ಬೆಂಗಳೂರಿನಲ್ಲಿ ನಡೆದ 67 ನೇ ಫಿಲ್ಮ್ ಫೇರ್ ಸೌತ್ 2022 (67 th FilmFare South 2022) ರ ಸಮಾರಂಭ ಕಲರ್ ಫುಲ್ ಆಗಿ ಆಯೋಜನೆಗೊಂಡಿತ್ತು.. ದಕ್ಷಿಣ ಭಾರತದ ಸೌತ್ ಸ್ಟಾರ್ ನಟ ನಟಿಯರ ದಂಡೇ ಈ ಸಮಾರಂಭದಲ್ಲಿ ಭಾಗಿಯಾಗಿತ್ತು.. ಅತ್ಯುತ್ತಮ ಸಿನಿಮಾಗಳು , ನಟ ನಟಿಯರು ಸೇರಿದಂತೆ ಪ್ರತ್ಯೇಕ ಭಾಷಾವಾರು ಪ್ರಶಸ್ತಿಗಳನ್ನ ನೀಡಿ ಗೌರವಿಸಲಾಗಿದೆ..
ಸ್ಯಾಂಡಲ್ ವುಡ್ , ಕಾಲಿವುಡ್ , ಮಾಲಿವುಡ್ , ಟಾಲಿವುಡ್ ಎಲ್ಲಾ ಸಿನಿಮಾರಂಗದ ತಾರೆಯರು ಒಂದೆಡೆ ಸೇರಿದ್ದರು..
ಅಂದ್ಹಾಗೆ ಈ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ನೆನಪು ಮಾಡಿಕೊಳ್ಳುತ್ತಾ ಅವರ ಸಾಧನೆಗಳನ್ನ ಸ್ಮರಿಸಲಾಗಿದೆ.. ಅಪ್ಪು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ..
ಕನ್ನಡ , ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಅದ್ಭುತ ಸಿನಿಮಾಗಳು ಬಿಡುಗಡೆಯಾಗಿದ್ದು , ಯಾವ ಸಿನಿಮಾಗಳು ನಟ ನಟಿಯರಿಗೆ ಪ್ರಶಸ್ತಿ ಒಲಿದಿದೆ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ..
ಕನ್ನಡದಲ್ಲಿ ಪ್ರಶಸ್ತಿ ಪಟ್ಟಿ..
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ – ಧನಂಜಯ್ (ಬಡವ ರಾಸ್ಕಲ್)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ – ಯಜ್ಞ ಶೆಟ್ಟಿ (ಆಕ್ಟ್ 1978)
ಅತ್ಯುತ್ತಮ ಚಿತ್ರ – ಆಕ್ಟ್ 1978
ಅತ್ಯುತ್ತಮ ನಿರ್ದೇಶಕ – ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ – ಬಿ. ಸುರೇಶ (ಆಕ್ಟ್ 1978)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ – ಉಮಾಶ್ರೀ (ರತ್ನನ್ ಪ್ರಪಂಚ)
ಅತ್ಯುತ್ತಮ ಸಂಗೀತ ಆಲ್ಬಮ್ – ವಾಸುಕಿ ವೈಭವ್ (ಬಡವ ರಾಸ್ಕಲ್)
ಅತ್ಯುತ್ತಮ ಸಾಹಿತ್ಯ – ಜಯಂತ್ ಕಾಯ್ಕಿಣಿ- ತೇಲಾಡು ಮುಗಿಲೆ (ಆಕ್ಟ್ 1978)
ಅತ್ಯುತ್ತಮ ಹಿನ್ನೆಲೆ ಗಾಯಕ – ರಘು ದೀಕ್ಷಿತ್ – ಮಳೆ ಮಳೆ ಮಳೆ (ನಿನ್ನ ಸನಿಹಕೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಅನುರಾಧಾ ಭಟ್- ಧೀರ ಸಮ್ಮೋಹಗಾರ (ಬಿಚ್ಚುಗಟ್ಟಿ)
ಅತ್ಯುತ್ತಮ ಛಾಯಾಗ್ರಹಣ – ಶ್ರೀಶ ಕುಡುವಳ್ಳಿ (ರತ್ನನ್ ಪ್ರಪಂಚ)
ಬೆಸ್ಟ್ ಕೊರಿಯೋಗ್ರಫಿ – ಜಾನಿ ಮಾಸ್ಟರ್ – ಫೀಲ್ ದಿ ಪವರ್ (ಯುವರತ್ನ)
ಜೀವಮಾನದ ಸಾಧನೆ ಪ್ರಶಸ್ತಿ – ಪುನೀತ್ ರಾಜ್‌ಕುಮಾರ್
ತೆಲುಗು ವಿಜೇತರು
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ – ಅಲ್ಲು ಅರ್ಜುನ್ (ಪುಷ್ಪ: ದಿ ರೈಸ್- ಭಾಗ 1)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ – ಸಾಯಿ ಪಲ್ಲವಿ (ಲವ್ ಸ್ಟೋರಿ)
ಅತ್ಯುತ್ತಮ ಚಿತ್ರ – ಪುಷ್ಪ: ದಿ ರೈಸ್- ಭಾಗ 1
ಅತ್ಯುತ್ತಮ ನಿರ್ದೇಶಕ – ಸುಕುಮಾರ್ ಬಂಡ್ರೆಡ್ಡಿ (ಪುಷ್ಪಾ: ದಿ ರೈಸ್- ಭಾಗ 1)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ – ಮುರಳಿ ಶರ್ಮಾ (ಅಲಾ ವೈಕುಂಠಪುರಮುಲೂ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ – ಟಬು (ಅಲಾ ವೈಕುಂಠಪುರಮುಲೂ)
ಅತ್ಯುತ್ತಮ ಸಾಹಿತ್ಯ – ಸೀತಾರಾಮ ಶಾಸ್ತ್ರಿ – ಲೈಫ್ ಆಫ್ ರಾಮ್ (ಜಾನು)
ಅತ್ಯುತ್ತಮ ಹಿನ್ನೆಲೆ ಗಾಯಕ – ಸಿದ್ ಶ್ರೀರಾಮ್ – ಶ್ರೀವಲ್ಲಿ (ಪುಷ್ಪಾ: ದಿ ರೈಸ್- ಭಾಗ 1)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಇಂದ್ರಾವತಿ ಚೌಹಾಣ್ – ಊ ಅಂತವ (ಪುಷ್ಪ: ದಿ ರೈಸ್- ಭಾಗ 1)
ಅತ್ಯುತ್ತಮ ನೃತ್ಯ ಸಂಯೋಜನೆ – ಶೇಖರ್ ಮಾಸ್ಟರ್ – ರಾಮುಲೂ ರಾಮುಲಾ (ಅಲಾ ವೈಕುಂಠಪುರಮುಲೂ)
ಅತ್ಯುತ್ತಮ ಛಾಯಾಗ್ರಹಣ – ಮಿರೋಸ್ಲಾ ಕುಬಾ ಬ್ರೋಜೆಕ್ (ಪುಷ್ಪ: ದಿ ರೈಸ್- ಭಾಗ 1)
ಅತ್ಯುತ್ತಮ ಚೊಚ್ಚಲ ನಟ – ಪಂಜಾ ವೈಷ್ಣವ್ ತೇಜ್ (ಉಪ್ಪೆನಾ)
ಅತ್ಯುತ್ತಮ ನಟಿ ಡೆಬ್ಯೂ – ಕೃತಿ ಶೆಟ್ಟಿ (ಉಪ್ಪೆನಾ)
ಜೀವಮಾನದ ಸಾಧನೆ ಪ್ರಶಸ್ತಿ – ಅಲ್ಲು ಅರವಿಂದ್
ತಮಿಳು ವಿಜೇತರು
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ – ಸೂರ್ಯ (ಸೂರರೈ ಪೊಟ್ರು)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ – ಲಿಜೋಮೋಲ್ ಜೋಸ್ (ಜೈ ಭೀಮ್)
ಅತ್ಯುತ್ತಮ ಚಿತ್ರ – ಜೈ ಭೀಮ್
ಅತ್ಯುತ್ತಮ ನಿರ್ದೇಶಕರು – ಸುಧಾ ಕೊಂಗರ (ಸೂರರೈ ಪೊಟ್ರು)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ – ಪಶುಪತಿ (ಸರಪತ್ತ ಪರಂಬರೈ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ – ಊರ್ವಶಿ (ಸೂರರೈ ಪೊಟ್ರು)
ಅತ್ಯುತ್ತಮ ಸಂಗೀತ ಆಲ್ಬಮ್ – ಜಿ ವಿ ಪ್ರಕಾಶ್ ಕುಮಾರ್ (ಸೂರರೈ ಪೊಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಕ್ರಿಸ್ಟಿನ್ ಜೋಸ್ ಮತ್ತು ಗೋವಿಂದ ವಸಂತ- ಆಗಸಂ (ಸೂರರೈ ಪೊಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಧೀ- ಕಟ್ಟು ಪಾಯಲೆ (ಸೂರರೈ ಪೊಟ್ರು)
ಅತ್ಯುತ್ತಮ ನೃತ್ಯ ಸಂಯೋಜನೆ – ದಿನೇಶ್ ಕುಮಾರ್ – ವಾತಿ ಕಮಿಂಗ್ (ಮಾಸ್ಟರ್)
ಅತ್ಯುತ್ತಮ ಛಾಯಾಗ್ರಹಣ – ನಿಕೇತ್ ಬೊಮ್ಮಿರೆಡ್ಡಿ (ಸೂರರೈ ಪೊಟ್ರು)
ಮಲಯಾಳಂ ವಿಜೇತರು
ಅತ್ಯುತ್ತಮ ನಾಯಕ ನಟ – ಬಿಜು ಮೆನನ್ (ಅಯ್ಯಪ್ಪನಂ ಕೋಶಿಯಂ)
ಅತ್ಯುತ್ತಮ ನಾಯಕ ನಟಿ – ನಿಮಿಷಾ ಸಜಯನ್ (ದ ಗ್ರೇಟ್ ಇಂಡಿಯನ್ ಕಿಚನ್)
ಅತ್ಯುತ್ತಮ ಚಿತ್ರ – ಅಯ್ಯಪ್ಪನಂ ಕೋಶಿಯಂ
ಅತ್ಯುತ್ತಮ ನಿರ್ದೇಶಕ – ಸೆನ್ನಾ ಹೆಗ್ಡೆ (ತಿಂಕಾಲಜ್ಞಾ ನಿಶ್ಚಯಂ)
ಅತ್ಯುತ್ತಮ ಪೋಷಕ ನಟಿ – ಜೋಜು ಜಾರ್ಜ್ (ನಾಯಟ್ಟು)
ಅತ್ಯುತ್ತಮ ಪೋಷಕ ನಟಿ – ಗೌರಿ ನಂದಾ (ಅಯ್ಯಪ್ಪನಂ ಕೋಶಿಯಂ)
ಅತ್ಯುತ್ತಮ ಸಂಗೀತ ಆಲ್ಬಮ್ – ಎಂ. ಜಯಚಂದ್ರನ್ (ಸೂಫಿಯಂ ಸುಜಾತಯಂ)
ಅತ್ಯುತ್ತಮ ಸಾಹಿತ್ಯ – ರಫೀಕ್ ಅಹಮದ್ – ಅರಿಯತರಿಯತೆ (ಅಯ್ಯಪ್ಪನಂ ಕೋಶಿಯಂ)
ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) – ಶಹಬಾಜ್ ಅಮಾನ್ – ಆಕಾಶಮಾಯವಳೆ (ವೆಲ್ಲಂ)
ಅತ್ಯುತ್ತಮ ಹಿನ್ನೆಲೆ ಗಾಯಕಿ (ಹೆಣ್ಣು) – ಕೆ.ಎಸ್.ಚಿತ್ರ-
67 th FilmFare South 2022