Kantara – ನಮ್ಮ ಯುವ ಪೀಳಿಗೆ ನೋಡಬೇಕಾದ ಸಿನಿಮಾ – ವಿಶೇಷತೆಗಳೇನು…?? ರಿಷಬ್ ಶೆಟ್ಟಿ ಮಾತು..!!
ಸೆಪ್ಟೆಂಬರ್ 30ರಂದು ಅದ್ಧೂರಿಯಾಗಿ ರಿಷಬ್ ಶೆಟ್ಟಿ ನಟನೆ ನಿರ್ದೇಶನದ ಬಹುನಿರೀಕ್ಷೆಯ ಕಾಂತಾರಾ ಸಿನಿಮಾ ರಿಲೀಸ್ ಆಗ್ತಿದೆ.. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದ್ದು , ಇದು ನಮ್ಮ ಸಂಸ್ಕೃತಿ ನಮ್ಮ ಮಣ್ಣಿನ ಅಪ್ಪಟ ದೇಸಿ ಕಥೆಯಾಗಿದ್ದು , ಕಂಬಳದ ರೋಮಾಂಚನಕಾರಿ ದೃಶ್ಯಗಳೂ ಕೂಡ ನೋಡಲು ಸಿಗಲಿದೆ..
ಸದ್ಯ ಸಿನಿಮಾದ ಪ್ರಚಾರದಲ್ಲಿ ಸಿನಿಮಾತಂಡವು ಬ್ಯುಸಿಯಾಗಿದೆ.. ಸಂದರ್ಶನವೊಂದ್ರಲ್ಲಿ ರಿಷಬ್ ಶೆಟ್ಟಿ ಈ ಬಗ್ಗೆ ಮಾತನಾಡ್ತಾ ಇದು ನಮ್ಮ ಮುಂದಿನ ಪೀಳಿಗೆಗೆ ಹೇಳಬೇಕಾದ ಸಿನಿಮಾ ಎಂದಿದ್ದಾರೆ..