ಮ್ಯಾಜಿಕ್ ಮ್ಯೂಸಿಶಿಯನ್ ಅರ್ಜುನ್ ಜನ್ಯ ಇದೀಗ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ನಿರ್ದೇಶನಕ್ಕೆ ಮುಂದಾಗಿದ್ದಾರೆ.. ಜನ್ಯರ ಮೊದಲ ಸಿನಿಮಾ ಯಾವುದು ನಾಯಕ ಯಾರು..?? ಈ ಕುತೂಹಲಗಳಿಗೆ ಇದೀಗ ಇಂದು ಇಂಟ್ರೆಸ್ಟಿಂಗ್ ಜೊತೆಗೆ ಎಕ್ಸೈಟಿಂಗ್ ಉತ್ತರ ಸಿಕ್ಕಿದೆ..
ರಿಯಲ್ ಸ್ಟಾರ್ ಹಾಗೂ ಹ್ಯಾಟ್ರಿಕ್ ಹೀರೋ ಫ್ಯಾನ್ಸ್ ಖುಷಿ ಪಡುವಂತಹ ಸುದ್ದಿ ಇದಾಗಿದೆ.. ಹೌದು..! ಮೂಲಗಳ ಪ್ರಕಾರ ಅರ್ಜುನ್ ಜನ್ಯ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು ಹೀರೋಗಳಂತೆ.. ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಉಪೇಂದ್ರ ಈ ಸಿನಿಮಾಗಾಗಿ ಒಂದಾಗ್ತಿದ್ದಾರಂತೆ..
ಈ ಸುದ್ದಿ ಕೇಳ್ತಿದ್ದ ಹಾಗೆ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.. ವರ್ಷಗಳ ಹಿಂದೆ ಪ್ರೀತ್ಸೆ ಸಿನಿಮಾದಲ್ಲಿ ಇಬ್ಬರ ಕಾಂಬಿನೇಷನ್ ಜನರನ್ನ ಸಖತ್ ಮನರಂಜಿಸಿದ್ದರು.. ಈ ಸಿನಿಮಾ ಹಿಟ್ ಆಗಿತ್ತು.. ಅದ್ರಲ್ಲೂ ಉಪ್ಪಿ ನಿರ್ದೇಶನ ಶಿವಣ್ಣ ನಟನೆಯ ಓಂ ಸಿನಿಮಾ ರಿಲೀಸ್ ಆಗಿ ದಶಕಗಳೇ ಕಳೆದ್ರೂ ಸಿನಿಮಾದ ಕ್ರೇಜ್ ಮಾತ್ರ ಚೂರೂ ಕಡಿಮೆಯಾಗಿಲ್ಲ..
ಇದೀಗ ಇದೇ ಕಾಂಬಿನೇಷನ್ ಅರ್ಜುನ್ ಜನ್ಯರ ಸಿನಿಮಾಗಾಗಿ ಒಂದಾಗ್ತಿದ್ದಾರೆ ಅನ್ನೋ ಸುದ್ದಿ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ..
ಅಂದ್ಹಾಗೆ ಈ ಹಿಂದೆ ಅರ್ಜುನ್ ಜನ್ಯ ಸಿನಿಮಾ ಡೈರೆಕ್ಟ್ ಮಾಡಲಿದ್ದಾರೆ ಎಂದಾಗಲೇ ಶಿವಣ್ಣ ಹೀರೋ ಎನ್ನುವುದು ಗೊತ್ತಾಗಿತ್ತು.. ಇದೀಗ ಸಿನಿಮಾದಲ್ಲಿ ಉಪೇಂದ್ರ ಅವರ ಹೆಸರು ಕೂಡ ಸೇರಿಕೊಂಡಿದೆ..
ಸಿನಿಮಾಗೆ ರಮೇಶ್ ರೆಡ್ಡಿ ಬಂಡವಾಳ ಹೂಡಲಿದ್ದಾರೆ.. ಸಿನಿಮಾ ಶೀಘ್ರವೇ ಸೆಟ್ಟೇರುವ ನಿರೀಕ್ಷೆಯಿದೆ..
ಸದ್ಯ ಶಿವರಾಜ್ ಕುಮಾರ್ ಅವರು ಸಾಲು ಸಾಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾಎರೆ.. ವೇದ ಸಿನಿಮಾದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.. ಇತ್ತ ಉಪೇಂದ್ರ ಅವರು ಕಬ್ಜ ಸಿನಿಮಾದಲ್ಲಿ ಬ್ಯುಸಿಯಿದ್ದು , ಅವರದ್ದೇ ನಿರ್ದೇಶನದ UI ಸಿನಿಮಾದಲ್ಲೂ ಬ್ಯುಸಿಯಿದ್ದಾರೆ..