BiggBoss Kannada 9 : ಡೈಲಾಗ್ ಹೊಡೆದು ಐಶ್ವರ್ಯಾಗೆ ಪ್ರಪೋಸ್ ಮಾಡಿದ ಸೈಕ್ ನವಾಜ್..!!
ಬಿಗ್ ಬಾಸ್ ಮನೆಯಲ್ಲಿ 18 ಸ್ಪರ್ಧಿಗಳ ಪೈಕಿ ಸಿಕ್ಕಾಪಟ್ಟೆ ಭಿನ್ನ ಕ್ಯಾರೆಕ್ಟರ್ ಇರುವ ವೈರಲ್ ಹುಡುಗ ಸೈಕ್ ನವಾಜ್ ಇತ್ತೀಚೆಗೆ ಕಿರುಚಾಡಿ ಸಿಟ್ಟಾಗಿದ್ದರು.. ಇದೀಗ ಪ್ರಪೋಸ್ ಮಾಡಿ ಹೈಲೇಟ್ ಆಗ್ತಿದ್ದಾರೆ..
ಏನೇ ಮಾತನಾಡಿದ್ರೂ ಪ್ರಾಸಬದ್ಧವಾಗಿ ಡೈಲಾಗ್ ಹೊಡೆಯೋ ಈತ ಮನೆಯಲ್ಲಿ ಎಲ್ಲರಿಗಿಂತಲೂ ಅತ್ಯಂತ ಕಿರಿಯ ಸದಸ್ಯ. 19 ವರ್ಷದ ಸೈಕಿಕ್ ನವಾಜ್ ಇದೀಗ ಬೈಕ್ ರೇಸರ್ ಐಶ್ವರ್ಯಾಗೆ ಪ್ರಪೋಸ್ ಮಾಡಿ ಚರ್ಚೆಯಾಗ್ತಿದ್ದಾನೆ..
ಇವನ ನಡೆಗೆ ಟ್ರೋಲ್ ಕೂಡ ಆಗ್ತಿದ್ದಾರೆ..
ಅಂದ್ಹಾಗೆ ದೊಡ್ಮನೆಗೆ ಕಾಲಿಟ್ಟಾಗಲೇ ಈತ ಶ್ವರ್ಯರನ್ನ ಹಾಡಿ ಹೊಗಳಿದ್ದ.. ನನಗೆ ಹಾಲಿವುಡ್ ಹೀರೋಯಿನ್ ಗಳು ಇಷ್ಟ.. ಐಶ್ವರ್ಯ ಅವರು ನೋಡೋದಕ್ಕೆ ಹಾಲಿವುಡ್ ನಟಿಯರಂತೆಯೇ ಇದ್ದಾರೆ ಎಂದಿದ್ದರು.. ಇದೀಗ ನೇರವಾಗಿ ಪ್ರಪೋಸ್ ಮಾಡಿಬಿಟ್ಟಿದ್ದಾರೆ..
ಡೈಲಾಗ್ ಹೊಡೆದು ಪ್ರಪೋಸ್ ಮಾಡಿರುವ ನವಾಜ್ “ ನೋಡಿ ಐಶ್ವರ್ಯ ಪಿಸ್ಸೆ ಅವರೇ ನಿಮ್ಮನ್ನ ನೋಡಿದಾಗಲೇ ಫಿದಾ ಆದೆ.. ನಿಮ್ಮ ರೀತಿ ಇಂಗ್ಲಿಷ್ ನಲ್ಲಿ ಐ ಲವ್ ಯೂ ಅಂತ ಹೇಳೋಕೆ ಬರಲ್ಲ. ನಮ್ಮ ಮನೆ ತುಂಬಾ ಚಿಕ್ಕದು , ಆದ್ರೆ ಮನಸ್ಸು ದೊಡ್ಡದು.. ಚಿಕ್ಕದಾಗಿ ಸೇರಿಕೊಂಡು ದೊಡ್ಡದಾಗಿ ಪ್ರೀತಿ ಮಾಡೋಣ. ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕದಾಗಿ ಖುಷಿಪಡೋಣ.. ಚಿಕ್ಕ ಖುಷಿಯಲ್ಲಿ ಮಕ್ಕಳಿಗೆ ಜನ್ಮ ಕೊಡೋಣ.. ಚಿಕ್ಕ ಮಕ್ಕಳನ್ನ ದೊಡ್ಡವರಾಗಿ ಬೆಳೆಸೋಣ.. ದೊಡ್ಡವರಾಗಿ ಸಾಯುವಾಗ ಚಿಕ್ಕದಾಗಿ ನಗೋಣ.. ನಮ್ಮ ಮಕ್ಕಳು ದೊಡ್ಡದಾಗಿ ಸಮಾಧಿ ಕಟ್ಟುತ್ತಾರೆ.. ಅವರ ಮನದಲ್ಲಿ ಚಿಕ್ಕ ಜಾಗದಲ್ಲಿರೋಣ ಎಂದಿದ್ದಾರೆ..
ನವಾಜ್ ಡೈಲಾಗ್ ಕೇಳಿ ಮನೆ ಮಂದಿ ಹಾಗೂ ಐಶ್ವರ್ಯಾ ಕೂಡ ನಕ್ಕಿದ್ದಾರೆ… ಐಶ್ವರ್ಯಾ ಪ್ರೀತಿಯಿಂದ ನವಾಜ್ ಗೆ ನಿನಗೆ ಒಳ್ಲೆ ಹುಡುಗಿ ಸಿಗ್ತಾಳೆ ಬಿಡು ಎಂದಾಗ ನೀವು ಸಿಗಲ್ವಾ ಅಂತ ಕೇಳಿದ ನವಾಜ್ ಮಾತು ಕೇಳಿ ಮನೆ ಮಂದಿ ಎಲ್ಲರೂ ನಕ್ಕಿದ್ದಾರೆ.. ಈ ಪ್ರೋಮೋದಲ್ಲಿ ಕಲರ್ಸ್ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ..
19 ವರ್ಷದ ಸೈಕ್ ನವಾಜ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್.. ಪ್ರಾಸ ಇಲ್ದೇ ಮಾತನಾಡೋದೇ ಕಡಿಮೆ,. ಡೈಲಾಗ್ ಗಳನ್ನ ಹೊಡೆಯುತ್ತಲೇ ಫೇಮಸ್ ಆದ ಈ ಹುಡುಗ ಥಿಯೇಟರ್ ಹೊರಗೆ ಚಾನೆಲ್ ಗಳ ಮೈಕ್ ಮುಂದೆ ನಿಂತು ಡೈಲಾಗ್ ಹೊಡೆದೇ ವೈರಲ್ ಬಾಯ್ ಎಂದು ಫೇಮಸ್ ಆದವ.. ಅದೇ ಈತ ಬಿಗ್ ಬಾಸ್ ಗೆ ಬರುವಂತೆ ಮಾಡಿದ್ದು..
ಇದು ನವಾಜ್ ಪ್ರಪೋಸ್ ಮಾಡೋ ರೀತಿ, ಹೀಗೆ ಮಾಡಿದ್ರೆ ಪಕ್ಕಾ ಸಿಗುತ್ತೆ ಪ್ರೀತಿ!#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಪ್ರತಿ ರಾತ್ರಿ 9.30#BBK9 #ಬಿಗ್‍ಬಾಸ್‍ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/YPmZusjfyR
— Colors Kannada (@ColorsKannada) September 29, 2022