Puneeth Rajkumar : ಅಪ್ಪು ನಮ್ಮನ್ನ ಅಗಲಿ 11 ತಿಂಗಳು – ಸಮಾಧಿ ಪೂಜೆ ನೆರವೇರಿಸಿದ ಕುಟುಂಬಸ್ಥರು..
ಇಂದಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಒಂದು ತಿಂಗಳು ಕಳೆದಿದೆ.. ಆದ್ರೆ ಅಪ್ಪು ಅವರು ನಮ್ಮನ್ನ ಅಗಲಿರುವ ಕಹಿ ಸತ್ಯವನ್ನ ಈವರೆಗೂ ಅರಗಿಸಿಕೊಳ್ಳಲಾಗುತ್ತಿಲ್ಲ,.. ತಮ್ಮ ನಗುವಿನ ಮೂಲಕ , ಸಮಾಜ ಸೇವೆ ಮೂಲಕ , ಸಿನಿಮಾಗಳ ಮೂಲಕ ಅಪ್ಪು ಎಂದೆಂದಿಗೂ ಅಜರಾಮರರಾಗಿರುತ್ತಾರೆ..
ಇನ್ನೂ ಪ್ರತಿ ತಿಂಗಳಿನಂತೆ ಅಪ್ಪು ಸಮಾಧಿಗೆ ಪುನೀತ್ ರಾಜ್ ಕುಮಾರ್ ಕುಟುಂಬ ಈ ಬಾರಿಯೂ ಪೂಜೆಯನ್ನು ಸಲ್ಲಿಸಿದ್ದಾರೆ. ಈ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಅವರ ಎರಡನೇ ಪುತ್ರಿ ವಂದಿತಾ ಸಮಾಧಿಗೆ ಪೂಜೆ ಸಲ್ಲಿಸಿದ್ರು.
ಈ ವೇಳೆ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪತ್ನಿ ಮಂಗಳ, ಯುವರಾಜ್ ಕುಮಾರ್, ವಿಜಯರಾಘವೇಂದ್ರ ಸೇರಿದಂತೆ ಅಣ್ಣಾವ್ರ ಕುಟುಂಬದವರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಪೂಜೆ ನೆರವೇರಿಸಿ ವಾಪಸ್ಸಾದರು..