ಸೆಪ್ಟೆಂಬರ್ 30 ರಂದು ದೆಹಲಿಯ ವಿಗ್ಯಾನ್ ಭವನದಲ್ಲಿ ಕಲಾವಿದರಿಗೆ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗಿದೆ.. ಸಿನಿಮಾರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದರಿಗೆ ನೀಡಲಾಗುವ ರಾಷ್ಟ್ರಪ್ರಶಸ್ತಿಗೆ ಹಲವು ಕಲಾವಿದರು ಹಾಗೂ ಸಿನಿಮಾಗಳು ಭಾಜನವಾಗಿದ್ದು , ಕನ್ನಡ , ತಮಿಳು , ತೆಲುಗು ಸೇರಿದಂತೆ ಭಾರತೀಯ ಸಿನಿಮಾರಂಗದ ಹಲವಾರು ಭಾಷೆಯ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ..
ವಿಶಿಷ್ಟವಾದ ಕತೆ ಹೊಂದಿರುವ ಸಾಗರ್ ಪುರಾಣಿಕ್ ನಿರ್ದೇಶನದ , ಕಾರ್ತಿಕ್ ಮಹೇಶ್ ಹಾಗೂ ನಿಧಿ ಹೆಗ್ಡೆ ನಟನೆಯ ಡೊಳ್ಳು ಚಿತ್ರ ಹಾಗೂ ದಿವಂಗತನ ನಟ ಸಂಚಾರಿ ವಿಜಯ್ ಅಭಿನಯ ತಲೆ ದಂಡ ಚಿತ್ರ ಹಾಗೂ ಗಿರೀಶ್ ಕಾಸರವಳ್ಳಿ ನಿರ್ದೇಶನದ ನಾದದ ನವನೀತ ಡಾ. ಪಿಟಿ ವೆಂಕಟೇಶ್ ಕುಮಾರ್ ಚಿತ್ರಗಳಿಗೆ ಈ ಬಾರಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ…
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರದಿಂದ ರಾಷ್ಟ್ರ ಪ್ರಶಸ್ತಿ ಬಗ್ಗೆ ಘೋಷಣೆ ಮಾಡಲಾಗಿತ್ತು.. ಸೆಪ್ಟೆಂಬರ್ 30 ರಂದು ದೆಹಲಿಯ ವಿಗ್ಯಾನ್ ಭವನದಲ್ಲಿ ಕಲಾವಿದರಿಗೆ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗಿದೆ..
ವಿಜೇತ ಕಲಾವಿದರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು..
ಕನ್ನಡ , ತಮಿಳು ಸೇರಿದಂತೆ ಭಾರತೀಯ ಸಿನಿಮಾರಂಗದ ಹಲವು ಕಲಾವಿದರು ರಾಷ್ಟ್ರಪ್ರಶಸ್ತಿಗೆ ಪಾತ್ರರಾದರು..