KGF ಖ್ಯಾತಿಯ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಖ್ಯಾತಿಯ ಪ್ರಭಾಸ್ ( Prabhas) … ಇಬ್ಬರ ಡೇರಿಂಗ್ ಕಾಂಪಿನೇಷನ್ ನ ಸಿನಿಮಾವೇ ಸಲಾರ್ ( Salaar)… ಸಲಾರ್ ಸಿನಿಮಾ ಶೂಟಿಂಗ್ ಹಂತದಲ್ಲಿದೆ.. ಸಿನಿಮಾ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ಬರುತ್ತಿದೆ.. ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿದ್ದು , ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ..
ಆದ್ರೆ ಸಿನಿಮಾ ತಂಡಕ್ಕೆ ಆಗಾಗ ಸಮಸ್ಯೆಗಳೂ ಎದುರಾಗ್ತಿದೆ..
ಹೌದು..! ಸಿನಿಮಾದ ಸೆಟ್ ನ ಫೋಟೋಗಳು ಆಗಾಗ ಲೀಕ್ ಆಗ್ತಲೇ ಇದ್ದು ಸಿನಿಮಾತಂಡಕ್ಕೆ ತಲೆ ನೋವಾಗಿದೆ.. ಹೀಗಾಗಿಯೇ ಪ್ರಶಾಂತ್ ನೀಲ್ ಇದೀಗ ಕಠಿಣ ನಿಯಮವನ್ನ ಹೇರಿದ್ದಾರೆ.
ಹೌದು..! ಶೂಟಿಂಗ್ ಸೆಟ್ ಗೆ ಯಾರೇ ಬಂದರೂ, ಮೊಬೈಲ್ ( Mobile) ತರದಂತೆ ನಿರ್ಬಂಧ ಹೇರಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಸಲಾರ್ ಸಿನಿಮಾದ ಪ್ರಮುಖ ದೃಶ್ಯವೊಂದರ ಫೋಟೋ ಲೀಕ್ ಆಗಿ, ಭಾರೀ ವೈರಲ್ ಆಗಿತ್ತು. ಶೂಟಿಂಗ್ ನ ಹಲವು ದೃಶ್ಯಗಳನ್ನು ವಿಡಿಯೋ ಮಾಡಿಯೂ ಹರಿ ಬಿಡಲಾಗಿತ್ತು. ಹೀಗಾಗಿ ಮುಂದೆ ಇಂತಹ ಘಟನೆಗಳು ಮರುಕಳಿಸಬಾರದೆಂದು ನಟರನಿಗೂ ಅನ್ವಯವಾಗಗುವಂತೆ ಮೊಬೈಲ್ ನಿರ್ಬಂಧಿಸಿದ್ದಾರೆ ಎನ್ನಲಾಗಿದೆ..
ಕಲಾವಿದರು ಶೂಟಿಂಗ್ ಸ್ಪಾಟ್ ನಲ್ಲಿ ಮೊಬೈಲ್ ಬಳಸದಂತೆ ಮನವೊಲಿಸಿದ್ದು, ಶೂಟಿಂಗ್ ಗೆ ಬರುವಾಗ ತಮ್ಮ ಮೊಬೈಲ್ ಗಳನ್ನು ಕ್ಯಾರವಾನ್ ಗಳಲ್ಲೇ ಬಿಟ್ಟು ಬರುವಂತೆ ಹೇಳಿದ್ದಾರೆ. ಪ್ರಭಾಸ್ ಸೇರಿದಂತೆ ಎಲ್ಲರೂ ಈ ನಿಯಮವನ್ನು ಪಾಲಿಸಬೇಕಾಗಿದೆ. ತಂತ್ರಜ್ಞರು ಮತ್ತು ಇತರ ಕೆಲಸಗಾರರು ಕೂಡ ಕಟ್ಟು ನಿಟ್ಟಾಗಿ ಈ ನಿಯಮವನ್ನು ಪಾಲಿಸಬೇಕಿದೆ..