ರಾಮ್ ಚರಣ್ ಮನೆಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಡಿನ್ನರ್ ಪಾರ್ಟಿ..!! ಯಾರೆಲ್ಲಾ ಬಂದಿದ್ರು..??
ಸಿನಿಮಾ ತಾರೆಯರು ರಾಜಕಾರಣಿಗಳು ಹಾಗೂ ಕ್ರಿಕೆಟರ್ ಗಳು.. ಈ ಮೂವರ ನಡುವೆ ಅದೇನೋ ಒಂದು ಕನೆಕ್ಷನ್ ಇರುತ್ತೆ.. ಸ್ನೇಹದ್ದೇ ಇರಬಹುದು , ಪ್ರೀತಿಯದ್ದೇ ಇರಬಹುದು, ಮತ್ಯಾವುದೋ ಬಾಂಧವ್ಯ ಇರಬಹುದು..
ಸಿನಿಮಾ ತಾರೆಯರು ಕ್ರಿಕೆಟರ್ಸ್ , ರಾಜಕಾರಣಿಗಳು ಮೀಟ್ ಮಾಡೋದು ಕಾಮನ್ ಆಗಿರುತ್ತದೆ.. ಅಂದ್ಹಾಗೆ ಟಾಲಿವುಡ್ ನ ಸ್ಟಾರ್ ನಟ ರಾಮ್ ಚರಣ್ ಅವರ ಮನೆಗೆ ಇತ್ತೀಚೆಗೆ ಟೀಮ್ ಇಂಡಿಯಾದ ಟಗಾರರು ಡಿನ್ನರ್ ಗೆ ಬಂದಿದ್ದು ಈ ಸಂಬಂಧ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
ಸೆಪ್ಟೆಂಬರ್ 25 ಹೈದರಾಬಾದ್ ನ ಉಪ್ಪಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯ ನಡೀತು. ಪಂದ್ಯದಲ್ಲಿ ಭಾರತ ತಂಡ ರೋಚಕ ಗೆಲುವು ಸಾಧಿಸಿತ್ತು.
ಇದೇ ಪಂದ್ಯದ ನಂತರ ಟೀಂ ಇಂಡಿಯಾ ಆಟಗಾರರನ್ನು ಮನೆಗೆ ಆಹ್ವಾನಿಸಿ ನಟ ರಾಮ್ ಚರಣ್ ಆತಿಥ್ಯ ನೀಡಿದ್ದಾರೆ. ಬಹಳ ಅದ್ಧೂರಿಯಾಗಿ ಈ ಪಾರ್ಟಿಯನ್ನು ಆಯೋಜಿಸಿದ್ದರು ಎಂದು ಹೇಳಲಾಗುತ್ತಿದೆ. ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಆಟಗಾರರು ರಾಮ್ ಚರಣ್ ಮನೆಗೆ ತೆರಳಿದ್ದರು ಎನ್ನಲಾಗಿದೆ. ವಿಷೇಶ ಭೋಜನದ ವ್ಯವಸ್ಥೆಯಾಗಿತ್ತು ಎನ್ನಲಾಗಿದೆ..
ರಾಮ್ ಚರಣ್ ಸಿನಿಮಾ ವಿಚಾರವಾಗಿ ಮಾತನಾಡುವುದಾದ್ರೆ RRR ಬ್ರಹ್ಮಾಂಡ ಸಕ್ಸಸ್ ನ ನಂತರ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿರುವ ರಾಮ್ ಚರಣ್ ‘ಇಂಡಿಯನ್’ ಸ್ಟಾರ್ ನಿರ್ದೇಶಕ ಶಂಕರ್ ಅವರ ಜೊತೆಗೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಈ ಸಿನಿಮಾ ಸಹ ಬಿಗ್ ಬಜೆಟ್ ಪ್ಯಾನ್ ಇಂಡಿಯನ್ ಸಿನಿಮಾವಾಗಿದೆ..