South VS Bollywood : ಪೊನ್ನಿಯನ್ ಸೆಲ್ವನ್ ಗೆ ಟಕ್ಕರ್ ಕೊಡುತ್ತಾ ವಿಕ್ರಮ್ ವೇದ..?? – 5 ಸಿನಿಮಾಗಳ ನಡುವೆ ಭಾರೀ ಕಾಂಪಿಟೇಷನ್ – ನಮ್ಮ ಕಾಂತಾರಾ , ತೋತಾಪುರಿಗೆ ಎಫೆಕ್ಟ್ ಆಗುತ್ತಾ..??
ಸಾಲು ಸಾಲು ಸೋಲುಂಡು ಕಂಗೆಟ್ಟಿದ್ದ ಬಾಲಿವುಡ್ ಪಾಲಿಗೆ ಆಶಾಕಿಎರಣವಾಗಿದ್ದು ಬ್ರಹ್ಮಾಸ್ತ್ರ ಸಿನಿಮಾ.. ಸದ್ಯ ಥಿಯೇಟರ್ ಗಳಲ್ಲಿ ಅಬ್ಬರಿಸುತ್ತಿದೆ.. ಆದ್ರೆ ಸೆಪ್ಟೆಂಬರ್ 30 ರ ನಂತರ ಬ್ರಹ್ಮಾಸ್ತ್ರ ಅಬ್ಬರಕ್ಕೆ ಕತ್ತರಿ ಬೀಳುತ್ತೆ… ಅದ್ಧೂರಿಯಾಗಿ ಪೊನ್ನಿಯನ್ ಸೆಲ್ವನ್ ಸಿನಿಮಾ ರಿಲೀಸ್ ಆಗ್ತಿದೆ.. ಮಣಿರತ್ನಂ ಅವರ ಡ್ರೀಮ್ ಪ್ರಾಜೆಕ್ಟ್ ಮಲ್ಟಿ ಸ್ಟಾರ್ ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾ ರಿಲೀಸ್ ಆಗ್ತಿದೆ..
ಈ ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು.. ಇದರ ಜೊತೆಗೆ ಕನ್ನಡದ ಬಹುನಿರೀಕ್ಷೆಯ ಎರೆಡು ಸಿನಿಮಾಗಳು ರಿಲೀಸ್ ಆಗುತ್ತಿದೆ.. ರಿಷಬ್ ಶೆಟ್ಟಿ ನಿರ್ದೇಶನ ನಟನೆಯ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿರುವ ಕಾಂತಾರಾ ಹಾಗೂ ಪ್ಯಾನ್ ಇಂಡಿಯನ್ ಸಿನಿಮಾ ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾಗಳು ರಿಲೀಸ್ ಆಗುತ್ತಿವೆ.. ಅಂದ್ಹಾಗೆ ಕಾಂತಾರಾ ತೋತಾಪುರಿಗೆ ಪೊನ್ನಿಯನ್ ಸೆಲ್ವನ್ ಸಿನಿಮಾದಿಂದ ತೊಂದರೆಯಾಗಬಹುದೆಂಬ ಆತಂಕ ಕನ್ನಡಾಭಿಮಾನಿಗಳದ್ದು ಒಂದೆಡೆಯಾದ್ರೆ ,,
ಮತ್ತೊಮ್ಮೆ ಬಾಲಿವುಡ್ ಮುಂದೆ ಅಬ್ಬರಿಸೋದಕ್ಕೆ ಸೌತ್ ಸಿನಿಮಾ ಸಜ್ಜಾಗಿದೆ ಅನ್ನೋದು ಮತ್ತೊಂದೆಡೆ… KGF 2 , ಪುಷ್ಪ , ವಿಕ್ರಂ , ವಿಕ್ರಾಂತ್ ರೋಣ , RRR , ಚಾರ್ಲಿ , ಸೀತಾರಾಮಂ , ಕಾರ್ತಿಕೇಯ 2 ಮುಂದೆ ಹೇಗೆ ಬಾಲಿವುಡ್ ನ ಎಲ್ಲಾ ಸಿನಿಮಾಗಳು ಮಕಾಡೆ ಮಲಗಿದವೋ ಹಾಗೆಯೇ ನಾಳೆ ರಿಲೀಸ್ ಆಗ್ತಿರುವ ಹೃತಿಕ್ ಹಾಗೂ ಸೈಫ್ ಅಲಿಖಾನ್ ನಟನೆಯ ತಮಿಳಿನ ರೀಮೇಕ್ ಸಿನಿಮಾ ವಿಕ್ರಮ್ ವೇದ ಕೂಡ ಪೊನ್ನಿಯನ್ ಮುಂದೆ ಫ್ಲಾಪ್ ಆಗುತ್ತಾ ಅಥವ ಸ್ಟ್ರಾಂಗ್ ಆಗಿ ನಿಲ್ಲುತ್ತಾ ಅನ್ನೋ ಲೆಕ್ಕಾಚಾರಗಳು ಈಗಿನಿಂದಲೇ ಪ್ರಾರಂಭವಾಗಿದೆ..