BiggBoss Kannada 9 : ಕಾವ್ಯಾ – ರೂಪೇಶ್ ನಡುವೆ ಹೆಚ್ಚಾಗುತ್ತಿದೆ ಆತ್ಮೀಯತೆ..!! ಆದ್ರೆ ಸಾನ್ಯಾಗೆ ಸಿಟ್ಯಾಕೆ..??
ಟಿವಿ ಬಿಗ್ ಬಾಸ್ ಸೀಸನ್ 9 ರಲ್ಲಿ ಸಾಕಷ್ಟು ಕುತೂಹಳಗಳು ಹುಟ್ಟಿದೆ.. ಅನುಮಾನಗಳ ಜೊತೆಗೆ ಒಂದಷ್ಟು ಮನೆಯಲ್ಲಿ ಕಿರಿಕ್ ಆಗ್ತಿದ್ದು , ಪ್ರೇಕ್ಷಕರಿಗೆ ಭರ್ಜರಿ ಎಂಟರ್ ಟೈನ್ ಮೆಂಟ್ ಸಿಗ್ತಿದೆ.. ಅದ್ರಲ್ಲೂ ಒಟಿಟಿ ಸೀಸನ್ ನಲ್ಲಿ ಸದಾ ಒಟ್ಟಿಗೆ ಜೋಡಿ ಹಕ್ಕಿಗಳಂತೆ ಇರುತ್ತಿದ್ದ ರೂಪೇಶ್ ಸಾನ್ಯಾ ಸಹ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ..
ಆದ್ರೆ ಈ ಇಬ್ಬರ ನಡುವೆ ಇದೀಗ ಕಾವ್ಯಶ್ರೀ ಎಂಟ್ರಿಯಾಗಿದ್ದಾರೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿದೆ.. ಕಾವ್ಯಶ್ರೀ ರೂಪೇಶ್ ಬಹಳ ಕ್ಲೋಸ್ ಆಗ್ತಿದ್ದಾರೆ ಇದರಿಂದ ಸಾನ್ಯಾಗೆ ಬೇಜಾರಾಗುತ್ತಿದೆ ಎಂದೆಲ್ಲಾ ಮಾತುಗಳು ಶುರುವಾಗಿದೆ..
ಈ ಹಿಂದೆ ಓಟಿಟಿಯಲ್ಲಿ ಸದಾ ನಾನು ರೂಪೇಶ್ ಕೇವಲ ಸ್ನೇಹಿತರಷ್ಟೇ ಎಂದು ಒತ್ತಿ ಒತ್ತಿ ಹೇಳುತ್ತಿದ್ದ ಸಾನ್ಯಾ ಯಾಕೋ ಈಗ ಕಾವ್ಯ ರೂಪೇಶ್ ಆತ್ಮೀಯತೆಯನ್ನ ಸಹಿಸಿಕೊಳ್ಳುತ್ತಿಲ್ಲ ಎಂಬ ಅನುಮಾನ ಮೂಡುತ್ತಿದೆ..
ಗುರೂಜಿ ತಮಾಷೆಗೆ ರೂಪೇಶ್ ಮತ್ತು ಕಾವ್ಯಶ್ರೀಗೆ ಪ್ರಪೋಸ್ ಮಾಡುವ ಟಾಸ್ಕ್ ನೀಡಿದ್ದರು. ಅದರಂತೆ ಕಾವ್ಯ ರೂಪೇಶ್ ಗೆ ತಮಾಷೆಯಾಗಿ ಪ್ರಪೋಸ್ ಮಾಡಿದ್ದಾರೆ. ಆಸ್ತಿ ಇದೆ ನನ್ನ ಒಪ್ಪಿಕೊಳ್ಳಿ ಎಂದು ಕಾವ್ಯಶ್ರೀ ಹೇಳಿದ್ದಾರೆ.. ಅದಕ್ಕೆ ರೂಪೇಶ್ ಕೂಡ ತಮಾಷೆಯಾಗಿ ಉತ್ತರಿಸುತ್ತಾ ಹೋ ಹಾಗಾದ್ರೆ ನೋಡಬಹುದು ಎಂದಿದ್ದಾರೆ..
ನನ್ನ ನಂಬರ್ ಫೀಡ್ ಮಾಡಿಕೊಳ್ಳಿ ಎಂದು ಕಾವ್ಯ ಹೇಳಿದಾಗ ನನ್ನ ಹಾರ್ಟ್ನಲ್ಲಿ ಫೀಡ್ ಮಾಡಿಕೊಳ್ಳುತ್ತೀನಿ ಎನ್ನುತ್ತಾರೆ ರೂಪೇಶ್.. ಆಗ ನನಗೆ ನಾಚಿಕೆ ಆಗುತ್ತಿದೆ ಎಂದು ಕಾವ್ಯಶ್ರೀ ಹೇಳುತ್ತಾರೆ.. ಆದ್ರೆ ಇದನ್ನ ದೂರದಿಂದಲೇ ಗಮನಿಸುತ್ತಿದ್ದ ಸಾನ್ಯಾರ ಮುಖ ಭಾವನೆಯಲ್ಲಿ ಅವರಿಗೆ ಬೇಸರವಾಗಿರುವುದು ಎದ್ದು ಕಾಣುತ್ತಿದ್ದು , ಇದನ್ನೇ ನೆಟ್ಟಿಗರೂ ಕೂಡ ಮಾತನಾಡುತ್ತಾ , ಸಾನ್ಯಾ ಕೇವಲ ರೂಪೇಶ್ ಸ್ನೇಹಿತ ಎಂದ್ರೆ ಈಗ ಯಾಕೆ ಬೇಜಾರಾಗಬೇಕು ಎಂದೆಲ್ಲಾ ಮಾತನಾಡಿಕೊಳ್ತಿದ್ದಾರೆ..
ಆದ್ರೆ ಒಂದೊಮ್ಮೆ ಸಾನ್ಯಾ ಜೆಲಸ್ ಆಗಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಟ್ರಯಾಂಗಲ್ ಲವ್ ಸ್ಟೋರಿ ಕಿತ್ತಾಟ ನೋಡಲಿಕ್ಕೂ ಸಿಗಬಹುದು ಎನಿಸುತ್ತಿದೆ..