ಬಿಗ್ ಬಾಸ್ ಕನ್ನಡ ಸೀಸನ್ 9 ಈಗಾಗಲೇ ಸಾಕಷ್ಟು ಕುತೂಗಳಗಳನ್ನ ಹುಟ್ಟುಹಾಕಿದೆ… ಅಂದ್ಹಾಗೆ ಒಟಿಟಿಯಿಂದ ಬಿಗ್ ಬಾಸ್ ಮನೆ ಸೇರಿರುವ ರಾಕೇಶ್ ಆಡಿಗ ಸೋನು ಗೌಡರನ್ನ ಮರೆತು ಅಮೂಲ್ಯ ಜೊತೆಗೆ ಕ್ಲೋಸ್ ಆಗ್ತಿದ್ದಾರೆ.. ಗ್ಲಾಮರಸ್ ಗೊಂಬೆ ಕಮಲಿ ಖ್ಯಾತಿಯ ನಟಿ ಅಮೂಲ್ಯ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೈಲೇಟ್ ಆಗ್ತಿದ್ದಾರೆ.. ಧಾರಾವಾಹಿಯಲ್ಲಿ ಪಕ್ಕಾ ಹಳ್ಳೀ ಹುಡಗಿ ಕಮಲಿ ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಮಾಡರ್ನ್ ಮತ್ತೆ ಬೋಲ್ಡ್ ಹುಡುಗಿ..
ಇತ್ತೀಚೆಗೆ ರಾಕಿ ಮತ್ತೆ ಅಮೂಲ್ಯ ಗೌಡ ಇಬ್ಬರೂ ಕೂಡ ತಮ್ಮ ಹಳೆ ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ.. ಕಾಲೇಜಿನ ದಿನಗಳಲ್ಲಿ ತಮಗೆ ಬಾಯ್ ಫ್ರೆಂಡ್ ಇದ್ದ ಬಗ್ಗೆ ಅಮೂಲ್ಯ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮೊದಲೇ ಹೇಳಿಕೊಂಡಿದ್ದರು.. ಇದೀಗ ರಾಕೇಶ್ ಜೊತೆಗೆ ತಮ್ಮ ಮಾಜಿ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದು , ರಾಕೇಶ್ ಸಹ ತಮ್ಮ ಮಾಜಿ ಗರ್ಲ್ ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ…
ಲಿವಿಂಗ್ ಏರಿಯಾದಲ್ಲಿ ದೀಪಿಕಾ ಮತ್ತು ಅಮೂಲ್ಯ ಕೂತಿದ್ದಾಗ ಬಳಿ ಬಂದ ರಾಕೇಶ್ ನನಗೆ ಹಲವು ರಿಲೇಷನ್ ಇತ್ತು. ಯಾವುದೂ ಫೈಲ್ಯೂರ್ ಆಗಿಲ್ಲ. ಈಗಲೂ ನನ್ನ ಹಳೇ ಗರ್ಲ್ ಫ್ರೆಂಡ್ಸ್ ಜೊತೆ ಚೆನ್ನಾಗಿಯೇ ಇದ್ದೇನೆ ಎಂದಿದ್ದಾರೆ..
ಆಗ ಅಮೂಲ್ಯ ನನಗೆ ಹಾಗೆ ಇರಲು ಆಗಲ್ಲ. ಚೆನ್ನಾಗಿರುವಾಗ ನಾನು ಬಾಯ್ ಫ್ರೆಂಡ್ ಜೊತೆ ಚೆನ್ನಾಗಿಯೇ ಇರುತ್ತೇನೆ. ಅವನೇನಾದರೂ ಮೋಸ ಮಾಡ್ತಿದ್ದಾನೆ ಎಂದರೆ ನನಗೆ ಮತ್ತೆ ಅವನ ಜೊತೆ ಚೆನ್ನಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ..
BiggBoss Kannada 9