BiggBoss Kannada 9 : ಸೋನು ಮರೆತು ಅಮೂಲ್ಯ ಜೊತೆಗೆ ಕ್ಲೋಸ್ ಆಗ್ತಿರುವ ರಾಕಿ..!!
ಬಿಗ್ ಬಾಸ್ ಒಟಿಟಿ ಮುಕ್ತಾಯವಾಗಿದೆ.. ನಾಲ್ವರು ಟಿವಿ ಬಿಗ್ ಬಾಸ್ ಎಂಟ್ರಿಯಾಗಿದ್ದಾರೆ.. ನಾಲ್ವರ ಪೈಕಿ ರಾಕೇಶ್ ಕೂಡ ಬ್ರು.. ಒಟಿಟಿ ಸೀಸನ್ ನಲ್ಲಿ ರಾಕಿ ಸಖತ್ ಹೈಲೇಟ್ ಆಗಿದ್ದರು.. ರಾಕೇಶ್ ಹಾಗೂ ಸೋನು ಗೌಡ ಯಾವಾಗಲೂ ಕ್ಲೋಸ್ ಆಗಿರುತ್ತಿದ್ದರು.. ಇಬ್ಬರ ನಡುವೆ ಬಹಳ ತ್ಮೀಯತೆ ಇರುತ್ತಿತ್ತು..
ಆದ್ರೆ ಸೋನು ಗೌಡ ಟಿವಿ ಬಿಗ್ ಬಾಸ್ ಗೆ ಬರುವ ಅದೃಷ್ಟ ಕಳೆದುಕೊಂಡರು.. ಇದೀಗ ಟಿವಿ ಬಿಗ್ ಬಾಸ್ ಶುರುವಾಗಿ ಸರಿಯಾಗಿ ಒಂದು ದಿನ ಕಳೆದಿಲ್ಲ. ಆಗಲೇ ರಾಕೇಶ್ ಅಮೂಲ್ಯಗೆ ಹತ್ತಿರವಾಗುತ್ತಿದ್ದಾರೆ ಎನಿಸುತ್ತಿದೆ.. ಸೋಷಿಯಲ್ ಮೀಡಿಯಾದಲ್ಲಿ ಸೋನು ಮರೆತು ಅಮೂಲ್ಯ ಹಿಂದೆ ರಾಕಿ ಬಿದ್ದಿದ್ದಾರೆಂದೇ ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ..
ರಾಕೇಶ್ ಪಾತ್ರೆ ತೊಳೆಯುತ್ತಾ ನಿಂತಿರುತ್ತಾರೆ.. ಆಗ ಅಮೂಲ್ಯ ನೀವೂ ಕೆಲಸ ಮಾಡ್ತೀರಾ ಎಂದು ಕೇಳಿದಾಗ ರಾಕಿ ಉತ್ತರಿಸುತ್ತಾರೆ.. ಹೌದು..! ಫ್ರೀ ಇದ್ದಾಗ ಕೆಲಸ ಮಾಡುತ್ತೀನಿ ಎಂದಿದ್ದಾರೆ.
ಬಳಿಕ ಅಮೂಲ್ಯ ಪಾತ್ರೆ ತೊಳೆಯುವ ರೀತಿ ನೋಡಿ ತಮಾಷೆ ಮಾಡುವ ರಾಕಿ ನೀವು ಗಾಡಿ ತೊಳಿಯುತ್ತಿದ್ದೀರಾ ಎಂದು ಕೇಳಿದಾಗ ಅಮೂಲ್ಯ ಸಣ್ಣ ನಗೆ ಬೀರಿದ್ದಾರೆ.. ಒಟ್ನಲ್ಲಿ ಹಿಂದಿನ ಸೀಸನ್ ನಲ್ಲಿ ಸೋನು ರಾಕಿ ನಡುವಿನ ಮಾತುಕತೆ ಜನರನ್ನ ಟರ್ ಟೈನ್ ಮಾಡ್ತಿತ್ತು.. ಇದೀಗ ರಾಕಿ ಹಾಗೂ ಅಮೂಲ್ಯ ನಡುವೆ ಬಾಂಡಿಂಗ್ ಸ್ಟ್ರಾಂಗ್ ಆಗುವ ಸೂಚನೆ ಸಿಕ್ಕಿದೆ..