ಭಾರತದಲ್ಲಿ ಅತಿ ಹೆಚ್ಚು ಇಷ್ಟಪಡಲಾದ ರಿಯಾಲಿಟಿ ಶೋಗಳ ಪೈಕಿ ಖತ್ರೋಂಕೆ ಖಿಲಾಡಿ ಕೂಡ ದು.. ಡೇರಿಂಗ್ ನಿರ್ದೇಶಕ ಕಮ್ ಡೈರೆಕ್ಟರ್ ರೋಹಿತ್ ಶೆಟ್ಟಿ ನಡೆಸಿಕೊಡುವ ಖತ್ರೋಂಕೆ ಖಿಲಾಡಿ ರಿಯಲ್ ಸ್ಟಂಟ್ ಗಳ ಶೋ..
ಇಲ್ಲಿ ಕೊಡುಇವ ಸ್ಟಂಟ್ ಗಳನ್ನ ಮಾಡಬೇಕಂದ್ರೆ ಗಟ್ಟಿ ಗುಂಡಿಗೆ ಬೇಕು.. ಥಹ ಧೈರ್ಯವಂತರೇ ಆದ್ರೂ ಎದೆ ನಡುಗಿಸುವಂತಹ ಸ್ಟಂಟ್ ಗಳ ನ್ನ ಮಾಡಿಸಲಾಗುತ್ತೆ..
ಹೆಬ್ಬಾವಿನ ಜೊತೆಗೆ ಆಟ , ಮೊಸಳೆಗಳು , ವಿಷ ಜಂತುಗಳ ಜೊತೆಗೆ ಸ್ಟಂಟ್ ಮಾಡೋದು , ಅಂಡರ್ ವಾಟರ್ ನಲ್ಲಿ ಉಸಿರುಗಟ್ಟಿ ಟಾಸ್ಕ್ ಕಂಪ್ಲೀಟ್ ಮಾಡಬೇಕು… ನೆಲದಿಂದ ಮೀಟರ್ ಗಟ್ಟಲೆ ಎತ್ತರದಲ್ಲಿ ನಿಂತು ಸ್ಟಂಟ್ ಕಂಪ್ಲೀಟ್ ಮಾಡುವುದು , ರನ್ನಿಂಗ್ ಹೆಲಿಕಾಪ್ಟರ್ ನಿಂದ ಹೊರಗೆ ಜಿಗಿಯುವುದು , ರೇಸಿಂಗ್ ಕಾರ್ ನಲ್ಲಿ ಭಯ ಬಿಟ್ಟು ಸ್ಟಂಟ್ ಮಾಡುವುದು… ಹೀಗೆ ಹೇಳ್ತಾ ಹೋದ್ರೆ ಸಾಕಷ್ಟು ಇದೆ.. ಇಂತಹ ಕಠಿಣ ಸ್ಟಂಟ್ ಗಳನ್ನ ದಾಟಿಕೊಂಡು …. ಫಿನಾಲೆ ತಲುಪಿದವುದೇ ಒಂದು ಸಾಧನೆ..
ಅಂದ್ಹಾಗೆ ಈ ಶೋಗೆ ಅದೆಷ್ಟು ಕ್ರೇಜ್ ಇದೆ ಅನ್ನೋದಕ್ಕೆ 12 ಸೀಸನ್ ಗಳು ಮುಗಿದಿರೋದೇ ಸಾಕ್ಷಿ.. ಸದ್ಯ ಇತ್ತೀಚೆಗೆ ಸೀಸನ್ 12 ಮುಕ್ತಾಯವಾಗಿದೆ… 12 ಸೀಸನ್ ನ ವಿನ್ನರ್ ಆಗಿ ಡ್ಯಾನ್ಸರ್ ತುಷಾರ್ ಕಾಲಿಯಾ ಟ್ರೋಫಿಗೆ ಮುತ್ತಿಟ್ಟಿದ್ದಾರೆ.. 20 ಲಕ್ಷ ಹಣ ಮತ್ತು ಸ್ವಿಫ್ಟ್ ಕಾರನ್ನ ಗೆದ್ದುಕೊಂಡಿದ್ದಾರೆ.. ಇನ್ನೂ ಟಿಕ್ ಟಾಕ್ ಮೂಲಕ ಫೇ,ಮಸ್ ಆದ ಫೈಸಲ್ ಶೇಖ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ..
ತುಷಾರ್ ಆರಂಭದಿಂದಲೂ ಸ್ಟ್ರಾಂಗ್ ಗಿಯೇ ಕಾಂಪೀಟ್ ಮಾಡಿದರು.. ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿಯೇ ಗುರುತಿಸಿಕೊಂಡರು..
ಅಂದ್ಹಾಗೆ ಗ್ರ್ಯಾಂಡ್ ಫಿನಾಲೆ ಸಖತ್ ಕಲರ್ ಫುಲ್ ಆಗಿತ್ತು.. ರೋಹಿತ್ ಅವರ ಮುಂದಿನ ಚಿತ್ರ ಸರ್ಕಸ್ ನಲ್ಲಿ ನಟಿಸಲಿರುವ ರಣವೀರ್ ಸಿಂಗ್ ಮತ್ತು ಪೂಜಾ ಹೆಗ್ಡೆ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..
ಅಲ್ಲದೇ ಜಾನಿ ಲಿವರ್, ಸಂಜಯ್ ಮಿಶ್ರಾ, ವರುಣ್ ಶರ್ಮಾ ಕೂಡ ಗಮಿಸಿದ್ದರು.. 12 ನೇ ಸೀಸನ್ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ನಡೆದಿದೆ.
ಖತ್ರೋನ್ ಕೆ ಖಿಲಾಡಿ 12 ರಲ್ಲಿ ತುಷಾರ್ , ಫೈಸಲ್ , ಶ್ರೀತಿ ಝಾ, ನಿಶಾಂತ್ ಭಟ್, ಜನ್ನತ್ ಜುಬೇರ್, ಶಿವಾಂಗಿ ಜೋಶಿ, ಪ್ರತೀಕ್ , ಎರಿಕಾ ಪ್ಯಾಕರ್ಡ್, ಚೇತನಾ ಪಾಂಡೆ, ಕನಿಕಾ ಮಾನ್, ಅನೆರಿ ವಜಾನಿ ರಾಜೀವ್ ಅದಾತಿಯಾ ಭಾಗವಹಿಸಿದ್ದರು.
ಟ್ರೋಫಿ ಗೆದ್ದಿರುವ ತುಷಾರ್ ನೃತ್ಯ ನಿರ್ದೇಶಕರಾಗಿ ಜಲಕ್ ದಿಖ್ಲಾ ಜಾ 6 ಮತ್ತು ಜಲಕ್ ದಿಖ್ಲಾ ಜಾ 7 ಸೇರಿದಂತೆ ನೃತ್ಯ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನ ಆರನೇ ಮತ್ತು ಏಳನೇ ಸೀಸನ್ ಗಳಲ್ಲಿ ವೇದಿಕೆ ನಿರ್ದೇಶಕರಾಗಿದ್ದರು. ಅವರು ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ದೀವಾನೆಯಲ್ಲಿ ತೀರ್ಪುಗಾರರಾಗಿದ್ದರು.
ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಅವರ ಚಿತ್ರ ಏ ದಿಲ್ ಹೈ ಮುಷ್ಕಿಲ್ ನೊಂದಿಗೆ ಬಾಲಿವುಡ್‌ನಲ್ಲಿ ನೃತ್ಯ ಸಂಯೋಜಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ತುಷಾರ್ ಅವರು ವಾರ್, ಹಾಫ್ ಗರ್ಲ್‌ಫ್ರೆಂಡ್, ಓಕೆ ಜಾನು, ಧಡಕ್, ದಿ ಜೋಯಾ ಫ್ಯಾಕ್ಟರ್, ಜಂಗ್ಲೀ ಮತ್ತು ಹೇಟ್ ಸ್ಟೋರಿ 4 ನಂತಹ ಚಿತ್ರಗಳಲ್ಲಿ ನೃತ್ಯ ಸಂಯೋಜನೆ ಮಾಡಿದ್ದಾರೆ.