ಬಿಗ್ ಬಾಸ್ ಕನ್ನಡ ಸೀಸನ್ 9 ಇನ್ನೇನು 1 ವಾರ ಮುಗಿಸಿದೆ.. ಮನೆ ಸೇರಿರುವ 18 ಸ್ಪರ್ಧಿಗಳೂ ವಿಭಿನ್ನ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.. ವಿಭಿನ್ನ ವ್ಯಕ್ತಿತ್ವದವರೇ ಆಗಿದ್ದಾರೆ.. ಅದ್ರಲ್ಲೂ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹೈಲೇಟ್ ಆಗ್ತಿದ್ದು , ಕಿರಿಕ್ ಗಳ ಮೂಲಕವೇ ಸುದ್ದಿಯಾಗ್ತಿದ್ದಾರೆ..
ಟಾಸ್ಕ್ ಗಳಲ್ಲಿ ಭಾಗವಹಿಸುವಿಕೆ ವಿಚಾರವಾಗಿ ಇತ್ತೀಚೆಗೆ ಮನೆ ಮಂದಿಯಲ್ಲಾ ಸೇರಿ ಮೊದಲ ವಾರದ ಕಳಪೆ ಪ್ರದರ್ಶನಕ್ಕಾಗಿ ರೂಪೇಶ್ ರಾಜಣ್ಣರನ್ನ ಆಯ್ಕೆ ಮಾಡಿದ್ದಾರೆ..
ಆದ್ರೆ ಇದ್ರಿಂದ ಬೇಸರಗೊಂಡು ರೂಪೇಶ್ ರಾಜಣ್ಣ ಮೈಕ್ ಕಳಚಿ ಹೊರನಡೆದ ಪ್ರಸಂಗವೂ ನಡೆಯಿತು..
ನೇಹಾ, ಅನುಪಮಾ, ಕಾವ್ಯಶ್ರೀ ಗೌಡ ಕಳಪೆ ಲಿಸ್ಟ್‌ಗೆ ರೂಪೇಶ್ ರಾಜಣ್ಣ ಅವರನ್ನ ಸೇರಿಸಿದ್ದಾರೆ. ನೀವು ತುಂಬಾ ನಕಲಿ ಎನಿಸುತ್ತೀರಿ ಎಂದು ನೇಹಾ ಗೌಡ ತಿಳಿಸಿದ್ದರು.