KGF ನಂತಹ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಇದೀಗ ಬೇರೆ ಭಾಷೆಗಳಲ್ಲೂ ಪ್ರಯೋಗಕ್ಕೆ ಮುಂದಾಗಿದೆ..
ಹೊಂಬಾಳೆ ಸಂಸ್ಥೆ ನಿರ್ಮಾಣದ ರಿಷಬ್ ಶೆಟ್ಟಿ ನಟನೆಯ ಕಾಂತಾರಾ ಸಿನಿಮಾ ಇಂದು ( ಸೆಪ್ಟೆಂಬರ್ 30) ಅದ್ಧೂರಿಯಾಘಿ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ..
ಈ ನಡುವೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮತ್ತೊಂದು ಬಿಗ್ ಅನೌನ್ಸ್ ಮೆಂಟ್ ಮಾಡಿದೆ.. ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಮತ್ತು ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಕಾಂಬಿನೇಷನ್ನ ಹೊಸ ಚಿತ್ರವನ್ನ ಅನೌನ್ಸ್ ಮಾಡಿ ಟೈಟಲ್ ರಿವೀಲ್ ಮಾಡಿದೆ..
ಫಹಾದ್ ಪವನ್ ಸಿನಿಮಾಗೆ ಧೂಮಂ ಟೈಟಲ್ ಫಿಕ್ಸ್ ಆಗಿದೆ ಆದ್ರೆ ಇದು ಪವನ್ ಕುಮಾರ್ ಹಾಗೂ ಅಪ್ಪು ಕಾಂಬಿನೇಷನ್ ನಲ್ಲಿ ಮೂಡಿಬರಬೇಕಿದ್ದ ದ್ವಿತ್ವ ಸಿನಿಮಾವೇನಾ ಅನ್ನೋ ಅನುಮಾನ ಇದೆ..
ಈ ಚಿತ್ರಕ್ಕೆ ಧೂಮಂ ಎಂದು ಟೈಟಲ್ ಇಡಲಾಗಿದೆ. ಶೀರ್ಷಿಕೆ ವಿನ್ಯಾಸದ ಪೋಸ್ಟರ್ ಬಿಡುಗಡೆಯಾಗಿದ್ದು , ವಿಭಿನ್ನ ಟೈಟಲ್ ಪೋಸ್ಟರ್ ನೋಡಿ ಅಭುಇಮಾನಿಗಳ ಕುತೂಹಲ ಹೆಚ್ಚಾಗಿದೆ.. ಅಲ್ಲದೇ ಲೂಸಿಯಾ , ಯೂ ಟರ್ನ್ ನಂತಹ ವಿಭಿನ್ನ ಸಿನಿಮಾಗಳನ್ನ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪವನ್ ಅವರ ಸಿನಿಮಾವೂ ಸಾಕಷ್ಟು ವಿಭಿನ್ನವಾಗಿರಲಿದೆ ಎನ್ನಲಾಗ್ತಿದೆ…
ಅಂದ್ಹಾಗೆ ಅಪ್ಪು ಅವರು ಮಾಡಬೇಕಿದ್ದ ದ್ವಿತ್ವ ಸಿನಿಮಾದ ಕಥೆಯನ್ನೇ ಮರುನಾಮಕರಣ ಮಾಡಿ ಫಹಾದ್ ಜೊತೆಗೆ ಪವನ್ ಕುಮಾರ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ..
ಹೌದು..! ಪವನ್ ಕುಮಾರ್ ಅವರ ನಿರ್ದೇಶನದಲ್ಲಿ ದ್ವಿತ್ವ ಪೋಸ್ಟರ್ ಟೈಟಲ್ ರಿವೀಲ್ ಆಗಿತ್ತು.. ಇದೊಂದು ಸೈಂಟಿಫಿಕ್ ಫಿಕ್ಷನ್ ಥ್ರಿಲ್ಲರ್ ಎನ್ನಲಾಗಿತ್ತು.. ಆದ್ರೆ ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿದರು.. ಆ ನಂತರ ಈ ಸಿನಿಮಾದಲ್ಲಿ ಯಾರು ನಟಿಸುತ್ತಾರೆ ಅನ್ನೋ ಸಾಕಷ್ಟು ಚರ್ಚೆಗಳು ಒಂದಷ್ಟು ನಟರ ಹೆಸರುಗಳು ಕೇಳಿಬಂದಿತ್ತು.. ಅಂತಹ ಹೆಸರುಗಳ ಪೈಕಿ ಒಬ್ಬರು ಫಹಾದ್ ಫಾಸಲ್ ಅವರು..
ಇದೀಗ ಫಹಾದ್ ಹಾಗೂ ಪವನ್ ಕುಮಾರ್ ಅವರ ಧೂಮಂ ಸಿನಿಮಾ ದ್ವಿತ್ವ ಕಥೆಯೇನಾ..?? ಟೈಟಲ್ ಬದಲಾಯಿಸಲಾಗಿದೆ ಅಷ್ಟೇನಾ ಎಂಬೆಲ್ಲಾ ಚರ್ಚೆಗಳು ಶುರುವಾಗಿದೆ..
ಅಂದ್ಹಾಗೆ ವರ್ಸಟೈಲ್ ನಟ ಫಹಾದ್ ಕೇವಲ ಮಲಯಾಳಂ ಸಿನಿಮಾಗಳಿಗಷ್ಟೇ ಸೀಮಿತವಾಗದೇ ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ನೆಗೆಟಿವ್ ಪಾಸಿಟಿವ್ ಎರೆಡೂ ಇಮೇಜ್ ಗಳಿಗೂ ನ್ಯಾಯ ದಗಿಸುವ ತಾಕತ್ತು ಅವರದ್ದು.. ಅಂದ್ಹಾಗೆ ಸಿನಿಮಾ ಶೂಟಿಂಗ್ ಅಕ್ಟೋಬರ್ 9ರಿಂದ ಶುರುವಾಗಲಿದ್ದು , ಸಿನಿಮಾದಲ್ಲಿ ನಾಯಕಿಯಾಗಿ ಅಪರ್ಣಾ ಬಾಲಮುರಳಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲತಹ ಮಲಯಾಳಂ ಭಾಷೆಯಲ್ಲಿ ತಯಾರಾಬಹಬಹುದು.. ಆ ನಂತರ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗೆ ಡಬ್ಬಿಂಗ್ ಆಗಬಹುದು,..
https://twitter.com/hombalefilms/status/1575708616367411201?ref_src=twsrc%5Etfw%7Ctwcamp%5Etweetembed%7Ctwterm%5E1575708616367411201%7Ctwgr%5E55ac30cefbc949352f12f45110092ae8b2d71fe1%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Ftv9kann5901569935123-epaper-dh6c7d9be2cbc7498b9c28a20ecf87eacb%2Fdhoomamhombaalefilmshosachitradhumanfahaadhfaasilpavankumaarchitradhashirshikebahiranga-newsid-n427463842