ಕನ್ನಡದಲ್ಲೂ ಬರುತ್ತಿದೆ ಮಲಯಾಳಂನ ಸೂಪರ್ ಹಿಟ್ ‘ಶೈಲಾಕ್’ ಸಿನಿಮಾ
ಮಲಯಾಳಂನ ಸ್ಟಾರ್ ನಟ ಮಮ್ಮೂಟ್ಟಿ ಅಭಿನಯದ ‘ಶೈಲಾಕ್’ ಸಿನಿಮಾ ಇದೀಗ ಕನ್ನಡದಲ್ಲೂ ರಿಲೀಸ್ ಆಗಿದೆ.. ಈ ಸಿನಿಮಾ ಇತ್ತೀಚೆಗಷ್ಟೇ ಕೇರಳದಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಿತ್ತು.. ಇದೀಗ ಕನ್ನಡದಲ್ಲಿ ಡಬ್ ಆಗಿರುವ ಸಿನಿಮಾ ರಿಲೀಸ್ ಆಗಿದೆ..
ಒಟಿಟಿ ಫ್ಲಾಟ್ ಫಾರ್ಮ್ ಅಮೇಜನ್ ನಲ್ಲಿ ಸಿನಿಮಾದ ಕನ್ನಡ ವರ್ಷನ್ ವೀಕ್ಷಣೆಗೆ ಲಭ್ಯವಾಗಿದೆ.. ಗುಡ್ ವಿಲ್ ಎಂಟರ್ ಟೈನ್ ಮೆಂಟ್ಸ್ ನಡಿ ಈ ಸಿನಿಮಾಗೆ ಜಾರ್ಜ್ ಬಂಡವಾಳ ಹೂಡಿದ್ದಾರೆ.. ಅಜಯ್ ವಾಸುದೇವ್ ಆಕ್ಷನ್ ಕಟ್ ಹೇಳಿದ್ದಾರೆ..
ಈ ಸಿನಿಮಾ ಕೇರಳದಲ್ಲಿ ಸುಮಾರು 80 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು..
ಈ ಚಿತ್ರವು ತೆಲುಗು ಮತ್ತು ತಮಿಳಿಗೆ ಡಬ್ ಆಗಿ ಆಹಾ ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಇದೀಗ ಚಿತ್ರವು ಕನ್ನಡಕ್ಕೆ ಡಬ್ ಆಗಿದ್ದು, ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗ್ತಿದೆ..