ ಬಿಗ್ ಬಾಸ್ ಮನೆಗೆ ಹಿಂದಿನ ಸೀಸನ್ ಅಂದ್ರೆ 8 ನೇ ಸೀಸನ್ ನಲ್ಲಿ ಬೈಕ್ ರೇಸರ್ ಅರವಿಂದ್ ಗಮನ ಸೆಳೆದಿದ್ದರು.. ಇದೀಗ ಐಶ್ವರ್ಯಾ ಪಿಸ್ಸೆ ಇದೇ ಕ್ಯಾಟಗೆರಿಯಲ್ಲಿದ್ದಾರೆ.. ಐಶ್ವರ್ಯಾ ಈಗಿನಿಂದಲೇ ಐಲೇಟ್ ಆಗಿದ್ದು , ಅಥ್ಲೆಟ್ ಆಗಿರೋ ಕಾರಣ ಅರವಿಂದ್ ಅವರಂತೆಯೇ ಟಾಸ್ಕ್ ಅಂತ ಬಂದಾಗ ಒಳ್ಳೆ ಪರ್ಫಾಮೆನ್ಸ್ ನೀಡುವ ನಿರೀಕ್ಷೆಯಿದೆ ಎಂದೇ ನೆಟ್ಟಿಗರು ಚರ್ಚೆ ಮಾಡ್ತಾ ಇದ್ದಾರೆ..