ಬೆಂಗಳೂರಿನಲ್ಲಿ ನಡೆದ 67 ನೇ ಫಿಲ್ಮ್ ಫೇರ್ ಸೌತ್ 2022 ರ ಸಮಾರಂಭ ಕಲರ್ ಫುಲ್ ಆಗಿ ಆಯೋಜನೆಗೊಂಡಿತ್ತು.. ದಕ್ಷಿಣ ಭಾರತದ ಸೌತ್ ಸ್ಟಾರ್ ನಟ ನಟಿಯರ ದಂಡೇ ಈ ಸಮಾರಂಭದಲ್ಲಿ ಭಾಗಿಯಾಗಿತ್ತು.. ಅತ್ಯುತ್ತಮ ಸಿನಿಮಾಗಳು , ನಟ ನಟಿಯರು ಸೇರಿದಂತೆ ಪ್ರತ್ಯೇಕ ಭಾಷಾವಾರು ಪ್ರಶಸ್ತಿಗಳನ್ನ ನೀಡಿ ಗೌರವಿಸಲಾಗಿದೆ..
ಸ್ಯಾಂಡಲ್ ವುಡ್ , ಕಾಲಿವುಡ್ , ಮಾಲಿವುಡ್ , ಟಾಲಿವುಡ್ ಎಲ್ಲಾ ಸಿನಿಮಾರಂಗದ ತಾರೆಯರು ಒಂದೆಡೆ ಸೇರಿದ್ದರು..
ಅಂದ್ಹಾಗೆ ಈ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ನೆನಪು ಮಾಡಿಕೊಳ್ಳುತ್ತಾ ಅವರ ಸಾಧನೆಗಳನ್ನ ಸ್ಮರಿಸಲಾಗಿದೆ.. ಅಪ್ಪು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ..
ಸಿನಿಮಾ ಕ್ಷೇತ್ರದಲ್ಲಿ ಪುನೀತ್ ರಾಜ್‌ಕುಮಾರ್ ಮಾಡಿದ ಸಾಧನೆಯನ್ನು ಪರಿಗಣಿಸಿ, ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2020 ಹಾಗೂ 2021ರ ಮರಣೋತ್ತರ ಜೀವನಮಾನ ಸಾಧನೆ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿಯನ್ನು ಪುನೀತ್ ಸಹೋದರಿ ಸ್ವೀಕರಿಸಿದ್ದಾರೆ.
ಅಂದ್ಹಾಗೆ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕೂಡ ಭಾಗಿಯಾಗಿದ್ದರು..
67 th Film Fare South 2022