KGF ನಂತಹ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಇದೀಗ ಬೇರೆ ಭಾಷೆಗಳಲ್ಲೂ ಪ್ರಯೋಗಕ್ಕೆ ಮುಂದಾಗಿದೆ..
ಹೊಂಬಾಳೆ ಸಂಸ್ಥೆ ನಿರ್ಮಾಣದ ರಿಷಬ್ ಶೆಟ್ಟಿ ನಟನೆಯ ಕಾಂತಾರಾ ಸಿನಿಮಾ ಇಂದು ( ಸೆಪ್ಟೆಂಬರ್ 30) ಅದ್ಧೂರಿಯಾಘಿ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ..
ಈ ನಡುವೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮತ್ತೊಂದು ಬಿಗ್ ಅನೌನ್ಸ್ ಮೆಂಟ್ ಮಾಡಿದೆ.. ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಮತ್ತು ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಕಾಂಬಿನೇಷನ್ನ ಹೊಸ ಚಿತ್ರವನ್ನ ಅನೌನ್ಸ್ ಮಾಡಿ ಟೈಟಲ್ ರಿವೀಲ್ ಮಾಡಿದೆ..
ಈ ಚಿತ್ರಕ್ಕೆ ಧೂಮಂ ಎಂದು ಟೈಟಲ್ ಇಡಲಾಗಿದೆ. ಶೀರ್ಷಿಕೆ ವಿನ್ಯಾಸದ ಪೋಸ್ಟರ್ ಬಿಡುಗಡೆಯಾಗಿದ್ದು , ವಿಭಿನ್ನ ಟೈಟಲ್ ಪೋಸ್ಟರ್ ನೋಡಿ ಅಭುಇಮಾನಿಗಳ ಕುತೂಹಲ ಹೆಚ್ಚಾಗಿದೆ.. ಅಲ್ಲದೇ ಲೂಸಿಯಾ , ಯೂ ಟರ್ನ್ ನಂತಹ ವಿಭಿನ್ನ ಸಿನಿಮಾಗಳನ್ನ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪವನ್ ಅವರ ಸಿನಿಮಾವೂ ಸಾಕಷ್ಟು ವಿಭಿನ್ನವಾಗಿರಲಿದೆ ಎನ್ನಲಾಗ್ತಿದೆ…
ವರ್ಸಟೈಲ್ ನಟ ಫಹಾದ್ ಕೇವಲ ಮಲಯಾಳಂ ಸಿನಿಮಾಗಳಿಗಷ್ಟೇ ಸೀಮಿತವಾಗದೇ ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ನೆಗೆಟಿವ್ ಪಾಸಿಟಿವ್ ಎರೆಡೂ ಇಮೇಜ್ ಗಳಿಗೂ ನ್ಯಾಯ ದಗಿಸುವ ತಾಕತ್ತು ಅವರದ್ದು.. ಅಂದ್ಹಾಗೆ ಸಿನಿಮಾ ಶೂಟಿಂಗ್ ಅಕ್ಟೋಬರ್ 9ರಿಂದ ಶುರುವಾಗಲಿದ್ದು , ಸಿನಿಮಾದಲ್ಲಿ ನಾಯಕಿಯಾಗಿ ಅಪರ್ಣಾ ಬಾಲಮುರಳಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲತಹ ಮಲಯಾಳಂ ಭಾಷೆಯಲ್ಲಿ ತಯಾರಾಬಹಬಹುದು.. ಆ ನಂತರ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗೆ ಡಬ್ಬಿಂಗ್ ಆಗಬಹುದು,..