ಬಿಗ್ ಬಾಸ್ ಮೊದಲನೇ ವಾರ ಮುಗಿದಿದ್ದು , ಶನಿವಾರದ ವೀಕೆಂಡ್ ಸಂಚಿಕೆ ಮುಕ್ತಾಯವೂ ಆಗಿದೆ.. ಎಲಿಮಿನೇಷನ್ ಸುತ್ತಿನಲ್ಲಿದ್ದ 12 ಮಂದಿ ಪೈಕಿ ಮೂವರು ಸೇಫ್ ಆಗಿದ್ದಾರೆ.. ಇನ್ನುಳಿದವರಲ್ಲಿ ಯಾರು ಮನೆಯಿಂದ ಹೊರನಡೆಯಲಿದ್ದಾರೆ ಎಂಬುದು ಭಾನುವಾರದ ಸಂಚಿಕೆಯಲ್ಲಿ ಗೊತ್ತಾಗಲಿದೆ..
ಸದ್ಯ ಸೀಸನ್ 9 ಭಾರಿ ರೋಚಕತೆಯಿಂದ ಕೂಡಿದೆ.. ಹಳಬರು , ಹೊಸಬರು , ಒಟಿಟಿ ಸ್ಪರ್ಧಿಗಳು ದೊಡ್ಮನೆ ಸೇರಿದ್ದು , ಎಲ್ಲರ ವ್ಯಕ್ತಿತ್ವವೂ ಭಿನ್ನವಾಗಿದೆ.. ಅಂದ್ಹಾಗೆ ಪ್ರಶಾಂತ್ ಸಂಬರ್ಗಿಯವರು ಈ ಬಾರಿಯೂ ಸಿಕ್ಕಾಪಟ್ಟೆ ಹೈಲೇಟ್ ಆಗ್ತಿದ್ದು , ಇತ್ತೀಚೆಗೆ ರಾಕೇಶ್ ಆಡಿಗ ವಿರುದ್ಧ ಸಂಬರ್ಗಿ ಸಿಡಿದೆದ್ದಿದ್ದಾರೆ..
ರಾಕೇಶ್ ಪ್ರ್ಯಾಂಕ್ ಮಾಡಲು ಹೋಗಿ ಪ್ರಶಾಂತ್ ಸಂಬರ್ಗಿ ಅವರ ಆಕ್ರೋಶಕ್ಕೆ ಗುರಿಯಾಗಿದ್ದು , ರಾಕೇಶ್ ಕೊರಳ ಪಟ್ಟಿ ಹಿಡಿದಿದ್ದಾರೆ ಸಂಬರ್ಗಿ..
ಎಲ್ಲರನ್ನೂ ಪ್ರ‍್ಯಾಂಕ್ ಮಾಡಲು ಅನುಪಮಾ ಹಾಗೂ ರಾಕೇಶ್ ನಿರ್ಧಾರ ಮಾಡಿದ್ದರು.. ಇದರ ಭಾಗವಾಗಿಯೇ ಬಾಯಲ್ಲಿ ಪೇಸ್ಟ್ ಹಾಕಿಕೊಂಡ ರಾಕೇಶ್ , ಗಾರ್ಡನ್ ಏರಿಯಾಗೆ ಬಂದು ಬಿದ್ದು ಪಿಡ್ಸ್ ಬಂದ ರೀತಿಯಲ್ಲಿ ಒದ್ದಾಡಿದರು. ಅಮೂಲ್ಯ ಗೌಡ ಅವರು ನಗುತ್ತಲೇ ಜೋರಾಗಿ ಕೂಗಿ ಮನೆ ಮಂದಿಯನ್ನು ಕರೆದರು.
ಮನೆ ಮಂದಿಯೆಲ್ಲ ಆತಂಕದಿಂದ ಓಡಿ ಬಂದಿದ್ದು ಪ್ರಶಾಂತ್ ಸಂಬರ್ಗಿ ಅವರು ಬಹಳ ಆತಂಕಗೊಂಡಿದ್ದರು. ಮನೆಯಲ್ಲಿ ಆತಂಕದ ವಾತಾವರಣ ಹೆಚ್ಚುತ್ತಿದ್ದಂತೆ ಇದು ಪ್ರ‍್ಯಾಂಕ್ ಎಂದು ರಾಕೇಶ್ ನಕ್ಕಾಗ ಪ್ರಶಾಂತ್ ಸಂಬರ್ಗಿ ಸಿಟ್ಟಾಗಿದ್ದಾರೆ.
ರಾಕೇಶ್ ಕಾಲರ್ ಹಿಡಿದ ಪ್ರಶಾಂತ್ ಸಂಬರ್ಗಿ ರಾಕೇಶ್ ಇದು ಸರಿ ಅಲ್ಲ. ಈ ರೀತಿ ಮಾಡೋದ್ರಿಂದ ನೀವು ಆ ರೋಗಕ್ಕೆ, ಆ ರೋಗ ಬಂದವರಿಗೆ ಅವಮಾನ ಮಾಡಿದ್ದೀರಿ. ನನ್ನ ಮಗನಿಗೂ ಇದೇ ರೀತಿಯ ಕಾಯಿಲೆ ಇತ್ತು. ಆತ ನಿಂತಲ್ಲೇ ನಿಂತು ಬಿಡುತ್ತಿದ್ದ. ಚಿಕಿತ್ಸೆ ಕೊಡಿಸಿ ಕೊಡಿಸಿ ಆತನಿಗೆ ಕಾಯಿಲೆ ಈಗ ಗುಣಮುಖ ಆಗಿದೆ. ನನ್ನ ಮಗನೇ ನನಗೆ ನೆನಪಿಗೆ ಬಂದ ಎಂದು ಸಂಬರ್ಗಿ ಗಳಗಳನೇ ಅತ್ತಿದ್ದಾರೆ. ಈ ಪ್ರ‍್ಯಾಂಕ್ ನಲ್ಲಿ ಭಾಗಿ ಆದ ಅನೇಕರು ಪ್ರಶಾಂತ್ ಬಳಿ ಕ್ಷಮೆ ಕೇಳಿದರು.. ನಂತರ ರಾಕೇಶ್ ಸಹ ಕ್ಷಮೆಯಾಚಿಸಿದ್ದಾರೆ..