ಪುನೀತ್ ರಾಜ್ ಕುಮಾರ್ ಅವರು ನಮ್ನನ್ನೆಲ್ಲಾ ಅಗಲಿ 11 ತಿಂಗಳು ಕಳೆದಿದೆ.. ಸೆಪ್ಟೆಂಬರ್ 29 ಕ್ಕೆ ಕುಟುಂಬದ್ಥರು ಅಪ್ಪು ಸಮಾಧಿಗೆ ಪೂಜೆ ನೆರವೇರಿಸಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಅವರ ಬಗ್ಗೆ ಗೊತ್ತಿಲ್ಲದ ಷ್ಟೋ ಇಂಟ್ರೆಸ್ಟಿಂಗ್ ವಿಚಾರಗಳು ಗೊತ್ತಾಗುತ್ತಲೇ ಇರುತ್ತವೆ..
ಅಂದ್ಹಾಗೆ ಪುನೀತ್ ರಾಜ್ ಕುಮಾರ್ ಅವರು ವಿಶ್ವ ವಿಖ್ಯಾತ ಅರ್ನಾಲ್ಡ್ ಜೊತೆಗೆ ವೇದಿಕೆ ಹಂಚಿಕೊಂಡಿರುವ ಫೋಟೋವನ್ನ ಧೀರೇನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು , ಅಭಿಮಾನಿಗಳು ಖುಷಿ ಪಟ್ಟಿದ್ದಾರೆ..
ಪುನೀತ್ ರಾಜ್ ಕುಮಾರ್ ಅವರು ಕೇವಲ ಕನ್ನಡ ಅಷ್ಟೇ ಅಲ್ದೇ ತೆಲುಗು ತಮಿಳು ಸಿನಿಮಾರಂಗದ ಜೊತೆಗೂ ಉತ್ತಮ ಬಾಂಧವ್ಯವನ್ನ ಹೊಂದಿದ್ದರು.. ಅಲ್ಲಿನ ಕಾರ್ಯಕ್ರಮಗಳಿಗೂ ಹೋಗುತ್ತಿದ್ದರು.. ಅಂತೆಯೇ ಶಂಕರ್ ನಿರ್ದೇಶನದ ಹಾಗೂ ಚಿಯಾನ್ ವಿಕ್ರಮ್ ನಟನೆಯ ಸೂಪರ್ ಹಿಟ್ ಸಿನಿಮಾ ಐ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲೂ ಅಪ್ಪು ಭಾಗಿಯಾಗಿದ್ದರು..
ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಪುನೀತ್ ರಾಜ್ ಕುಮಾರ್ ಅವರನ್ನು ಈ ಕಾರ್ಯಕ್ರಮಕ್ಕೆ ಅತಿಥಿಗಳನ್ನಾಗಿ ಕರೆಸಲಾಗಿತ್ತು. ಅಲ್ಲದೇ ಈ ಕಾರ್ಯಕ್ರಮಕ್ಕೆ ವಿಶ್ವವಿಖ್ಯಾತ ನಟ ಕಮ್ ರಾಜಕಾರಣಿ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಕೂಡ ಆಗಮಿಸಿದ್ದರು.
ಈ ವೇಳೆ ರಜನಿಕಾಂತ್ ಹಾಗೂ ಪುನೀತ್ ರಾಜ್ ಕುಮಾರ್ ಅವರನ್ನು ಅರ್ನಾಲ್ಡ್ ಅವರು ವಿಶೇಷವಾಗಿ ಭೇಟಿ ಮಾಡಿ ಕೈ ಕುಲುಕಿ ಮಾತನಾಡಿಸಿದ್ದರು.. ಒಂದೇ ವೇದಿಕೆ ಹಂಚಿಕೊಂಡಿದ್ದ ಫೋಟೋವನ್ನ ಧೀರೇನ್ ಅವರು ಈಗ ಶೇರ್ ಮಾಡಿಕೊಂಡಿದ್ದಾರೆ.
ಧೀರೇನ್ ರಾಮ್ ಕುಮಾರ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋವನ್ನ ಹಂಚಿಕೊಂಡಿದ್ದಾರೆ..