ಬಾಲಿವುಡ್ ಹಾಗೂ ಇತರೇ ಸಿನಿಮಾರಂಗಗಳಲ್ಲಿ ಇರಬಹುದು , ಕಿರುತೆರೆಯಲ್ಲೇ ಇರಬಹುದು ಯುವ ನಟ , ನಟಿಯರ ತ್ಮಹತ್ಯೆ ಪ್ರಕರಣಗಳು ಹೆಚ್ಚಾಗ್ತಿವೆ.. ಇದೀಗ ಮತ್ತೋರ್ವ ಯುವ ಬಾಲಿವುಡ್ ನಟಿ ಹಾಗೂ ರೂಪದರ್ಶಿಯಾಗಿದ್ದ ಆಕಾಂಕ್ಷಾ ಮೂಹನ್ ಎಂಬಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ..
ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ ಬಾಲಿವುಡ್ ಚಿತ್ರ ಸಿಯಾ ಸಿನಿಮಾದದಲ್ಲಿ ಆಕಾಂಕ್ಷಾ ಕಾಣಿಸಿಕೊಂಡಿದ್ದರು.. ಅಷ್ಟೇ ಅಲ್ದೇ ಆಕಾಂಕ್ಷಾ ತಮಿಳಿನ ‘9 ಥಿರದರ್ಗಳ್’ ಸಿನಿಮಾದಲ್ಲೂ ನಟಿಸಿದ್ದರು..
ಮುಂಬೈನ ಹೋಟೆಲ್ ನಲ್ಲಿ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಮೃತದೇಹದ ಬಳಿಯಿಂದ ಡೆಟ್ ನೋಟ್ ಸಹ ಸಿಕ್ಕಿದೆ.. ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಡೆತ್ ನೋಟ್ ನಲ್ಲಿ ” ಕ್ಷಮಿಸಿ, ಇದಕ್ಕೆ ಯಾರೂ ಹೊಣೆಗಾರರಲ್ಲ. ಯಾರಿಗೂ ತೊಂದರೆ ಕೊಡಬೇಡಿ. ನಾನು ಸಂತೋಷವಾಗಿಲ್ಲ, ಶಾಂತಿಯನ್ನು ಬಯಸುತ್ತೇನೆ ಎಂದು ಪತ್ರ ಬರೆದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ವರ್ಸೋವಾ ಪೊಲೀಸರು ಎಡಿಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.