ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಈಗ ಶುರುವಾಗುತ್ತಿದೆ…
ಮನೆಯಲ್ಲಿ ಟಾಸ್ಕ್ ಗಳು , ಕಂಟೆಸ್ಟೆಂಟ್ ಗಳ ನಡುವೆ ಅಸಮಾದಾನ ಫೈಟ್ ಗಳು , ಹೊಸ ಹೊಸ ಗಾಸಿಪ್ ಗಳು , ಎಲ್ಲವೂ ಶುರುವಾಗಿದೆ..
ಸೆಪ್ಟೆಂಬರ್ 24 ರಂದು ಗ್ರ್ಯಾಂಡ್ ಓಪನಿಂಗ್ ಪಡೆದ ಬಿಗ್ ಬಾಸ್ ಕನ್ನಡ ಸೀಸನ್ 9 ಸಾಕಷ್ಟು ವಿಶೇಷತೆ , ವಿಭಿನ್ನತೆಯಿಂದ ಕೂಡಿದ್ದು , ಕುತೂಹಲ ಹೆಚ್ಚಾಗಿದೆ..
ಅಂದ್ಹಾಗೆ ಬಿಗ್ ಬಾಸ್ ನ ಈ ಸೀಸನ್ ನಲ್ಲಿ ಒಟಿಟಿ ಸ್ಪರ್ಧಿಗಳು ಮಾಜಿ ಸ್ಪರ್ಧಿಗಳು ಹೊಸಬರ ಸಮಾಗಮವಾಗಿದೆ..
ಅದ್ರಲ್ಲೂ ರೂಪೇಶ್ ರಾಜಣ್ಣ , ಪ್ರಶಾಂತ್ ಸಂಬರ್ಗಿ , ರಾಕೇಶ್ , ಸೈಕ್ ಸವಾಝ್ , ಅಮೂಲ್ಯ , ರೂಪೇಶ್ , ಸಾನ್ಯಾ , ಕಾವ್ಯಶ್ರೀ , ತುಸು ಹೆಚ್ಚೇ ಹೈಲೇಟ್ ಆಗುತ್ತಿದ್ದಾರೆ.. ಇನ್ನೂ ಬಿಗ್ ಬಾಸ್ ಆರಂಭವಾಗಿ ಒಂದು ವರಾವೇ ಕಳೆಯುತ್ತಾ ಬಂದ್ರೂ ಅದ್ಯಾಕೋ ಮಯೂರಿ ನೇಹಾ ಸೈಲೆಂಟ್ ಆಗಿಯೇ ಉಳಿದು ಬಿಟ್ಟಿದ್ದಾರಾ.. ಓಪನಪ್ ಆಗುತ್ತಿಲ್ಲ.. ಯಾರೋಂದಿಗೂ ಮಿಂಗಲ್ ಆಗುತ್ತಿಲ್ಲಾ ಎನಿಸಿದೆ…
ಇತ್ತ ಸದಾ ಎಲ್ಲರನ್ನೂ ಮನರಂಜಿಸುವಲ್ಲಿ ಅರುಣ್ ಸಾಗರ್ ಹಿಂದೆ ಬೀಳುತ್ತಿಲ್ಲ.. ಹಿಂದಿನ ಸೀಸನ್ ನಂತೆಯ ಈ ಸೀಸನ್ ನಲ್ಲೂ ತಮ್ಮ ಚಾಳಿ ಮುಂದುವರೆಸಿರುವ ಪ್ರಶಾಂತ್ ಸಂಬರ್ಗಿ ಆರಂಭದಲ್ಲೇ ಆರ್ಯವರ್ಧನ್ ಗುರೂಜಿ ಅವರೊಂದಿಗೆ ಸುಖಾ ಸುಮ್ಮನೆ ಕಿರಿಕ್ ಮಾಡಿಕೊಂಡಿದ್ದರು.. ದರ್ಶ್ ಚಂದ್ರಪ್ಪ , ರೂಪೆಶ್ ಜೊತೆಗೆ ಕಿರಿಕ್ ಮಾಡಿಕೊಂಡಿದ್ದರು.. ಇನ್ನೂ ಈ ಸೀಸನ್ ನ ಕ್ಯಾಪ್ಟನ್ ಆಗಿ ವಿನೋದ್ ಆಯ್ಕೆಯಾಗಿದ್ದಾರೆ ಎನ್ನಲಾಗ್ತಿದೆ.. ಮತ್ತೊಂದೆಡೆ ಮೊದಲ ಕಳಪೆ ಕಂಟೆಸ್ಟೆಂಟ್ ಆಗಿ ರೂಪೇಶ್ ಅವರನ್ನ ಆಯ್ಕೆ ಮಾಡಿದ್ದು ರೂಪೇಶ್ ಅವರು ಇದರ ವಿರುದ್ಧ ಆಕ್ರೋಶಗೊಂಡಿದ್ದಾರೆ..
ಮನೆಯಲ್ಲಿ ಸ್ಟ್ರಾಂಗ್ ಮಹಿಳಾ ಕಂಟೆಸ್ಟೆಂಟ್ ಗಳಾಗಿ ದಿವ್ಯಾ ಉರುಡುಗ ಹಾಗೂ ಐಶ್ವರ್ಯಾ ಪಿಸ್ಸೆ ಗುರುತಿಸಿಕೊಂಡಿದ್ದಾರೆ.. ಧಾರಾವಾಹಿಯಲ್ಲಿ ಕಮಲಿಯಾಗಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಅಮೂಲ್ಯ ತಮ್ಮ ಪಾತ್ರಕ್ಕೆ ಡೆಡ್ ಆಪೋಸಿಟ್ ಎಂಬಂತೆ ಕಾಣಿಸಿಕೊಳ್ತಿದ್ದಾರೆ…
ಇತ್ತ ಅಮೂಲ್ಯ ರಾಕಿ ನಡುವೆ ಕ್ಲೋಸ್ ಬಾಂಡಿಂಗ್ ಬೆಳೆಯುತ್ತಿದೆಯಾ ಎನ್ನಿಸುತ್ತಿದೆ.. ಮತ್ತೊಂದೆಡೆ ಸಾನ್ಯಾ ಕಾವ್ಯಶ್ರೀ ಕ್ಲೋಸ್ ಆಗ್ತಿದ್ದು ಇದ್ರಿಂದ ಸಾನ್ಯಾಗೆ ಬೇಸರವಾಗುತ್ತಿದೆಯಾ ಎನಿಸುವಂತೆಯೇ ನಡೆದುಕೊಳ್ತಿದ್ದಾರೆ ಸಾನ್ಯಾ…
ಸದ್ಯ ಒಂದು ವಾರ ಬಿಗ್ ಬಾಸ್ ಮುಗಿದಿದೆ.. ಶನಿವಾರ ಭಾನುವಾರ ವೀಕೆಂಡ್ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಮನೆ ಮಂದಿ ಜೊತೆ ಮಾತನಾಡ್ತಾ , ಕ್ಲಾಸ್ ತೆಗೆದುಕೊಂಡು , ಕಾಲೆಳೆಯುವುದು ಎಲ್ಲವೂ ನಡೆಯಲಿದೆ..
ಕೊನೆಯಲ್ಲಿ ಎಲಿಮಿನೇಷನ್ ಇರಲಿದ್ದು , ಮೊದಲ ವಾರ ಮನೆಯಿಂದ ಹೊರ ನಡೆಯುವವರು ಯಾರು ಎಂಬ ಪ್ರಶ್ನೆ ಕಾಡಿದೆ..