ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರಾ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ಯಾರ್ ನೋಡಿದ್ರೂ ಸಿನಿಮಾ ಸೂಪರ್ ಹಿಟ್ ಅನ್ನೋ ಅಷ್ಟರ ಮಟ್ಟಿಗೆ ಸಿನಿಮಾವನ್ನ ಜನ ಮೆಚ್ಚಿಕೊಂಡಿದ್ದಾರೆ.. ರಿಷಬ್ ಶೆಟ್ಟಿ ನಟನೆಗೆ ಫಿದಾ ಆಗಿದ್ದಾರೆ… ಸಿನಿಮಾಗೆ ಹುಡುಕಿದ್ರೂ ನೆಗೆಟಿವ್ ರಿವ್ಯೂವ್ ಗಳು ಸಿಗುತ್ತಿಲ್ಲ..
ಹೊಂಬಾಳೆ ನಿರ್ದೇಶನದ ಸಿನಿಮಾಗೆ ಹೆಚ್ಚು ಯಶಸ್ಸು ಸಿಗುತ್ತಿದ್ದ ಹಾಗೆ ಸ್ಕ್ರೀನ್ ಗಳ ಸಂಖ್ಯೆ ಹೆಚ್ಚಿಸಲಾಗಿದೆ.. ಬುಕ್ ಮೈ ಶೋನಲ್ಲಿ ಟಿಕೆಟ್ಸ್ ಎಲ್ಲಾ ಸೋಲ್ಡ್ ಔಟ್ ಆಗ್ತಿದ್ದು , ಟಿಕೆಟ್ ಸಿಗೋದೇ ಕಷ್ಟವಾಗ್ತಿದೆ.. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ..
ಎಲ್ಲಾ ಆಯಾಮಳಿಂದ ನೋಡಿದ್ರೂ ಛಾಯಾಗ್ರಹಣ , ವಿಶ್ಯುವಲ್ ಕ್ವಾಲಿಟಿ , ರಿಷಬ್ ಶೆಟ್ಟಿ ಅಭಿನಯವು ಮೇಕಿಂಗ್ ಎಲ್ಲವೂ ಅದ್ಭುತವಾಗಿದ್ದು , ಕರಾವಳಿಯ ಸಂಸ್ಕೃತಿಯನ್ನ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ..
ಇನ್ನೂ ಸಿನಿಮಾ ಸಕ್ಸಸ್ ನ ಖುಷಿಯಲ್ಲಿರುವ ರಿಷಬ್ ಶೆಟ್ಟಿ
ಪುನೀತ್ ರಾಜ್‌ಕುಮಾರ್ ಹಾಗೂ ದೈವ ನರ್ತಕರಿಗೆ ಹಾಗೂ ಅವರ ಕುಟುಂಬಗಳಿಗೆ ಯಶಸ್ಸನ್ನ ಅರ್ಪಸಿದ್ದಾರೆ..
ಅಲ್ಲದೇ ತಮ್ಮ ಪತ್ನಿ ಪ್ರಗತಿ ಪ್ರಗ್ನೆಂಟ್ ಆಗಿದ್ದಾಗ ಹುಟ್ಟುಕೊಂಡಿದ್ದ ಕತೆ ಇದು, ಇಂದು ನನ್ನ ಮಗು ಹಾಗೂ ಈ ಕಾಂತಾರ ಮಗು ಎರಡೂ ಚೆನ್ನಾಗಿವೆ ಎಂದು ಹೇಳಿಕೊಂಡಿದ್ದಾರೆ..