Biggboss Kannada 9 : ಮೊದಲ ವಾರ ಮನೆಯಿಂದ ಹೊರ ನಡೆದ ಸ್ಪರ್ಧಿ ಇವರೇ..!!
ಬಿಗ್ ಬಾಸ್ ಮೊದಲನೇ ವಾರ ಮುಗಿದಿದ್ದು , ಶನಿವಾರದ ವೀಕೆಂಡ್ ಸಂಚಿಕೆ ಮುಕ್ತಾಯವೂ ಆಗಿದೆ.. ಎಲಿಮಿನೇಷನ್ ಸುತ್ತಿನಲ್ಲಿದ್ದ 12 ಮಂದಿ ಪೈಕಿ ಮೂವರು ಸೇಫ್ ಆಗಿದ್ದಾರೆ.. ಇನ್ನುಳಿದವರಲ್ಲಿ ಯಾರು ಮನೆಯಿಂದ ಹೊರನಡೆಯಲಿದ್ದಾರೆ ಎಂಬುದು ಭಾನುವಾರದ ಸಂಚಿಕೆಯಲ್ಲಿ ಗೊತ್ತಾಗಲಿದೆ..
ಆದ್ರೆ ಮೂಲಗಳ ಪ್ರಕಾರ ಮೊದಲನೇ ವಾಋ ಮನೆಯಿಂದ ಬೈಕ್ ರೇಸೆರ್ ಐಶ್ವರ್ಯ ಪಿಸ್ಸೆ ಎಲಿಮಿನೇಟ್ ಆಗಿ ಹೊರನಡೆದಿದ್ದಾರೆ ಎನ್ನಲಾಗ್ತಿದೆ..
ಹೌದು..! ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಐಶ್ವರ್ಯಗೆ ಬೆಂಬಲಿಸುತ್ತಿದ್ದವರಲ್ಲಿ ಬೇಸರ ಮನೆ ಮಾಡಿದೆ.. ಉತ್ತಮ ಆಟಗಾರ್ತಿ ಟಾಸ್ಕ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಾ ಸ್ಟ್ರಾಂಗ್ ಕಂಟೆಸ್ಟೆಂಟ್ ಎನಿಸಿಕೊಂಡರೂ ಟಾಸ್ಕ್ ಹೊರತಾಗಿ ಅಷ್ಟಾಗಿ ಸದ್ದು ಮಾಡದೇ ಸೈಲೆಂಟ್ ಆಗಿದ್ದೇ ಐಶ್ವರ್ಯಾಗೆ ನೆಗೆಟಿವ್ ಆಯ್ತಾ..??
ಹೆಚ್ಚಾಗಿ ಸದ್ದು ಮಾಡದೇ ಇದ್ದ ಕಾರಣಕ್ಕೆ ಎಲಿಮಿನೇಟ್ ಆದ್ರಾ ಎಂದು ಚರ್ಚೆಗಳಾಗ್ತಿವೆ.. ಅಧಿಕೃತವಾಗಿ ರಾತ್ರಿಯ ಎಪಿಸೋಡ್ ನಲ್ಲಿ ಮನೆಯಿಂದ ಹೊರನಡೆದ ಸ್ಪರ್ಧಿಯ ಬಗ್ಗೆ ಗೊತ್ತಾಗಲಿದೆ..
ಆನಂತರ ಮನೆಯಿಂದ ಹೊರಬಂದ ಸ್ಪರ್ಧಿ ಜೊತೆಗೆ ಕಿಚ್ಚ ಸುದೀಪ್ ವೇದಿಕೆ ಮೇಲೆ ಒಂದಷ್ಟು ಹೊತ್ತು ಮಾತನಾಡಿಸಿ ಕಳುಹಿಸಿಕೊಡಲಿದ್ದಾರೆ..