ಸೆಪ್ಟೆಂಬರ್ 30 ರಿಲೀಸ್ ಆದ ಕನ್ನಡದ ಬಹುನಿರೀಕ್ಷೆಯ ಕಾಂತಾರಾ ಸಿನಿಮಾಗೆ ಎಲ್ಲೆಡೆಯಿಂದ ತ್ತಮ ರೆಸ್ಪಾನ್ಸ್ ಸಿಗುತ್ತಿದೆ.. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅದ್ಧೂರಿ ಓಟ ಮುಂದುವರೆಸಿದೆ..
ಸಿನಿಮಾ ಬಗ್ಗೆ ಹುಡುಕಿದ್ರೂ ನೆಗೆಟಿವ್ ರಿವ್ಯೂವ್ ಗಳು ಸಿಗೋದು ಕಷ್ಟವಾಗಿದೆ.. ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾವನ್ನ ಹಾಡಿ ಹೊಗಳುತ್ತಿದ್ದಾರೆ.. ಥಿಯೇಟರ್ ಗಳ ಮುಂದೆ ವೀಕ್ಷಕರ ಎಕ್ಸೈಟ್ ಮೆಂಟ್ ಸಾಕು ಸಿನಿಮಾ ಹೇಗಿರಬಹುದೆಂದ ಅಂದಾಜಿಸಲು..
ಥಿಯೇಟರ್ ಮುಂದೆ ಅಭಿಮಾನಿಗಳ ರಿಯಾಕ್ಷನ್ ನೋಡಿ ರಿಷಬ್ ಶೆಟ್ಟಿ ಭಾವುಕರಾಗಿ ಕುಣಿದು ಕುಪ್ಪಳಿಸಿದ್ದರು.. ಹೊಂಬಾಳೆ ನಿರ್ಮಾಣದ ಈ ಸಿನಿಮಾಗೆ ರಿಷಬ್ ಆಕ್ಷನ್ ಕಟ್ ಹೇಳಿದ್ದು , ಸಿನಿಮಾ ಪಕ್ಕ ಸೂಪರ್ ಹಿಟ್ ಲಿಸ್ಟ್ ಸೇರೋದ್ರಲ್ಲಿ ಡೌಟೇ ಇಲ್ಲ..
ಅಂದ್ಹಾಗೆ ಇದೇ ದಿನವೇ ಸೌತ್ ನ ಮತ್ತೊಂದು ಪವರ್ ಫುಲ್ ಸಿನಿಮಾ ರಿಲೀಸ್ ಆಗಿದೆ.. ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ಮಲ್ಟಿಸ್ಟಾರ್ , ಪ್ಯಾನ್ ಇಂಡಿಯನ್ ಬಿಗ್ ಬಜೆಟ್ ಪೊನ್ನಿಯನ್ ಸಿನಿಮಾ ಕೂಡ ಕಡಿಮೆ ಅಬ್ಬರಿಸುತ್ತಿಲ್ಲ.,. ಬಾಕ್ಸ್ ಆಫೀಸ್ ಶೇಕ್ ಮಾಡಿದೆ.. ಹಿಂದಿಯ ಹೃತಿಕ್ – ಸೈಫ್ ಅಲಿ ಖಾನ್ ಸಿನಿಮಾ ವಿಕ್ರಮ್ ವೇದ ಪೊನ್ನಿಯನ್ ಮುಂದೆ ಡಲ್ ಆಗಿದೆ.. ಮತ್ತೆ ಸೌತ್ ಬಾಲಿವುಡ್ ಮುಂದೆ ಅಬ್ಬರಿಸುತ್ತಿದೆ.. ಬ್ರಹ್ಮಾಸ್ತ್ರ ಹವಾ ತಗ್ಗಿ ಹೋಗಿದೆ.,.
ಅಂದ್ಹಾಗೆ ಪೊನ್ನಿಯನ್ ಸೆಲ್ವನ್ ಕಾಂತಾರಾಗೆ ಟಫ್ ಕಾಂಪಿಟೇಷನ್ ಕೊಡುತ್ತಿದೆ ಆದ್ರೂ ರಾಜ್ಯದಲ್ಲಿ ಕಾಂತಾರಾದೇ ಹವಾ ಜೋರಾಗಿದೆ..
ಮತ್ತೊಂದೆಡೆ ಉತ್ತಮವಾಗಿ ಪೊನ್ನಿಯನ್ ಸೆಲ್ವನ್ ಪ್ರದರ್ಶನ ಕಾಣ್ತಿದ್ದರೂ ಕೂಡ ,, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿದೆ..
ಇನ್ನೂ ಬುಕ್ ಮೈ ಶೋನಲ್ಲಿ ನೋಡೋದಾದ್ರೆ ಕಾಂತಾರಗೆ 99% ( 2800 ವೋಟ್ ) , ಪೊನ್ನಿಯಿನ್ ಸೆಲ್ವನ್ ಗೆ 89% ( 35900 ವೋಟ್ ) , ವಿಕ್ರಮ್ ವೇದಗೆ 89% ( 12400 ವೋಟ್ ) , ತೋತಾಪುರಿಗೆ 75% ( 96 ವೋಟ್ ) ಸಿಕ್ಕಿದೆ..
IMDB Rating
ಕಾಂತಾರ: 9.8 ರೇಟಿಂಗ್
ಪೊನ್ನಿಯಿನ್ ಸೆಲ್ವನ್: 8.9
ವಿಕ್ರಮ್ ವೇದ: 6.7
ತೋತಾಪುರಿ: 5.6