ಸೆಪ್ಟೆಂಬರ್ 30…!! ಕಾಂತಾರಾ , ತೋತಾಪುರಿ ಸಿನಿಮಾಗಳಿಗೆ ಪೊನ್ನಿಯನ್ ಸೆಲ್ವನ್ ಟಕ್ಕರ್ ಕೊಡುತ್ತಾ..!!!??
ಸೆಪ್ಟೆಂಬರ್ 30 ಶುಭ ಶುಕ್ರವಾರ… ಆದ್ರೆ ಯಾರಿಗೆ ಶುಭ ಯಾರಿಗೆ ಅಶುಭ.??
ಕನ್ನಡದ ಬಹುನಿರೀಕ್ಷೆಯ 2 ಸಿನಿಮಾಗಳಾದ ರಿಷಬ್ ಶೆಟ್ಟಿ ನಿರ್ದೇಶನ ನಟನೆ , ಹೊಂಬಾಳೆ ಫಿಲಮ್ಸ್ ನಿರ್ಮಾಣದ ಕಾಂತಾರ ಸಿನಿಮಾ , ಹಾಗೂ ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾ ಸೆಪ್ಟೆಂಬರ್ 30 ಕ್ಕೆ ರಿಲೀಸ್ ಆಗಲಿದೆ.. ಈ ಎರೆಡೂ ಸಿನಿಮಾಗಳು ಭಾರೀ ನಿರೀಕ್ಷೆ ಹುಟ್ಟುಹಾಕಿವೆ..
ಆದ್ರೆ ಮತ್ತೊಂದು ಪ್ಯಾನ್ ಇಂಡಿಯನ್ ಬಿಗ್ ಬಜೆಟ್ ಸಿನಿಮಾವಾದ ಪೊನ್ನಿಯನ್ ಸೆಲ್ವನ್ ಬಹಳ ಅದ್ಧೂರಿಯಾಗಿ ವಿಶ್ವಾದ್ಯಂತ 5 ಭಾಷೆಗಳಲ್ಲಿ ಸೆಪ್ಟೆಂಬರ್ 30 ರಂದೇ ರಿಲೀಸ್ ಆಗುತ್ತಿದೆ.. ಈ ಮೂಲಕ ಕನ್ನಡದ ರೆಡು ಸಿನಿಮಾಗಳಿಗೆ ಹೊಡೆತ ಬೀಳುವ ತಂಕವೂ ಇದೆ..
ಪೊನ್ನಿಯನ್ ಸೆಲ್ವನ್ ಸಿನಿಮಾದಿಂದಾಗಿ ಕನ್ನಡದ ಸಿನಿಮಾಗಳಿಗೆ ಕರ್ನಾಟದಲ್ಲಿ ಅಷ್ಟಾಗಿ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ಇದೆ.. ಕನ್ನಡಿಗರು ಮೊದಲು ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡುತ್ತಾರೆ.,. ಆದ್ರೆ ಸ್ಕ್ರೀನ್ ಗಳ ಕೊರತೆಯಿಂದಾಗಿ ಕಾಂತಾರಾ , ತೋತಾಪುರಿ ಕಲೆಕ್ಷನ್ ಗೆ ಹೊಡೆತ ಬೀಳಬಹುದೇ ಎಂಬ ಸಣ್ಣ ಅನುಮಾನ ಮೂಡಿದೆ ಅಷ್ಟೇ.. ಅಂದ್ಹಾಗೆ ತೋತಾಪುರಿ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ..
ಇದೆಲ್ಲದರ ನಡುವೆ ಮತ್ತೊಂದು ಸಿನಿಮಾ ಈ ಮೂರೂ ಸಿನಿಮಾಗಳಿಗಿಂತಲೂ ಮುಂಚೆಯೇ ರಿಲೀಸ್ ಆಗುತ್ತಿದೆ.. ಧನುಷ್ ನಟನೆಯ ನಾನೇ ವರುವೇನ್ ಸೆಪ್ಟೆಂಬರ್ 29 ಕ್ಕೆ ರಿಲೀಸ್ ಆಗುತ್ತಿದೆ..