ನನ್ನಮ್ಮ ಸೂಪರ್ ಸ್ಟಾರ್ ನ ಮೊದಲ ಸೀಸನ್ ನಲ್ಲಿ ವಿನ್ನರ್ ಆಗಿದ್ದ ವಂಶಿಕಾ ಪಟ್ ಪಟಾಕಿಯಂತೆ ಮಾತನಾಡ್ತಾ , ಟ್ಯಾಲೆಂಟ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.. ಆ ನಂತರ ಗಿಚ್ಚಿ ಗಿಲಿ ಗಿಲಿಯಲ್ಲಿ ತಮ್ಮ ನಟನೆ ಮೂಲಕ ಭರ್ಜರಿ ಮನರಂಜಿಸಿದ್ದ ವಂಶಿಕಾ ಈ ಶೋ ನಲ್ಲೂ ಗೆದ್ದು ಬೀಗಿದ್ರು..
ವಂಶಿಕಾ ನಟ ಮಾಸ್ಟರ್ ಆನಂದ್ ಮಗಳಾದ್ರೂ, ಆ ಟ್ಯಾಗ್ ಲೈನ್ ಬಳಸಿಕೊಳ್ದೇ ತನ್ನದೇ ಟ್ಯಾಲೆಂಟ್ ನಿಂದ ಗಮನ ಸೆಳೆಯುತ್ತಿದ್ದಾಳೆ …
ಪಟ್ ಪಟ್ ಅಂತ ಪಟಾಕಿಯಂತೆ ಮಾತನಾಡುತ್ತಾ ಎಲ್ಲರ ಮನಸ್ಸು ಗೆದ್ದಿರುವ ಮುದ್ದು ವಂಶಿಕಾ ಇದೀಗ ಖುದ್ದು ನಿರೂಪಣೆಗೆ ಇಳಿದಿದ್ದಾರೆ..
ಹೌದು..! ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಬರುತ್ತಿದೆ.. ಈ ಸೀಸನ್ ನಲ್ಲಿ ನಿರೂಪಣೆ ಮಾಡುತ್ತಿರೋದು ಮತ್ಯಾರೂ ಅಲ್ಲ.. ವಂಶಿಕಾ… ಶೀಘ್ರದಲ್ಲೇ ಈ ಶೋ ಆರಂಭವಾಗಲಿದ್ಯಂತೆ..
ಅಂದ್ಹಾಗೆ ಮೊದಲ ಸೀಸನ್ ಅನ್ನ ಹೋಸ್ಟ್ ಮಾಡಿದ್ದರು ಅನುಪಮಾ ಗೌಡ.. ಈಗ ವಂಶಿಕಾ ನಿರೂಪಕಿಯಾಗಿ ಬಡ್ತಿ ಪಡೆಯುತ್ತಿದ್ದಾರೆ..
ಅಂದ್ಹಾಗೆ ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿರುವ ಪ್ರೋಮೋದಲ್ಲಿ ವಂಶಿಕಾ ನಿರೂಪಣೆ ಮಾಡುತ್ತಿರುವುದು ಗೊತ್ತಾಗಿದೆ..
ಇನ್ನೂ ವಂಶಿಕಾ ಅವರೇ ಪದೇ ಪದೇ ಗೆಲ್ಲುತ್ತಿರುವುದು , ಬ್ಯಾಕ್ ಟು ಬ್ಯಾಕ್ ಶೋಗಳು ಸಿಗುತ್ತಿರುವುದಕ್ಕೆ ಕೆಲ ನೆಟ್ಟಿಗರು ಆಕ್ಷೇಪಗಳನ್ನೂ ವ್ಯಕ್ತಪಡಿಸುತ್ತಿದ್ದಾರೆ.. ಬೇರೆ ಮಕ್ಕಳಿಗೂ ಅವಕಾಶ ಕೊಡಿ ಎಂದು ಒಬ್ಬರಿಗೆ ಜಾಸ್ತಿ ಫೇಮ್ ಸಿಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ..