ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವಾದ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದು ಬಾಕ್ಸ್ ಆಫೀಸ್ ನಲ್ಲೂ ಒಳ್ಳೆ ಕಮಾಯಿ ಮಾಡಿದೆ.. ಸಿನಿಮಾ ರಿಲೀಸ್ ಆಗಿ ತಿಂಗಳೂ ಕಳೆದಿದೆ,.. ಅಚ್ಚರಿಯಂದ್ರೆ ಈ ಸಿನಿಮಾ ಈಗಲೂ ನಾರ್ತ್ ನಲ್ಲಿ ಅಬ್ಬರಿಸುತ್ತಿದೆ..
ಶ್ವಾನ ಹಾಗೂ ಮನುಷ್ಯನ ಭಾವನಾತ್ಮಕ ಬಾಂಧವ್ಯದ ಕಥಾಹಂದರವಿರುವ ಈ ಸಿನಿಮಗೆ ಅಭಿಮಾನಿಗಳು ಫಿದಾ ಆಗಿದ್ದು , ಹಿಂದಿ ಪ್ರೇಕ್ಷಕರೂ ಕೂಡ ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ..
ಈ ಸಿನಿಮಾ ರಿಲೀಸ್ ಆಗಿ 100 ದಿನ ಕಳೆದಿದೆ. ಈಗಲೂ ಸಿನಿಮಾ ಥಿಯೇಟರ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ..
ಹೌದು..! ಜೂನ್ 10ರಂದು 5 ಭಾಷೆಗಳಲ್ಲಿ ರಿಲೀಸ್ ಆದ ಸಿನಿಮಾ ಧೂಳೆಬ್ಬಿಸಿತ್ತು.. ಸಿನಿಮಾ ಒಟ್ಟು 150 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.
ಅಂದ್ಹಾಗೆ ಹರಿಯಾಣದಲ್ಲಿ 777 ಚಾರ್ಲಿ ಈಗಲೂ ಪ್ರದರ್ಶನ ಕಾಣುತ್ತಿದೆ.. ಗುರುಗ್ರಾಮ್ ನಲ್ಲಿರುವ ಥಿಯೇಟರ್‌ನಲ್ಲಿ ಈ ವಾರವೂ ಯಶಸ್ವಿಯಾಗಿ ಚಾರ್ಲಿ ಪ್ರದರ್ಶನ ಕಾಣುತ್ತಿದೆ. ಗುರುಗ್ರಾಮ್ ಧಿಶೂಂ ಸಿನಿಮಾಸ್ ನಲ್ಲಿ ಇಂದು ಮತ್ತು ನಾಳೆ 777 ಚಾರ್ಲಿ ಚಿತ್ರದ ಎರಡು ಶೋ ಪ್ರದರ್ಶನ ಕಾಣುತ್ತಿದೆ.