KGF 2 ವಿಶ್ವಾದ್ಯಂತ ಸಂಚಲನ ಸೃಷ್ಟಿಸಿದ ಸಿನಿಮಾ,… ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರ್ ತೋರಿಸಿಕೊಟ್ಟು ಬಾಕ್ಸ್ ಆಫೀಸ್ ನಡುಗಿಸಿದ್ದ ಯಶ್ ನಟನೆಯ ಸಿನಿಮಾದ ಹವಾ , ಕ್ರೇಜ್ ಈಗ ಕಡಿಮೆಯಾಗಿದೆ.. 1000 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ..
ಆದ್ರೆ ಥಿಯೇಟರ್ ನಲ್ಲಿ ಇನ್ನೂ ರಾಕಿ ಭಾಯ್ ಹವಾ ನಿಂತಿಲ್ಲ… ಹೊರ ರಾಜ್ಯದಲ್ಲಿ ಈಗಲೂ ಥಿಯೇಟರ್ ಗಳಲ್ಲಿ ರಾಕಿ ಭಾಯ್ ಆರ್ಭಟಿಸುತ್ತಿದ್ದಾರೆ..
ಹೌದು..! ಏಪ್ರಿಲ್ 14 ಕ್ಕೆ ರಿಲೀಸ್ ಆದ KGF 2 ಈಗಲೂ ಹೊರರಾಜ್ಯದಲ್ಲಿ ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ..
ಸಿನಿಮಾಗಳು ಥಿಯೇಟರ್ ಗಳಲ್ಲಿ ರೀ ರಿಲೀಸ್ ಆಗುವುದು ಏನೂ ಹೊಸ ವಿಚಾರವೇನಲ್ಲ.. ಆದ್ರೆ ಓಟಿಟಿಗೂ ಬಂದು ಟಿವಿಯಲ್ಲೂ ಪ್ರಸಾರಗೊಂಡ ಮೇಲೂ ಥಿಯೇಟರ್ ಗಳಲ್ಲಿ ರಿಲೀಸ್ ಆಗುವುದು ಹೆಮ್ಮೆಯ ವಿಚಾರವೇ..
ಸಿನಿಮಾ ಬಂದು 6 ತಿಂಗಳೇ ಕಳೆದಿದೆ.. ಆದ್ರೆ ಹಿಂದಿಗೆ ಡಬ್ ಆಗಿರುವ ಕನ್ನಡ ಸಿನಿಮಾವೊಂದು 6 ತಿಂಗಳ ನಂತರವೂ ಥಿಯೇಟರ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದ್ರಲ್ಲೂ ಪ್ರತಿದಿನ 4 ಶೋ ಪ್ರದರ್ಶನ ಕಾಣುತ್ತಿದೆ..
ಮಹಾರಾಷ್ಟ್ರದ ಬಿವಂದಿ ನಜ್ ರಾನ ಥಿಯೇಟರ್‌ನಲ್ಲಿ KGF – 2 ಸಿನಿಮಾ ಈಗಲೂ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಸಿನಿಮಾ ವೀಕ್ಷಿಸುತ್ತಿದ್ದಾರೆ.