ಕಂಗನಾ ರಣೌತ್ ಬಾಲಿವುಡ್ ಮಂದಿ , ರಾಜಕೀಯ ರಲಿ ಮತ್ಯಾವುದೇ ವಿಚಾರ ರಲಿ ಅವರ ಅಭಿಪ್ರಾಯಗಳನ್ನ ಹಂಚಿಕೊಳ್ತಾ ಸುದ್ದಿಯಲ್ಲಿರುತ್ತಾರೆ.. ಸುದ್ದಿಯಲ್ಲಿ ಅನ್ನೋದಕ್ಕಿಂದ ವಿವಾದಗಳಲ್ಲಿರೋದೇ ಹೆಚ್ಚು.. ಅದ್ರಲ್ಲೂ ಸುಶಾಂತ್ ಸಿಂಗ್ ಸಾವಿನ ಬಳಿಕ ರಾಜಕೀಯ ಮುಖಂಡರ ವಿರುದ್ಧ ಹರಿಹಾಯುತ್ತಾ ಬಂದಿದ್ದಾರೆ.. ಇನ್ನೂ ಕಂಗನಾ ಹೆಚ್ಚಾಗಿ ಬಿಜೆಪಿ ಪರ , ಮೋದಿ ಪರ ಮಾತನಾಡುತ್ತಾ ಗುರುತಿಸಿಕೊಂಡಿದ್ದು , ಬಹಳ ದಿನಗಳಿಂದಲೂ ಅವರು ರಾಜಕೀಯಕ್ಕೆ ಬರುತ್ತಾರಾ ಅನ್ನೋ ಚರ್ಚೆಗಳು ಜೋರಾಗಿವೆ..
ಅದ್ರಲ್ಲೂ ಈ ಬಾರಿ ಮಥುರಾ ಲೋಕಸಭಾ ಚುನಾವಣೆಯಲ್ಲಿ ಕಂಗನಾ ಸ್ಪರ್ಧಿಸಲಿದ್ದಾರೆ ಎಂಬ ಹಾಪೋಹಗಳು ಸಿನಿಮಾರಂಗ ಹಾಗೂ ರಾಜಕೀಯ ವಲಯದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ.. ಆದ್ರೆ ಈ ಬಗ್ಗೆ ನಟಿ ಹಾಗೂ ಬಿಜೆಪಿ ಸಂಸದೆಯಾಗಿರುವ ಹೇಮಾ ಮಾಲಿನಿ ಪ್ರತಿಕ್ರಿಯೆ ನೀಡಿದ್ದಾರೆ..
ಅಂದ್ಹಾಗೆ ಹೇಮಾಮಾಲಿನಿ ಅವರು ಪ್ರತಿನಿಧಿಸುವ ಕ್ಷೇತ್ರದಿಂದ ಈ ಬಾರಿ ನಟಿ ಕಂಗನಾ ರಣಾವತ್ ಸ್ಪರ್ಧಿಸುತ್ತಾರೆ ಎಂಬ ಹಾಪೋಹಗಳಿದೆ.. ಇದಕ್ಕೆ ಉತ್ತರಿಸಿರಿರುವ ಹೇಮಾಮಾಲಿನಿ ಕಂಗನಾ ಅಲ್ಲ , ರಾಖಿ ಸಾವಂತ್ ಬೇಕಿದ್ರೂ ಸ್ಪರ್ಧೆ ಮಾಡಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ..
ಇನ್ನೂ ಇದು ದೇವರಿಗೆ ಬಿಟ್ಟಿದ್ದು, ಶ್ರೀಕೃಷ್ಣ ತಾನು ಅಂದುಕೊಂಡಿದ್ದನ್ನು ಮಾಡುತ್ತಾನೆ. ಮಥುರಾದಲ್ಲಿ ಸ್ಪರ್ಧಿಸಲು ಬೇರೆ ರಾಜಕಾರಣಿಗಳು ನಿಮಗೆ ಸಿಗುವುದಿಲ್ಲವೇ ಸಿನಿಮಾ ತಾರೆಯರಯ ಮಾತ್ರವೇ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ವಿಚಾರವನ್ನು ನೀವು ಎಲ್ಲರ ತಲೆಯಲ್ಲಿ ತುಂಬಿಸುತ್ತಿದ್ದೀರಾ. ಮಥುರಾ ಸಿನಿ ತಾರೆಯರು ಮಾತ್ರ ಸ್ಪರ್ಧಿಸಬೇಕು ಎಂಬಂತೆ ಬಿಂಬಿಸುತ್ತಿದ್ದೀರಾ.
ನಿಮಗೆ ಮಥುರಾದಲ್ಲಿ ಸ್ಪರ್ಧಿಸಲು ಸಿನಿ ತಾರೆಯರೇ ಬೇಕಾ ನಾಳೆ ರಾಖಿ ಸಾವಂತ್ ಕೂಡ ಸ್ಪರ್ಧಿಸುತ್ತಾರೆ ಎಂದು ಕೋಪದಲ್ಲಿ ಉತ್ತರಿಸಿದ್ದಾರೆ.. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ..
#WATCH | Mathura, Uttar Pradesh: When asked about speculation that actor Kangana Ranaut could contest elections from Mathura, BJP MP Hema Malini says, “Good, it is good…You want only film stars in Mathura. Tomorrow, even Rakhi Sawant will become.” pic.twitter.com/wgQsDzbn5Z
— ANI (@ANI) September 24, 2022