Ponniyan Selvan 1 : ಐಶ್ವರ್ಯ ರೈ ಗೆ ಇಷ್ಟೊಂದು ಸಂಭಾವನೆನಾ..??
ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸದ್ದು ಮಾಡುತ್ತಿದೆ.. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್ 30 ಕ್ಕೆ ಸಿನಿಮಾ ಬಹಳ ಅದ್ಧೂರಿಯಾಗಿ ವಿಶ್ವಾದ್ಯಂತ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ..
ಇದು 2022 ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಎರಡು ಭಾಗಗಳಲ್ಲಿ ಸಿನಿಮಾ ಬರುತ್ತಿದೆ.. ಸದ್ಯ, ಚಿತ್ರ ತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ವರದಿಗಳ ಪ್ರಕಾರ, ಪೊನ್ನಿಯಿನ್ ಸೆಲ್ವನ್ ಅವರ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳು 125 ಕೋಟಿ ರೂಪಾಯಿಗಳಿಗೆ ಮಾರಾಟವಾಗಿವೆ.
ಅಂದ್ಹಾಗೆ ಸಿನಿಮಾದಲ್ಲಿ ಘಟಾನುಘಟನಿ ನಟರು ಬಣ್ಣ ಹಚ್ಚಿದ್ದು ಇದು ಮಣಿರತ್ನಂ ಅವರ ಡ್ರೀಮ್ ಪ್ರಾಜೆಕ್ಟ್ ಆಗಿದೆ.. ಟ್ರೇಲರ್ ಕೂಡ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.. ಐಶ್ವರ್ಯಾ ರೈ , ವಿಕ್ರಮ್, ಕಾರ್ತಿ, ತ್ರಿಶಾ ಕೃಷ್ಣನ್ ಸೇರಿದಂತೆ ಹಲವು ಸ್ಟಾರ್ ನಟರು ಸಿನಿಮಾದಲ್ಲಿದ್ದಾರೆ..
ಅಂದ್ಹಾಗೆ ಟ್ರೇಲರ್ ನಲ್ಲಿ ಹೈಲೇಟ್ ಆಗಿರೋದು ಅಂದ್ರೆ ಐಶ್ವರ್ಯ ರೈ.. ಇದೀಗ ಅವರ ಸಂಭಾವನೆ ಬಗ್ಗೆ ಭಾರೀ ಚರ್ಚೆಯಾಗ್ತಿದೆ…
ಹೌದು..! ಈ ಸಿನಿಮಾದಲ್ಲಿ ಐಶ್ವರ್ಯ ರೈ ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು , ಈ ಸಿನಿಮಾದಲ್ಲಿ ನಟಿಸಲು ಐಶ್ವರ್ಯ ರೈ 10 ಕೋಟಿ ರೂ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಎನ್ನಲಾಗ್ತಿದೆ..
ಹೌದು..! ನಂದಿನಿ ಪಾತ್ರ ಮಾಡಲು ಐಶ್ವರ್ಯಾ ಬರೋಬ್ಬರಿ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದೇ ಹೇಳಲಾಗುತ್ತಿದೆ… ಅಮದ್ಹಾಗೆ ಈ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ವಿಕ್ರಮ್ ಅಂತೆ.. ಅವರನ್ನ ಬಿಟ್ಟರೆ ಗರಿಷ್ಠ ಸಂಭಾವನೆ ಪಡೆದವರು ಐಶ್ವರ್ಯ ರೈ ಎನ್ನಲಾಗ್ತಿದೆ.. ಚಿಯಾನ್ ವಿಕ್ರಮ್ ಅವರಿಗೆ 12 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎನ್ನಲಾಗ್ತಿದೆ..
ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು , ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಹೊಸ ದಾಖಲೆ ಬರೆಯುವ ಲೆಕ್ಕಾಚಾರವಿದೆ..
ಕಲ್ಕಿ ಕೃಷ್ಣಮೂರ್ತಿಯವರ 1955 ರ ಕಾದಂಬರಿ ಪೊನ್ನಿಯಿನ್ ಸೆಲ್ವನ್ ಆಧಾರಿತ ಚಲನಚಿತ್ರವನ್ನು ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಲಾಗಿದೆ. ಎಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಮೂಲತಃ ಅದ್ವಿತೀಯ ಚಲನಚಿತ್ರವಾಗಬೇಕೆಂದು ಉದ್ದೇಶಿಸಲಾಗಿತ್ತು, ನಂತರ ಅದನ್ನು ಎರಡು ಭಾಗಗಳಾಗಿ ವಿಭಜಿಸಲಾಯಿತು.
ಚಿತ್ರದ ಮೊದಲ ಭಾಗವು ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಎಂಬ ಐದು ಭಾಷೆಗಳಲ್ಲಿ ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಅಂದ್ಹಾಗೆ ಸುಮಾರು 500 ಕೋಟಿ ರೂ ಬಜೆಟ್ ನ ಈ ಸಿನಿಮಾ ಬಾಕ್ಸ್ ಆಫೀಸ್ ನಡುಗಿಸೋದ್ರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು..