ಕನ್ನಡದ ಹುಡುಗಿ ಪೂಜಾ ಹೆಗ್ಡೆ ಟಾಲಿವುಡ್ , ಕಾಲಿವುಡ್ ನಲ್ಲಿ ಸ್ಟಾರ್ ನಟಿ… ಬಹುಬೇಡಿಕಯ ನಟಿ.. ಅತಿ ಹೆಚ್ಚು ಸಂಭಾವವನೆ ಪಡೆಯುವ ನಟಿಯರ ಪೈಕಿ ಒಬ್ಬರು.. ಟಾಪ್ 10 ಟಾಲಿವುಡ್ ನಟಿಯರ ಪೈಕಿ ಅಗ್ರಸ್ಥಾನದಲ್ಲಿರೋ ನಟಿ.. ಆಧ್ರೆ ಅದ್ಯಾಕೋ ಪೂಜಾ ಹೆಗ್ಡೆ ನಸೀಬ್ ಸರಿ ಇಲ್ಲ ಎನ್ನುಸ್ತಿದೆ..
ಬುಟ್ಟಬೊಮ್ಮಗೆ ಅದೃಷ್ಟ ಕೈಕೊಟ್ಟಿದ್ಯಾ ಎನ್ನುವ ಮಾತುಗಳು ಆರಂಭವಾಗಿಬಿಟ್ಟಿದೆ… ಅಲಾ ವೈಕುಂಠಪುರಂ ಲೋ ಸಿನಿಮಾದ ಸಕ್ಸಸ್ ನ ನಂತರ ಬಹುತೇಕ ಪೂಜಾ ಹೆಗ್ಡೆಗೆ ಸಿಕ್ಕಿರೋದೆಲ್ಲಾ ಸೋಲೇ.. ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾ ನಿರೀಕ್ಷೆ ಮಟ್ಟದ ಯಶಸ್ಸು ಗಳಿಸಿಲ್ಲ.. ಆಚಾರ್ಯ ಅಟ್ಟರ್ ಫ್ಲಾಪ್ ಆಗಿದ್ದು , ಪೂಜಾ ಹೆಗ್ದೆ ಐರನ್ ಲೆಗ್ ಎಂದೇ ಟ್ರೋಲ್ ಆಘ್ತಿದ್ದಾರೆ..
ಸಾಲು ಸಾಲು ಸೋಲಾದರೂ ಪೂಜಾ ಹೆಗ್ಡೆ ಡಿಮ್ಯಾಂಡ್ ಕಡಿಮೆಯಾಗಿಲ್ಲ.. ದೊಡ್ಡ ದೊಡ್ಡ ಆಫರ್ ಗಳು ಸಿಗುತ್ತಿವೆ.. ಅಂದ್ಹಾಗೆ ಊಹಾಪೋಹಗಳ ಪ್ರಕಾರ ಪೂಜಾ ಹೆಗ್ಡೆ ಯಶ್ 19 ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ..
ಇತ್ತ ಮಹೇಶ್ ಬಾಬು ಸಿನಿಮಾದಲ್ಲೂ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎನ್ನುವ ಗುಮಾನಿ ಇದೆ.. ಮತ್ತೊಂದೆಡೆ ವಿಜಯ್ ದೇವರಕೊಂಡ – ಪುರಿ ಕಾಂಬಿನೇಷನ್ ನಲ್ಲಿ ಅನೌನ್ಸ್ ಆಗಿ ಸದ್ಯಕ್ಕೆ ನಿಂತುಹೋಗಿರುವ ಜನಗಣಮನದಲ್ಲೂ ಪೂಜಾ ನಾಯಕಿ ಎನ್ನಲಾಗ್ತಿತ್ತು..
ಅಂದ್ಹಾಗೆ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕೆಂಗೆಟ್ಟಿರುವ ಪೂಜಾ, ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರಂತೆ..
ತಮ್ಮ ಸೌಂದರ್ಯದ ಕಡೆ ಮತ್ತಷ್ಟು ಗಮನ ಹರಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಅಂದ್ಹಾಗೆ ಪೂಜಾ ಹೆಗ್ಡೆ ಮೂಗಿನ ಸರ್ಜರಿ ಮಾಡಿಸಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ..
ಆದ್ರೆ ಶಸ್ತ್ರ ಚಿಕಿತ್ಸೆಯ ನಂತರವಾದ್ರೂ ಅವರ ಅದೃಷ್ಟ ಬದಲಾಗುತ್ತಾ ಅನ್ನೋದನ್ನ ಕಾದುನೋಡ್ಬೇಕಿದೆ..