ಟಾಲಿವುಡ್ ನ ಸ್ಟಾರ್ ನಟ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಅವರು ನಿಧನರಾಗಿದ್ದಾರೆ.. ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಇಂದಿರಾ ದೇವಿ ಅವರು (Sep 28) ಬೆಳಿಗಿನ ಜಾವ 4 ಗಂಟೆಗೆ ಎಐಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ..
ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.. ಅವರಿಗೆ ಹೈದರಾಬಾದ್ ನ ಎಐಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ..
ಮಾತೃ ವಿಯೋಗದ ದುಃಖದಲ್ಲಿರುವ ಮಹೇಶ್ ಬಾಬುಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಸಾಂತ್ವಾನ ಹೇಳುತ್ತಿದ್ದಾರೆ.. ಸಿನಿಮಾ ಗಣ್ಯರು ಹಾಗೂ ರಾಜಕೀಯ ಮುಖಂಡರುಗಳು ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಅವರ ಅಂತಿಮ ದರ್ಶನಕ್ಕೆ ಅವರ ನಿವಾಸದತ್ತ ತೆರಳಿದ್ದಾರೆ..
ಮಹೇಶ್ ಬಾಬು ಅವರ ತಂದೆ ಕೃಷ್ಣ ಘಟ್ಟಮನೇನಿ ಅವರಿಗೆ ಇಂದಿರಾದೇವಿ ಮೊದಲನೇ ಪತ್ನಿಯಾಗಿದ್ದು, ಈ ದಂಪತಿಗಳಿಗೆ ಮಹೇಶ್ ಬಾಬು ಸೇರಿದಂತೆ ಒಟ್ಟು ಐವರು ಮಕ್ಕಳಿದ್ದಾರೆ. ಕೃಷ್ಣ ಅವರು ನಂತರ ನಟಿ ವಿಜಯ ನಿರ್ಮಲಾ ಅವರನ್ನು ವಿವಾಹವಾಗಿದ್ದರು.