Kantara : ಕಾಂತಾರಾ ಏನಿದರ ಅರ್ಥ..?? ಟೈಟಲ್ ಸೂಚಿಸಿದ್ದು ಯಾರು..??
ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಇಂದು ಅದ್ಧೂರಿಯಾಗಿ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.. ಸಿನಿಮಾ ಬಗ್ಗೆ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನ ಡುತ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ರಿವ್ಯೂವ್ ಗಳನ್ನ ನೀಡುತ್ತಾ ರಿಷಬ್ ಹಾಗೂ ಕಿಶೋರ್ ನಟನೆಯನ್ನ ಹೊಗಳುತ್ತಿದ್ದಾರೆ ನೆಟ್ಟಿಗರು..
ಆದ್ರೆ ವಿಭಿನ್ನವಾಗಿರುವ ಟೈಟಲ್ ಕಾಂತಾರಾದ ಬಗ್ಗೆ ಸಾಕಷ್ಟು ಕುತೂಹಲಗಳಿದೆ.. ಹಾಗೆಯೇ ಏನಿದರ ಅರ್ಥ ಎಂಬ ಪ್ರಶ್ನೆಗಳೂ ಇದೆ..
ಅಂದ್ಹಾಗೆ ದೈವಿಕತೆ ಹಾಗೂ ಭಾವುಕತೆಯ ಮಿಶ್ರಣ ನಮ್ಮ ಮಣ್ಣಿನ ಸೊಗಡಿನ ದೇಸಿ ಸಿನಿಮಾವಾದಾ ಕಾಂತಾರ ಹೆಸರಿಡುವ ಹಿಂದೆ ಇಂದು ಇಂಟರೆಸ್ಟಿಂಕ್ ವಿಚಾರವಿದೆ..
ಕಾಂತ ಎಂದರೆ ಪ್ರಿಯಕರ ಅಥವ ಪತಿ ಎಂಬ ಅರ್ಥವಿದೆ.. ಕರಾವಳಿ ಭಾಗದಲ್ಲಿ ಆಡು ಭಾಷೆಯಾಗಿ ಕಂಡಿತ ಅನ್ನೋದಕ್ಕೆ ಕಾಂತಾರಾ ಎಂದೂ ಕರೆಯಲಾಗುತ್ತದೆ..
ಕಾಂತಾರಾ ಎಂದ್ರೆ ಅನೇಕ ನಿಗೂಢಗಳನ್ನ ಒಳಗೊಂಡಿರುವ ಒಂದು ನಿಗೂಢವಾದ ಕಾಡು ಎಂದರ್ಥ.. ಟೈಟಲ್ ಫೈನಲ್ ಮಾಡಿದ್ದು ರಿಷಬ್ ಶೆಟ್ಟಿ ಆದ್ರೂ ಟೈಟಲ್ ಸೂಚಿಸಿದ್ದ ಮಾತ್ರ ಅವರ ಗೆಳೆಯ ಅಂತೆ..
ಆ ಗೆಳೆಯ ಮತ್ಯಾರೂ ಅಲ್ಲ ಸ್ಯಾಂಡಲ್ ವುಡ್ ನ ನಟ , ನಿರ್ದೇಶಕ ರಾಜ್ ಬಿ ಶೆಟ್ಟಿ.. ಕಥೆಯನ್ನ ರಾಜ್ ಬಿ ಶೆಟ್ಟಿಯವರ ಬಳಿ ಹೇಳಿದಾಗ ಅವರಿಗೆ ಈ ಹೆಸರು ಹೊಳೆದಿದೆಯಂತೆ.. ಹಾಗಾಗಿ ಅವರು ಈ ಹೆಸರು ಸೂಚಿಸಿದ್ದಾರೆ. ಹೀಗಾಗಿ ಈ ಟೈಟಲ್ ಅಂತಿಮವಾಗಿದ್ದಾಗಿ ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ಧಾರೆ..