Gaalipata 2
ಗೋಲ್ಡನ್ ಸ್ಟಾರ್ ಗಣೇಶ್ ಯೋಗರಾಜ್ ಭಟ್ , ದಿಗಂತ್ , ಪವನ್ ಕಾಂಬಿನೇಷನ್ ನ ಗಾಳಿಪಟ 2 ಸಿನಿಮಾ ಥಿಯೇಟರ್ ಗಳಲ್ಲಿ ಉತ್ತಮ ಪ್ರದರ್ಶನ ಕಂಡು ಒಳ್ಳೆಯ ಕಲೆಕ್ಷನ್ ಮಾಡಿದೆ.. ಇದೀಗ ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ..
ಯೋಗರಾಜ್ ಭಟ್ ಮತ್ತೆ ಗಣಿ ಕಾಂಬಿನೇಷನ್ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದು , ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ..
ಅಲ್ಲದೇ ಸಿನಿಮಾ ಸಕ್ಸಸ್ ಕಂಡ ಹಿನ್ನೆಲೆ ಗೋಲ್ಡನ್ ಸ್ಟಾರ್ ಗಣೇಶ್ ಪತ್ರದ ಮೂಲಕ ಅಭಿಮಾನಿಗಳಿಗೆ ಧನ್ಯವಾದಗಳನ್ನ ಅರ್ಪಿಸಿದ್ದರು.
ಪ್ರಸ್ತುತ ಬಾನದಾರಿಯಲ್ಲಿ ಹಾಗೂ ತ್ರಿಬಲ್ ರೈಡಿಂಗ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್,.
ಅಂದ್ಹಾಗೆ ದಸರಾ ಹಬ್ಬದ ಪ್ರಯುಕ್ತ ಗಾಳಿಪಟ 2 ಸಿನಿಮಾ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ.
ಆಗಸ್ಟ್ 12ರಂದು ರಾಜ್ಯ ಸೇರಿದಂತೆ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿಯೂ ಸಿನಿಮಾ ರಿಲೀಸ್ ಆಗಿತ್ತು..
ಚಿತ್ರದಲ್ಲಿ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಗಣೇಶ್ ಅವರ ಪುತ್ರ ವಿಹಾನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಗಾಳಿಪಟ 2 ಸಿನಿಮಾ ಅಕ್ಟೋಬರ್ 5ರಂದು ದಸರಾ ಹಬ್ಬದ ಪ್ರಯುಕ್ತ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಹಿರಿಯ ನಟ ಅನಂತ್ ನಾಗ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.. ಪದ್ಮಜಾ ರಾವ್, ಸುಧಾ ಬೆಳವಾಡಿ, ರಂಗಾಯಣ ರಘು ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ.
ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ. ರಮೇಶ್ ರೆಡ್ಡಿ ನಿರ್ಮಾಣದಲ್ಲಿ ಮೂಡಿಬಂದಿದ್ದ ಗಾಳಿಪಟ 2
ಸಿನಿಮಾವನ್ನ ಥಿಯೇಟರ್ ನಲ್ಲಿ ನೋಡಲು ಸಾಧ್ಯವಾಗದೇ ಇದ್ದವರು ಇದೀಗ ಮನೆಯಲ್ಲಿ ಫ್ಯಾಮಿಲಿ ಜೊತೆಗೆ ನೋಡಿ ಎಂಜಾಯ್ ಮಾಡಬಹುದು..