Biggboss Kannada 9 : ಸಂಬರಗಿಗೆ ‘ಕುತಂತ್ರಿ ಕಲಾವಿದ’ ಬ್ಯಾಂಡ್ ಕೊಟ್ಟಿದ್ಯಾಕೆ ಸಾನ್ಯ..??
ಬಿಗ್ ಬಾಸ್ ಸೆಪ್ಟೆಂಬರ್ 24 ರಿಂದ ಶುರುವಾಗಿದೆ,.. 18 ಮಂದಿ ಮನೆ ಸೇರಿದ್ದಾರೆ.. ಮಾಜಿ ಸ್ಪರ್ಧಿಗಳು ಒಟಿಟಿ ಕಂಟೆಸ್ಟೆಂಟ್ ಗಳು ಹೊಸಬರ ಸಮಾಗಮ ಬಹಳ ರೋಚಕವಾಗಿದ್ದು , ಜನರು ಎಕ್ಸೈಟ್ ಆಗಿದ್ದಾರೆ.. ಅಂದ್ಹಾಗೆ ಮೊದಲನೇ ದಿನವೇ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು.. ಅದಕ್ಕೆ ಕಾರಣ ಪ್ರಶಾಂತ್ ಸಂಬರಗಿಯವರೇ ಆಗಿದ್ದರು..
ಸುಖಾ ಸುಮ್ಮನೆ ಆರ್ಯವರ್ಧನ್ ಗುರೂಜಿ ಜೊತೆಗೆ ಕಿರಿಕ್ ಮಾಡಿಕೊಂಡು ಗಲಾಟೆ ಮಾಡಿಕೊಂಡಿದ್ದರು.. ಹೀಗಾಗಿ ನೆಟ್ಟಿಗರು ಪ್ರಶಾಂತ್ ಸಂಬರಗಿ ತಮ್ಮ ಹಳೇ ಚಾಳಿಯನ್ನೇ ಮುಂದುವರೆಸಿದ್ದಾರೆ ಎಂದು ಮಾತನಾಡಲಾರಂಭಿಸಿದ್ದಾರೆ.. ಸಂಬರಗಿ ಈಗಾಗಾಲೇ ಮನೆಯಲ್ಲಿ ಕೆಲವರ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ.. ದರ್ಶನ್ ಚಂದ್ರಪ್ಪ , ರೂಪೇಶ್ ರಾಜಣ್ಣ ಜೊತೆಗೆ ಚಿಕ್ಕ ಚಿಕ್ಕ ವಿಚಾರಕ್ಕೂ ಗಲಾಟೆ ಮಾಡಿಕೊಂಡಿದ್ದಾರೆ…
ಈ ನಡುವೆ ಮನೆ ಸದಸ್ಯರಿಗೆ ಬ್ಯಾಂಡ್ ನೀಡುವ ಬಿಗ್ ಬಾಸ್ ಆದೇಶದಂತೆ ಸಾನ್ಯಾ ಐಯರ್ ಪ್ರಶಾಂತ್ ಸಂಬರಗಿಗೆ ಕುತಂತ್ರಿ ಕಲಾವಿದ ಎಂಬ ಬ್ಯಾಂಡ್ ಕಟ್ಟಿದ್ದಾರೆ..
ಬಿಗ್ ಬಾಸ್ ಮನೆ ಒಳಗೆ ಬರುವ ಪ್ರತಿಯೊಬ್ಬರಿಗೂ ಕಿಚ್ಚ ಸುದೀಪ್, ಒಂದೊಂದು ಬ್ಯಾಂಡ್ ಕೊಟ್ಟು ಕಳುಹಿಸಿದ್ದರು. ಆ ಬ್ಯಾಂಡ್ ಮೇಲೆ ಒಂದೊಂದು ಹೆಸರಿತ್ತು. ಅದನ್ನು ಮನೆಯಲ್ಲಿರುವ ತಮ್ಮಿಷ್ಟದ ವ್ಯಕ್ತಿಗೆ ಕಟ್ಟಲು ಸೂಚಿಸಿದ್ದರು. ಆ ಟಾಸ್ಕ್ ಈಗ ನಡೆದಿದೆ. ಸಾನ್ಯಗೆ ಸಿಕ್ಕ ಬ್ಯಾಂಡ್ ನಲ್ಲಿ ‘ಕಲಾವಿದ’ ಎಂದು ಬರೆಯಲಾಗಿತ್ತು. ಕಲಾವಿದ ಪದವನ್ನು ಕುತಂತ್ರಿ ಕಲೆ ಎಂದು ಬದಲಾಯಿಸಿ ಸಾನ್ಯ ಅಯ್ಯರ್ ಸಂಬರ್ಗಿಗೆ ಕಟ್ಟಿದರು.
ಇದರಿಂದಾಗಿ ಪ್ರಶಾಂತ್ ಸಂಬರಗಿಗೆ ಸಿಕ್ಕಾಪಟ್ಟೆ ಬೇಜಾರಾಗಿರುವಂತೆ ಕಾಣುತ್ತಿದೆ..
ಅಂದ್ಹಾಗೆ ಏನೇ ಆದ್ರೂ ಯಾರೇ ಆಗಲಿ ತಮಗೆ ಕೊಟ್ಟಿದ್ದನ್ನ ಡಬಲ್ ಆಗಿ ವಾಪಸ್ ಕೊಡುವ ಗುಣವಿರುವ ಸಂಬರಗಿ ಇದೀಗ ಮುಂದಿನ ದಿನಗಳಲ್ಲಿ ಸಾನ್ಯಾ ಜೊತೆಗೆ ಕಿರಿಕ್ ಮಾಡಿಕೊಳ್ತಾರಾ ಎಂಬ ಪ್ರಶ್ನೆ ಎಲ್ಲರದ್ದು…