Rashmika – Vijay deavarakonda
ಬಹುಭಾಷಾ ಬಹುಬೇಡಿಕೆ ನಟಿಯಾಗಿರುವ ರಶ್ಮಿಕಾ ಹಾಗೂ ಟಾಲಿವುಡ್ ನ ಸೆನ್ಷೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಸಿನಿಮಾ ವಿಚಾರಗಳ ಹೊರತಾಗಿಯೂ ಪ್ರೀತಿ ಪ್ರೇಮದ ಗಾಸಿಪ್ ಗಳಿಂದಲೇ ಸುದ್ದಿಯಲ್ಲಿರೋದು ಹೆಚ್ಚು..
ಇವರಿಬ್ಬರೂ ಪ್ರೀತಿ ಮಾಡ್ತಿದ್ದು ಈಗ ಬ್ರೇಕ್ ಅಪ್ ಆಗಿದೆ… ಇದೀಗ ವಿಜಯ್ ದೇವರಕೊಂಡ ಅನನ್ಯಾ ಪಾಂಡೆ ಪ್ರೀತಿಸುತ್ತಿದ್ದಾರೆ ಎಂದೆಲ್ಲಾ ಗಾಸಿಪ್ ಗಳಿವೆ..
ಆದ್ರೆ ರಶ್ಮಿಕಾ , ವಿಜಯ್ ದೇವರಕೊಂಡ , ಅನನ್ಯಾ ಪಾಂಡೆ ಯಾರೂ ಕೂಡ ಬಗ್ಗೆ ಮಾತನಾಡಿಲ್ಲ.. ರಶ್ಮಿಕಾ ದೇವರಕೊಂಡ ನಾವಿಬ್ಬರೂ ಸ್ನೇಹಿತರು ಎಂದು ಅನೇಕ ಬಾರಿ ಸ್ಪಷ್ಟನೆ ನೀಡಿದ್ದಾರೆ..
ಅಂದ್ಹಾಗೆ ಇತ್ತೀಚೆಗೆ ಕಾಫಿ ವಿತ್ ಕರಣ್ ವಿಶೇಷ ಸಂಚಿಕೆಯಲ್ಲಿ ಕರಣ್ ಜೋಹರ್ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ರಿಲೇಷನ್ ಶಿಪ್ ಬಗ್ಗೆ ಮಾತನಾಡಿದ್ದಾರೆ..
ಈ ವಿಶೇಷ ಸಂಚಿಕೆಯಲ್ಲಿ ಕನ್ನಡದ ನಟ ಡ್ಯಾನಿಶ್ ಸೇಠ್ , ನಿಹಾರಿಕಾ ಕೆ.ಎಂ , ತನ್ಮಯ್ ಭಟ್ , ಪುಷ್ಪಾ ಕಪಿಲಾ ಭಾಗವಹಿಸಿದ್ದರು..
ಮಾತು ಮಾತಿನ ನಡುವೆ ವಿಕ್ಕಿ – ಕತ್ರಿನಾ ಮದುವೆ ವಿಚಾರವದ ಬಗ್ಗೆ ಮಾತನಾಡಿರೋ ಕರಣ್ ವಿವಾಹದ ಸಂಭ್ರಮಕ್ಕೆ ನನ್ನನ್ನ ಹ್ವಾನಿಸಲೇ ಇಲ್ಲ ದು ಬೇಸರ ಹೊರಹಾಕಿದ್ದಾರೆ..
ಅಲ್ಲದೇ ಪ್ರಭಾಸ್ ಬಗ್ಗೆಯೂ ಮಾತನಾಡುತ್ತಾ ಪ್ರಭಾಸ್ ಸಿಂಗಲ್ , ನೀವೇಕೆ ಮದುವೆಯಾಗಬಾರದೆಂದು ನಿಹಾರಿಕಾಗೆ ಕೇಳಿದ್ದಾರೆ.. ಆಗ ನಿಹಾರಿಕಾ ಮಾತನಾಡುತ್ತಾ ನನಗೆ ಇನ್ನೂ 25 ವರ್ಷವಷ್ಟೇ ಈ ಮದುಗೆ ಒಪ್ಪಲು ನನ್ನ ತಾಯಿ ತಯಾರಿಲ್ಲ ಎಂದು ಕರಣ್ ಜೋಹರ್ ಗೆ ಉತ್ತರಿಸಿದ್ದಾರೆ..
ಆಗ ವಿಜಯ್ ದೇವರಕೊಂಡ ಬಗ್ಗೆ ಜೋಹರ್ ಮಾತನಾಡಿದ್ದಾರೆ.. ವಿಜಯ್ ದೇವರಕೊಂಡ ಇದ್ದಾರಲ್ಲ ಎನ್ನುತ್ತಾರೆ.. ಆಗ ಇವರಿಬ್ಬರ ಚರ್ಚೆಗೆ ಎಂಟ್ರಿ ಕೊಟ್ಟ ಕುಶಾ ಕಪಿಲಾ ವಿಜಯ್ ದೇವರಕೊಂಡ ರಶ್ಮಿಕಾ ಡೇಟ್ ಮಾಡ್ತಾ ಇರಬಹುದು ಎನ್ನುತ್ತಾರೆ..
ಆಗ ಕರಣ್ ಜೋಹರ್ ಈ ವಿಚಾರವಾಗಿ ಸ್ಪಷ್ಟನೆ ನೀಡುತ್ತಾ ಆ ರೀತಿ ಏನೂ ಇಲ್ಲ,.. ವಿಜಯ್ ದೇವರಕೊಂಡ ಸಿಂಗಲ್ … ವಿಜಯ್ ಬಗ್ಗೆ ನನಗೆ ಬಹಳ ಚನ್ನಾಗಿಯೇ ಗೊತ್ತಿದೆ.. ಆತ ಸಿಂಗಲ್.. ಅಧಿಕೃತವಾಗಿ ಆತ ಸಿಂಗಲ್ ಎಂದಿದ್ದಾರೆ..
ಈ ಮೂಲಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಡುವಿನ ಪ್ರೇಮ್ ಕಹಾನಿ ಗಾಸಿಪ್ ಗೆ ಬ್ರೇಕ್ ಹಾಕಿದ್ದಾರೆ..