ಮಲಯಾಳಂ ನಟಿ ಸಾನಿಯಾ ಐಯ್ಯಪ್ಪನ್ ಇತ್ತೀಚೆಗೆ ಅಭಿಮಾನಿಯೋರ್ವನಿಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
ಸ್ಯಾಟರ್ಡೆ ನೈಟ್ ಚಿತ್ರದ ಪ್ರಚಾರದಲ್ಲಿ ನಟಿ ಹಾಗೂ ಸಿನಿಮಾತಂಡ ಬ್ಯುಸಿಯಾಗಿದ್ದು , ಪ್ರಮೋಷನ್ ಗಾಗಿಯೇ ಮಾಲ್ ಒಂದಕ್ಕೆ ಹೋಗಿದ್ದಾಗ ಅಭಿಮಾನಿಗಳ ನಡುವೆ ಸಿಲುಕಿದ್ದ ನಟಿಗೆ ಅನುಚಿತವಾಗಿ ಸ್ಪರ್ಷಿಸಿದ ವ್ಯಕ್ತಿಗೆ ಮುಲಾಜಿಲ್ಲದೇ ಕಪಾಳಕ್ಕೆ ಬಾರಿಸಿದ್ದಾರೆ ನಟಿ.. ಈ ವಿಡಿಯೋ ವೈರಲ್ ಆಗ್ರತಿದ್ದಂತೆ ಎಲ್ಲರೂ ನಟಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ , ಅವರ ಬೆನ್ನಿಗೆ ನಿಂತಿದ್ದಾರೆ..
ಚಿತ್ರತಂಡವು ಕ್ಯಾಲಿಕಟ್‌ನ ಮಾಲ್‌ವೊಂದರಲ್ಲಿ ಪ್ರಚಾರಕ್ಕೆ ಬಂದಿದ್ದರು. ಈ ವೇಳೆ ಭಾರಿ ಸಂಖ್ಯೆಯ ಜನ ಜಮಾಯಿಸಿದ್ದರು. ಈ ವೇಳೆ ಸಾನಿಯಾ ಮತ್ತು ಆಕೆಯ ಸಹನಟಿಯ ಜೊತೆ ಅಭಿಮಾನಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾರೆ.
ವೇದಿಕೆಯಿಂದ ನಟಿ ಸಾನಿಯಾ ಬರುವಾಗ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ. ನಟಿಯ ಮೈ ಮುಟ್ಟಿದ್ದಾನೆ. ತನ್ನ ಸಹನಟಿಗೂ ಕೂಡ ಇದೇ ಅನುಭವ ಆಗಿದೆ. ಕೂಡಲೇ ಸಾನಿಯಾ ಆತನ ಕಪಾಳಕ್ಕೆ ಹೊಡೆದಿದ್ದಾರೆ.
View this post on Instagram