ಕಿರುತೆರೆಯ ಖ್ಯಾತ ನಟಿ ಆಕಾಶ ದೀಪಾ ಧಾರವಾಹಿಯ ಮೂಲಕ ಜನಪ್ರಿಯತೆ ಪಡೆದಿದ್ದ ದಿವ್ಯಾ ಶ್ರೀಧರ್ ( Divya Shridhar ) ಪತಿಯಿಂದ ತೀವ್ರ ಹಲ್ಲೆಗೆ ಒಳಗಾಗಿದ್ದಾರೆ.. ಈ ಸಂಬಂಧ ನಟಿ ಮಾಡಿದ್ದ ವಿಡಿಯೋ ಸೋಷಿಯಲ್ ಮೀಡಿಯೋ ವೈರಲ್ ಆಗ್ತಿದೆ…
ದಿವ್ಯಾ ಶ್ರೀಧರ್ ಪತಿ ಅಮ್ಜಾದ್ ನನ್ನ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿ ಮದುವೆ ಆಗಿರುವುದಾಗಿ ಒಪ್ಪಿಕೊಂಡಿದ್ದಾರೆ. ತಮಿಳು ಮಾಧ್ಯಮಗಳ ಜೊತೆ ಮಾತನಾಡಿರುವ ನಟಿ ನಾವಿಬ್ಬರೂ ಒಂದೇ ಸೀರಿಯಲ್ ನಲ್ಲಿ ನಟಿಸುತ್ತಿದ್ದಾಗ ಪರಿಚಯವಾಗಿದ್ದು.
ಆಮೇಲೆ ಪರಸ್ಪರ ಪ್ರೀತಿಸೋಕೆ ಶುರು ಮಾಡಿದೆವು. ಮೊದಲು ಅವರು ಮುಸ್ಲಿಂ ಅಂತ ಗೊತ್ತಿರಲಿಲ್ಲ. ಆನಂತರ ಗೊತ್ತಾಗಿದ್ದು. ಆಮೇಲೆ ತಮ್ಮ ಧರ್ಮಕ್ಕೆ ಮತಾಂತರ ಆಗುವಂತೆ ಅಮ್ಜದ್ ಖಾನ್ ಒತ್ತಾಯಿಸಿದ್ದರು..
ಬಳಿಕ ನಾನು ಅವರ ಧರ್ಮಕ್ಕೆ ಮತಾಂತರಗೊಂಡು ವಿವಾಹವಾದೆ ಎಂದಿದ್ದಾರೆ.. ನಾನು ಇಷ್ಟಪಟ್ಟ ಹುಡುಗನನ್ನು ಮದುವೆ ಆಗುವುದಕ್ಕಾಗಿ ನಾನು ಇಸ್ಲಾಂ ಧರ್ಮಕ್ಕೆ ಮತಾಂತರ ಆದೆ. ಅದು ಅವರ ಒತ್ತಾಯವೂ ಆಗಿತ್ತು. ಆನಂತರ ಹಿಂದೂ ವಿವಾಹದ ಪ್ರಕಾರವೂ ನಾವಿಬ್ಬರೂ ಮದುವೆ ಆಗಲು ತೀರ್ಮಾನಿಸಿದ್ದೆವು. ಹಾಗಾಗಿ ಕಾಂಚಿಪುರಂನಲ್ಲಿರುವ ದೇವಾಲಯದಲ್ಲಿ ಹಿಂದೂಗಳ ಪ್ರಕಾರ ಮದುವೆ ಆದೆವು ಎಂದಿದ್ದಾರೆ..
ನಾವಿಬ್ಬರೂ ಮದುವೆ ಆದ ಫೋಟೋ ಮತ್ತು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದೆ. ಆದರೆ ಅದಕ್ಕೆ ಅವರು ವಿರೋಧ ವ್ಯಕ್ತ ಪಡಿಸಿದ್ದರು. ನನ್ನ ಕೆರಿಯರ್ ಗೆ ತೊಂದರೆ ಆಗುತ್ತದೆ. ಹಾಗಾಗಿ ಅವುಗಳನ್ನು ಡಿಲೀಟ್ ಮಾಡು ಎಂದು ಒತ್ತಡ ಹೇರಿದರು. ಯಾರಾದರೂ ಆ ಫೋಟೋ ಬಗ್ಗೆ ಕೇಳಿದರೆ, ಅವು ಜಾಹೀರಾತಿಗಾಗಿ ತಗೆದದ್ದು ಎಂದು ಹೇಳುವಂತೆಯೂ ಒತ್ತಾಯಿಸಿದ್ದರು ಎಂದು ಹೇಳಿಕೊಂಡಿದ್ದಾರೆ..
ಅಲ್ಲದೇ ತಾವು ಗರ್ಭಿಣಿ ಎನ್ನುವುದು ಗೊತ್ತಾದ ಬಳಿಕ ಅಮ್ಜಾದ್ ಖಾನ್ ದೂರ ಆಗುವುದಕ್ಕೆ ಶುರು ಮಾಡಿದರಂತೆ. ಮಗುವನ್ನು ಗರ್ಭಪಾತ ಮಾಡಿಸಲು ಒತ್ತಾಯಿಸಿದರು. ಈ ಕಾರಣದಿಂದಲೇ ನಮ್ಮಿಬ್ಬರ ನಡುವೆ ಜಗಳವಾಗಿತ್ತು.. ಆಗ ನನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದಿದ್ದಾರೆ.. ಪತಿಯಿಂದ ದೈಹಿಕ ಹಲ್ಲೆಗೆ ಒಳಗಾಗಿರುವ ದಿವ್ಯಾ ಸದ್ಯ ಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..