Jacqueline Fernandiz : ‘ರಾ.. ರಾ.. ರಕ್ಕಮ’ನಿಗೆ ಸಿಕ್ತು ಜಾಮೀನು..!!
200 ಕೋಟಿ ರೂ ವಂಚನೆ ಪ್ರಕರಣದಲ್ಲಿ ಪ್ರಮುಖ ರೋಪಿಯಾಗಿರುವ ಸುಕೇಶ್ ಚಂದ್ರ ಜೊತೆಗಿನ ತ್ಮೀಯತೆಯಿಂದಾಗಿ ಕಾನೂನಿನ ಸಂಕಷ್ಟಕ್ಕೆ ಸಿಲುಕಿರುವ ‘ವಿಕ್ರಾಂತ್ ರೋಣ’ ಬೆಡಗಿ ಬಾಲಿವುಡ್ ನ ಗ್ಲಾಮರಸ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಇದೀಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ..
ಹೌದು..! ಲಂಕಾ ಸುಂದರಿ ಜಾಕ್ವೆಲಿನ್ ಗೆ ಬಂಧನದ ಭೀತಿ ಎದುರಾಗಿತ್ತು.. ಆದ್ರೀಗ ನಟಿಗೆ ಜಾಮೀನು ಸಿಕ್ಕಿದೆ..
ಪ್ರಕರಣ ಸಂಬಂಧ ಜಾಕ್ವೆಲಿನ್ ಸತತವಾಗಿ ವಿಚಾರಣೆಗೆ ಹಾಜರಾಗುತ್ತಿದ್ದರು. ಬಂಧನದ ಭೀತಿ ಎದುರಾಗಿದ್ದ ಕಾರಣ ಜಾಮೀನಿಗಾಗಿ ‘ಲಂಕಾ ಸುಂದರಿ’ ಕೋರ್ಟ್ ಮೊರೆ ಹೋಗಿದ್ದರು. ಸದ್ಯ ಅವರಿಗೆ ಮಧ್ಯಂತರ ಜಾಮೀನು ದೊರೆಕಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಲಾಗಿದೆ.
ಮುಂದೆ ಈ ಕೇಸ್ ಗೂ ತಮಗೂ ಸಂಬಂಧವಿಲ್ಲ ಎಂಬುದನ್ನ ಆಧಾರ ಸಹಿತ ಜಾಕ್ವೆಲಿನ್ ಸಾಬೀತು ಪಡಿಸಿಕೊಳ್ಳಬೇಕಿದೆ..