Sharmila Mandre : ‘ಮರ್ಡರ್ ಲೈವ್’ ನಲ್ಲಿ ಶರ್ಮಿಳಾ ಮಾಂಡ್ರೆ..!!
ಗಾಳಿಪಟ 2 ಸಿನಿಮಾ ಸಕ್ಸಸ್ ಆದ ನಂತರ ಇದೀಗ ನಟಿ ಶರ್ಮಿಳಾ ಮಾಂಡ್ರೆ ಅವರು ದುಬಾರಿ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗುತ್ತಿದ್ದಾರೆ.. ‘ಮರ್ಡರ್ ಲೈವ್’ ನಲ್ಲಿ ನಟಿಸಲು ನಟಿ ಸಜ್ಜಾಗಿದ್ದಾರೆ..
ಕನ್ನಡದ ನಟಿ ಶರ್ಮಿಳಾ ಮಾಂಡ್ರೆ ನಟನೆಯ ಗೋಲ್ಡನ್ ಸ್ಟಾರ್ ಗಣೇಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಗಾಳಿಪಟ 2 ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿ ಬಿಗ್ ಸಕ್ಸಸ್ ಕಂಡಿದೆ..
ಇದೀಗ ಶರ್ಮಿಳಾ ದುಬಾರಿ ಪ್ರಾಜೆಕ್ಟ್ ಒಂದ್ರಲ್ಲಿ ನಟಿಸಲು ಸಜ್ಜಾಗ್ತಿದ್ದಾರೆ.. ಇದೊಂದು ಹಾಲಿವುಡ್ ಶೈಲಿಯ ಕನ್ನಡ ಸಿನಿಮಾವಾಗಿರಲಿದೆ.. ಮರ್ಡರ್ ಮಿಸ್ಟರ್ ಕ್ರೈಮ್ ಥ್ರಿಲ್ಲರ್ ಆಗಿರಲಿದೆ.. ಅಂದ್ಹಾಗೆ ಈ ಸಿನಿಮಾ ಕನ್ನಡ ಹಾಗೂ ತಮಿಳಿನಲ್ಲಿ ತಯಾರಾಗುತ್ತಿದೆ.. ಈ ಮೂಲಕ 10 ವರ್ಷಗಳ ನಂತರ ಮತ್ತೆ ತಮಿಳು ಇಂಡಸ್ಟ್ರಿಗೆ ಕಮ್ ಬ್ಯಾಕ್ ಕೊಡ್ತಿದ್ದಾರೆ ಶರ್ಮಿಳಾ… ಮಿರತ್ತಲ್ ಎಂಬ ತಮಿಳಿನ ಸಿನಿಮಾದಲ್ಲಿ ಶರ್ಮಿಳಾ ವರ್ಷಗಳ ಹಿಂದೆ ನಾಯಕಿಯಾಗಿ ಬಣ್ಣ ಹಚ್ಚಿದ್ದರು..
ಇದೀಗ ‘ಮರ್ಡರ್ ಲೈವ್’ ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಚಿತ್ದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.. ಅಂದ್ಹಾಗೆ ಈ ಸಿನಿಮಾ ಬ್ಲೈಂಡ್ ಡೇಟ್ , ಸ್ಕ್ಐ ಹೈ , ಗ್ಲಿಚ್ ಸೇರಿದಂತೆ ಹಲವು ಚಿತ್ರಗಳನ್ನ ಹಾಲಿವುಡ್ ಸಿನಿಮಾಗಳನ್ನ ನಿರ್ದೇಶಿಸಿರುವ ನಿಕೋ ಮಾಸ್ತೋರಾಕಿಸ್ ಅವರ ಕಥೆಯನ್ನು ಆಧರಿಸಿದೆ. ಸೈಕೋ ಕಿಲ್ಲರ್ ಮತ್ತು ನಾಲ್ವರು ಮಹಿಳೆಯರ ಸುತ್ತ ಈ ಕಥೆ ಸುತ್ತುತ್ತದೆ..