ಎಸ್ ಪಿ ಬಾಲಸುಬ್ರಹ್ಮಣ್ಯಂ…. ಗಾನಗಂಧರ್ವ , ಸ್ವರಮಾಂತ್ರಿಕ , ಭಾರತ ಸಂಗೀತ ಲೋಕದ ದಿಗ್ಗಜರು… ಇಂತಹ ಮೇರು ಕಲಾವಿದರಾದ ಸ್ ಪಿಬಿ ನಮ್ಮನ್ನೆಲ್ಲಾ ಅಗಲಿ ಇಂದಿಗೆ 2 ವರ್ಷ ಪೂರ್ಣಗೊಂಡಿದೆ..
ನಮ್ಮಂದಿಗೆ ಇಂದು SPB ಇರದೇ ಇರಬಹುದು.. ಆದ್ರೆ ಅವರು ಅವರು ತಮ್ಮ ಹಾಡುಗಳ ಮೂಲಕ ಇಂದಿಗೂ ಅಜರಾಮರರಾಗಿದ್ದಾರೆ..
ಎಸ್ ಪಿಬಿ ಅವರ ಸರಳತೆ ಹಾಗೂ ಮುಗ್ಧ ನಗುವೇ ಅವರಿಗೆ ಕೋಟ್ಯಾಂತರ ಹೃದಯಗಳು ಸೋಲುವಂತೆ ಮಾಡಿದ್ದು.. 14 ಕ್ಕೂ ಹೆಚ್ಚು ಭಾಷೆಗಳಲ್ಲಿ ಅತಿ ಹೆಚ್ಚು ಹಾಡುಗಳನ್ನ ಹಾಡಿರುವ ದಾಖಲೆ ಅವರದ್ದು.. ರಾಷ್ಟ್ರಪ್ರಶಸ್ತಿ ವಿಜೇತರಾದ ಎಸ್ ಪಿಬಿ ಅವರು ಎಲ್ಲಾ ಜನರೇಷನ್ ಅವರಿಗೂ ಫೇವರೇಟ್ ಆಗಿದ್ದವರು..
ಅಲ್ಲದೇ ನಟನೆಯಲ್ಲೂ ಎಸ್ ಪಿಬಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು.. ಕನ್ನಡದ , ತೆಲುಗು , ತಮಿಳು , ಮಲಯಾಳಂ , ಹಿಂದಿ ಸಿನಿಮಾರಂಗದಲ್ಲಿ ನಟಿಸಿದ್ದಾರೆ..
2020ರ ಸೆಪ್ಟೆಂಬರ್ 25ರಂದು ಇಹಲೋಕ ತ್ಯಜಿಸಿದ್ದರು.. ಅಂದು ಇಡೀ ದೇಶಾದ್ಯಂತ ಶೋಕ ವಾತಾವರಣ ನಿರ್ಮಾಣವಾಗಿತ್ತು.. ಕೋಟ್ಯಾಂತರ ಅಭಿಮಾನಿಗಳು , ಸಿನಿಮಾ ತಾರೆಯರು , ಗಣ್ಯರು ಕಣ್ಣೀರು ಸುರಿಸಿದ್ದರು..
ಎಸ್ ಪಿಬಿ ಅವರು ಅತ್ಯುತ್ತಮ ನಟರು , ಗಾಯಕ ಅಷ್ಟೇ ಆಗಿರಲಿಲ್ಲ… ಸರಳ , ಸಹೃದಯಿ , ಸಜ್ಜನರಾಗಿದ್ದರು.. ಮುಗ್ಧ ನಗುವಿನ ಮೂಲಕವೇ ಎಲ್ಲರ ಮನಸ್ಸು ಗೆಲ್ಲುತ್ತಿದ್ದ ಅವರ ವ್ಯಕ್ತಿತ್ವಕ್ಕೆ ಅಭಿಮಾನಿಗಳಿದ್ದವರು ಹೆಚ್ಚು..
5 ದಶಗಳು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದರು… 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದರು ಎಸ್ ಪಿಬಿ..
ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಲನಚಿತ್ರೋದ್ಯಮಗಳಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದ ಎಸ್ ಪಿಬಿ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ , ಅಭಿಮಾನವಿತ್ತು.. ಇದನ್ನ ಖುದ್ದು ಅವರೇ ಹೇಳಿಕೊಂಡಿದ್ದರು ಸಹ..
ಅಷ್ಟೇ ಅಲ್ದೇ ಮುಂದಿನ ಜನ್ಮವೇನಾದರೂ ಇದ್ದರೆ ಅದು ಕರುನಾಡಿನಲ್ಲೇ ಹುಟ್ಟುತ್ತೇನೆ. ಇಲ್ಲಿನ ಜನರ ಪ್ರೀತಿಯ ಋಣ ತೀರಿಸುತ್ತೇನೆ ಎಂದಿದ್ದರು.. ಈ ಮಾತುಗಳೇ ಸಾಕು ಅವರಿಗಿದ್ದ ಕನ್ನಡಾಭಿಮಾನವನ್ನ ತಿಳಿಯಲು..
ಕೊರೊನಾದಿಂದ ಚೇತರಿಸಿಕೊಂಡಿದ್ದ ಎಸ್ಪಿಗಬಿ ಅನಾರೋಗ್ಯದ ಕಾರಣ ಚೈನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ 2020ರ ಸೆ.25 ರಂದು ಚಿಕಿತ್ಸೆ ಫಲಿಸದೇ ಎಸ್ ಪಿಬಿ ಅವರು ಬಾರದ ಲೋಕದತ್ತ ಪಯಣ ಬೆಳೆಸಿದ್ದರು..
ಸಂಗೀತ ಲೋಕದ ದಿಗ್ಗಜ ಎಸ್ಪಿಪಬಿಯವರ 2ನೇ ವರ್ಷದ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದೆ.
1966ರಲ್ಲಿ ತೆಲುಗು ಚಲನಚಿತ್ರ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಸಿನಿಮಾದ ಮೂಲಕ ಹಿನ್ನಲೆ ಗಾಯಕರಾಗಿ ಪಾದಾರ್ಪಣೆ ಮಾಡಿದರು. ನಂತರದಿಂದಲೇ ಎಸ್ ಪಿಬಿ ಅವರ ಸುವರ್ಣ ಯುಗ ಶುರುವಾಗಿದ್ದು..
ಎಸ್ ಬಿ ಬಿ ಅವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಒಲಿದುಬಂದಿದೆ..
ಅತ್ಯುತ್ತಮ ಪುರುಷ ಹಿನ್ನೆಲೆ ಗಾಯನಕ್ಕೆ 6 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ.
2016ರಲ್ಲಿ ನಡೆದ ಭಾರತದ 47ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿ ಲಭಿಸಿತ್ತು..
SPB ಅವರಿಗೆ ಭಾರತ ಸರ್ಕಾರದಿಂದ 2001 ರಲ್ಲಿ ಪದ್ಮಶ್ರೀ , 2011 ರಲ್ಲಿ ಪದ್ಮಭೂಷಣ , 2021 ರಲ್ಲಿ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಆದ್ರೆ ಇಂಜಿನಿಯರಿಂಗ್ ಪ್ರವೇಶ ಪಡೆದಿದ್ದ ಎಸ್ ಪಿಬಿ ಅವರು ಸಂಗೀತ ಜಗತ್ತಿಗೆ ಪ್ರವೇಶ ಪಡೆದಿದ್ದೇ ಇಂಟ್ರೆಸ್ಟಿಂಗ್… ಬೇಕಂತ ಸಂಗೀತ ಜಗತ್ತಿನಲ್ಲೇ ಬೆಳೆಯಬೇಕೆಂದುಕೊಂಡು ಬಂದವರೇನಲ್ಲ..
ಆದ್ರೆ ಕೆಲ ಕಾರಣಗಳಿಮದ ಕಾಲೇಜು ಬಿಟ್ಟಿದ್ದ ಸ್ ಪಿಬಿ ಅವರು ಅವರ ಸ್ನೇಹಿತರ ಒತ್ತಾಯದ ಮೇರೆಗೆ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರಂತೆ.. ಆ ನಂತರ ಅವರಿಗೆ ಸಿನಿಮಾಗಳಿಂದ ಹಿನ್ನೆಲೆ ಗಾಯನಕ್ಕೆ ಆಫರ್ ಗಳು ಒಲಿದು ಬಂದವು.. 1966 ರಲ್ಲಿ ಶ್ರೀ ಮರ್ಯಾದ ರಾಮಣ್ಣ ಸಿನಿಮಾದ ಮೂಲಕ ಅವರು ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು..