Ekta Kapoor : ವೆಬ್ ಸೀರೀಸ್ ಎಡವಟ್ಟು – ಏಕ್ತಾ ಕಪೂರ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ..!!
ಹಿಂದಿ ಧಾರಾವಾಹಿಗಳು ರಿಯಾಲಿಟಿ ಶೋಗಳ ನಿರ್ಮಾಪಕಿ ಆಲ್ಟ್ ಬಾಲಾಜಿ ಸಂಸ್ಥೆಯ ಮಾಲಿಕರಾಗಿರುವ ಕ್ತಾ ಕಪೂರ್ ಗೆ ಇದೀಗ ಕಾನೂನಿನ ಸಂಕಷ್ಟ ಎದುರಾಗಿದೆ..
ಪ್ರಸ್ತುತ ಲ್ಲಿ ನೋಡಿದ್ರೂ ಒಟಿಟಿ ಮಯವಾಗಿಬಿಟ್ಟಿದೆ.. ಥಿಯೇಟರ್ ಗಳಿಗಿಂತಲೂ , ಟಿವಿ ಚಾನೆಲ್ ಗಳಿಗಿಂತಲೂ ಹೆಚ್ಚು ಪ್ರಾಬಲ್ಯ ಸಾಧಿಸುತ್ತಿದೆ ಒಟಿಟಿ..
ಅಂದ್ಹಾಗೆ ಒಟಿಟಿಯಲ್ಲಿ ಸಾಕಷ್ಟು ವೆಬ್ ಸೀರೀಸ್ ಗಳು ಬಂದಿವೆ.. ಬರುತ್ತಿವೆ.. ಬಹಳಷ್ಟು ವೆಬ್ ಸೀರೀಸ್ ಗಳು ಸಿಕ್ಕಾಪಟ್ಟೆ ಬೋಲ್ಡ್ ಕಂಟೆಂಟ್ ಗಳನ್ನ ಒಳಗೊಂಡಿದೆ.. ಇಂತಹ ವೆಬ್ ಸೀರೀಸ್ ಪೈಕಿ ಒಂದು ಎಕ್ಸ್ ಎಕ್ಸ್ ಎಕ್ಸ್…
ಈ ವೆಬ್ ಸೀರೀಸ್ ಆಲ್ಟ್ ಬಾಲಾಜಿ ಒಟಿಟಿ ಆಪ್ ನಲ್ಲಿ ಸ್ಟ್ರೀಮಿಂಗ್ ಆಗ್ತಿದ್ದು , ಇದೇ ವೆಬ್ ಸೀರಿಸ್ ನಿಂದಾಗಿ ನಿರ್ಮಾಪಕಿ ಏಕ್ತಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ..
ಅನೇಕ ಧಾರಾವಾಹಿ , ಹಲವಾರು ಶೋಗಳನ್ನ ನಿರ್ಮಾಣ ಮಾಡಿದ್ದಾರೆ ಏಕ್ತಾ.. ಇದೀಗ ಆಲ್ಟ್ ಬಾಲಾಜಿ ಸಂಸ್ಥೆಯಿಂದ ನಿರಂತರವಾಗಿ ವೆಬ್ ಸೀರಿಸ್ ಗಳನ್ನು ನಿರ್ಮಾಣ ಮಾಡುವತ್ತ ಗಮನ ಹರಿಸಿದೆ.. ಇತ್ತೀಚೆಗೆ ಕಂಗನಾ ರಣೌತ್ ನಡೆಸಿಕೊಡ್ತಿದ್ದ ಡೇರಿಂಗ್ ರಿಯಾಲಿಟಿ ಶೋ ಲಾಕ್ ಅಪ್ ಅಪ್ ಕೂಡ ಪ್ರಸಾರವಾಗಿದ್ದು ಇದೇ ಆಲ್ಟ್ ಬಾಲಾಜಿ ಆಪ್ ನಲ್ಲೇ…
ಇನ್ನೂ ಏಕ್ತಾ ಕಪೂರ್ ನಿರ್ಮಾಣದಲ್ಲಿ ಬರುವ ವೆಬ್ ಸರಣಿಗಳಲ್ಲಿ ಬೋಲ್ಡ್ ದೃಶ್ಯಗಳೇ ಹೆಚ್ಚಾಗಿರುತ್ತದೆ ಎಂದು ಪ್ರೇಕ್ಷಕರು ಅಸಮಾಧಾನಗಳನ್ನ ಹೊರಹಾಕುತ್ತಲೇ ಇದ್ದರು. ಇದೀಗ ವೆಬ್ ಸರಣಿಯಲ್ಲಿರುವ ಒಂದು ದೃಶ್ಯದಿಂದ ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.
ಎಕ್ಸ್ ಎಕ್ಸ್ ಎಕ್ಸ್ ವೆಬ್ ಸೀರಿಸ್ ನಲ್ಲಿ ಸೈನಿಕರ ಪತ್ನಿಗೆ ಅವಮಾನ ಮಾಡಲಾಗಿದೆ ಎಂದು ಬಿಹಾರದ ಬೆಗುಸರೈ ನಿವಾಸಿಯಾಗಿರುವ ಮಾಜಿ ಸೈನಿಕ ಶಂಭು ಕುಮಾರ್ ದೂರು ದಾಖಲಿಸಿದ್ದರು.
ಈ ವೆಬ್ ಸೀರಿಸ್ ನಲ್ಲಿ ಸೈನಿಕರ ಕುಟುಂಬದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈ ವೆಬ್ ಸರಣಿಯಲ್ಲಿ ಸೈನಿಕರ ಪತ್ನಿಯರ ಬಗ್ಗೆ ಆಕ್ಷೇಪಾರ್ಹ ದೃಶ್ಯಗಳನ್ನು ಹಾಕಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿತ್ತು. ಕೋರ್ಟ್ ವಿಚಾರಣೆಗೆ ಹಾಜರಾಗಿ ಉತ್ತರಿಸುವಂತೆ ತಿಳಿಸಲಾಗಿತ್ತು. ಆದರೆ ವಿರೋಧ ವ್ಯಕ್ತವಾದ ಬಳಿಕ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಲಾಗಿದೆ ಎಂದು ಏಕ್ತಾ ಕಪೂರ್ಹಾಗೂ ಶೋಭಾ ಕಪೂರ್ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಹಾರದ ಬೆಗುಸರೈನ ನ್ಯಾಯಾಲಯವು ಏಕ್ತಾ ಕಪೂರ್ ಮತ್ತು ಅವರ ತಾಯಿ ಶೋಭಾ ಕಪೂರ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
2018 ರಲ್ಲಿ ಎಕ್ಸ್ ಎಕ್ಸ್ ಎಕ್ಸ್ ಮೊದಲ ಯಶಸ್ವಿಯಾದ ಬಳಿಕ 2020 ಜನವರಿಯಲ್ಲಿ ಈ ವೆಬ್ ಸೀರಿಸ್ ನ ಎರಡನೇ ಸೀಜನ್ ಬಿಡುಗಡೆ ಮಾಡಲಾಯಿತು. ಈ ಸೀರೀಸ್ ನಲ್ಲಿ ಲೈಂಗಿಕ ಸಂಬಂಧಗಳ ವಿವಿಧ ಆಯಾಮಗಳ ಮೇಲೆ ಕತೆ ನಡೆಯುತ್ತದೆ…
Ekta Kapoor : ಏಕ್ತಾ ಕಪೂರ್ ವಿರುದ್ಧ | ಅರೆಸ್ಟ್ ವಾರೆಂಟ್ ಜಾರಿ