BiggBoss Kannada 9 : ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಸೈಕ್ ನವಾಝ್..!!
ಬಿಗ್ ಬಾಸ್ ಮನೆಯಲ್ಲಿ 18 ಸ್ಪರ್ಧಿಗಳ ಪೈಕಿ ಸಿಕ್ಕಾಪಟ್ಟೆ ಭಿನ್ನ ಕ್ಯಾರೆಕ್ಟರ್ ಇರುವ ವೈರಲ್ ಹುಡುಗ ಸೈಕ್ ನವಾಜ್ ಜೀವನದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ.. ಈತ ಮನೆಯಲ್ಲಿ ಎಲ್ಲರಿಗಿಂತಲೂ ಅತ್ಯಂತ ಕಿರಿಯ ಸದಸ್ಯ.. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನ ಪಟ್ಟಿರುವ ಹುಡುಗ ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದರಂತೆ.. ಅದೂ ಕೂಡ ತುಂಬಾ ಚಿಕ್ಕ ವಯಸ್ಸಿನಲ್ಲಿ..
19 ವರ್ಷದ ಸೈಕ್ ನವಾಜ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್.. ಪ್ರಾಸ ಇಲ್ದೇ ಮಾತನಾಡೋದೇ ಕಡಿಮೆ,. ಡೈಲಾಗ್ ಗಳನ್ನ ಹೊಡೆಯುತ್ತಲೇ ಫೇಮಸ್ ಆದ ಈ ಹುಡುಗ ಥಿಯೇಟರ್ ಹೊರಗೆ ಚಾನೆಲ್ ಗಳ ಮೈಕ್ ಮುಂದೆ ನಿಂತು ಡೈಲಾಗ್ ಹೊಡೆದೇ ವೈರಲ್ ಬಾಯ್ ಎಂದು ಫೇಮಸ್ ಆದವ.. ಅದೇ ಈತ ಬಿಗ್ ಬಾಸ್ ಗೆ ಬರುವಂತೆ ಮಾಡಿದ್ದು..
ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಈ ಹುಡುಗ ಬಹಳ ಕಷ್ಟಪಟ್ಟಿದ್ದಾನಂತೆ.. 1000 ರೂಪಾಯಿ ಮನೆ ಬಾಡಿಗೆ ಕಟ್ಟೋಕೆ ಇಲ್ಲದ ಕಾರಣಕ್ಕೆ ಮನೆ ಇಂದ ಓನರ್ ಆಚೆ ಹಾಕಿದ್ದರಂತೆ..
ಬಡತನದಿಂದಾಗಿ ನವಾಜ್ ಮನೆಯಲ್ಲಿ ಬೆಳಗ್ಗೆ ಹೊತ್ತು ತಿಂಡಿ ಮಾಡುತ್ತಿರಲಿಲ್ಲವಂತೆ.. ಬಾಲ್ಯದಿಂದಲೂ ಉಪವಾಸ ಇದ್ದೂ ಇದ್ದೂ ಈಗಲೂ ಬೆಳಿಗ್ಗೆ ತಿಂಡಿ ತಿನ್ನುವ ಅಭ್ಯಾಸವೇ ಇಲ್ಲವಂತೆ.
ಇನ್ನೂ ವಿದ್ಯಾಭ್ಯಾಸದಲ್ಲಿ ಆವರೇಜ್ ಇದ್ದ ನವಾಝ್ SSLC ಪರೀಕ್ಷೆಯಲ್ಲಿ ಕನ್ನಡದಲ್ಲಿ 88 ಅಂಕ ಪಡೆದಿದ್ದರಂತೆ.. ಆದ್ರೆ ಗಣಿತದಲ್ಲಿ ಫೇಲ್ ಆಗುತ್ತೇನೇನೋ ಎಂಬ ಭಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರಂತೆ. ಅಲ್ಲದೇ ಫೇಲ್ ಆಗಬಾರದು ಎಂದು ಪೇಪರ್ ಕೊನೆಯಲ್ಲಿ ಪಾಸ್ ಮಾಡಿ ಅಂತ ಶಿಕ್ಷಕರಿಗೆ ಮನವಿ ಮಾಡಿದ್ದರಂತೆ.. ಆದ್ರೂ ಕೊನೆಯಲ್ಲಿ ಹೇಗೋ ಪಾಸ್ ಆಗಿಬಿಟ್ಟಿದ್ದಾರೆ ನವಾಝ್.